ನನ್ನ ನೆಚ್ಚಿನ ಕ್ರಿಕೆಟಿಗ ಕೆಎಲ್ ರಾಹುಲ್ ಅಲ್ಲ, ಈ ಚೇಸ್ ಮಾಸ್ಟರ್ ಎಂದ ಸುನೀಲ್ ಶೆಟ್ಟಿ

Actor Suniel Shetty favourite cricketer: ಅತ್ಯಂತ ಅಚ್ಚರಿಯ ವಿಷಯವೆಂದರೆ ಸುನೀಲ್ ಶೆಟ್ಟಿ ಅವರ ನೆಚ್ಚಿನ ಕ್ರಿಕೆಟಿಗ ಕೆಎಲ್ ರಾಹುಲ್ ಅಲ್ಲವಂತೆ. ಅಷ್ಟೇ ಅಲ್ಲದೆ, ತಮ್ಮ ನೆಚ್ಚಿನ ಆಟಗಾರನ ಹೆಸರನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ.  

Written by - Bhavishya Shetty | Last Updated : Nov 1, 2023, 10:42 PM IST
    • ಸುನೀಲ್ ಶೆಟ್ಟಿ ಅವರ ನೆಚ್ಚಿನ ಕ್ರಿಕೆಟಿಗ ಕೆಎಲ್ ರಾಹುಲ್ ಅಲ್ಲವಂತೆ
    • ತಮ್ಮ ನೆಚ್ಚಿನ ಆಟಗಾರನ ಹೆಸರನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ
    • ಅಥಿಯಾ ಶೆಟ್ಟಿ ಕೆಎಲ್ ರಾಹುಲ್ ಅವರನ್ನು ಮದುವೆಯಾಗಿದ್ದಾರೆ
ನನ್ನ ನೆಚ್ಚಿನ ಕ್ರಿಕೆಟಿಗ ಕೆಎಲ್ ರಾಹುಲ್ ಅಲ್ಲ, ಈ ಚೇಸ್ ಮಾಸ್ಟರ್ ಎಂದ ಸುನೀಲ್ ಶೆಟ್ಟಿ  title=
Suniel Shetty Favourite Cricketer

Actor Suniel Shetty favourite cricketer: ಬಾಲಿವುಡ್ ಹಿರಿಯ ನಟ ಸುನೀಲ್ ಶೆಟ್ಟಿಗೆ ಸಿಕ್ಕಾಪಟ್ಟೆ ಕ್ರಿಕೆಟ್ ಪ್ರೀತಿಯಿದೆ. ಆಗಾಗ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಭಾರತ ಕ್ರಿಕೆಟ್ ತಂಡವನ್ನು ಹೊಗಳುವುದನ್ನು ಕಾಣಬಹುದು. ಇನ್ನು ಸುನಿಲ್ ಶೆಟ್ಟಿ ಅವರ ಮಗಳು ಅಥಿಯಾ ಶೆಟ್ಟಿ, ಭಾರತೀಯ ವಿಕೆಟ್ ಕೀಪರ್ ಬ್ಯಾಟ್ಸ್‌’ಮನ್ ಕೆಎಲ್ ರಾಹುಲ್ ಅವರನ್ನು ಮದುವೆಯಾಗಿದ್ದಾರೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ 49ನೇ ಸೆಂಚುರಿಗಾಗಿ ಕಾತುರದಿಂದ ಕಾಯುತ್ತಿದ್ದಾನೆ ಪಾಕಿಸ್ತಾನ ಈ ಸ್ಟಾರ್ ಬ್ಯಾಟ್ಸ್’ಮನ್

ಆದರೆ ಅತ್ಯಂತ ಅಚ್ಚರಿಯ ವಿಷಯವೆಂದರೆ ಸುನೀಲ್ ಶೆಟ್ಟಿ ಅವರ ನೆಚ್ಚಿನ ಕ್ರಿಕೆಟಿಗ ಕೆಎಲ್ ರಾಹುಲ್ ಅಲ್ಲವಂತೆ. ಅಷ್ಟೇ ಅಲ್ಲದೆ, ತಮ್ಮ ನೆಚ್ಚಿನ ಆಟಗಾರನ ಹೆಸರನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ.  

ಇತ್ತೀಚಿನ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಪ್ರಸ್ತುತ ಭಾರತ ತಂಡದಲ್ಲಿ ನನ್ನ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿ ಏಕೆಂದರೆ ಅವರು ಚೇಸ್ ಮಾಸ್ಟರ್ ಆಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. “ ರಾಹುಲ್ ನನ್ನ ಮಗನಿದ್ದಂತೆ, ಕುಟುಂಬದ ವಿಷಯಕ್ಕೆ ಬಂದಾಗ ಇಷ್ಟಪಡುವುದು ಮತ್ತು ಇಷ್ಟಪಡದಿರುವುದು ಬರುವುದಿಲ್ಲ. ನನಗೆ ಅಹಾನ್ ಮತ್ತು ಕೆಎಲ್ ಇಬ್ಬರೂ ಪುತ್ರರೇ..” ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿಶ್ವಕಪ್’ನಲ್ಲಿ ಟೀಂ ಇಂಡಿಯಾದ ದೊಡ್ಡ ದೌರ್ಬಲ್ಯ ಈ ಆಟಗಾರ…!- ಪಾಕ್ ಆಟಗಾರನ ಬಹಿರಂಗ ಹೇಳಿಕೆ ವೈರಲ್

ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಮತ್ತು ನಟಿ ಅಥಿಯಾ ಶೆಟ್ಟಿ ಇದೇ ವರ್ಷದ ಆರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಲ್ಲಿ ಪ್ರಮುಖ ಗಣ್ಯರಿಗಷ್ಟೇ ಆಹ್ವಾನ ನೀಡಲಾಗಿತ್ತು. ಅಂದಹಾಗೆ  ಈ ವಿವಾಹವನ್ನು ದಕ್ಷಿಣ ಭಾರತದ ಥೀಮ್‌’ನಲ್ಲಿ ಆಯೋಜಿಸಲಾಗಿತ್ತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News