Suryakumar Yadav: ಮನದನ್ನೆಯ ಆ ಮಾತುಗಳಿಗೆ 3 ಪದದಲ್ಲಿ ಉತ್ತರಿಸಿದ ಮಿ.360: ಸಖತ್ ರೊಮ್ಯಾಂಟಿಕ್ ಆಗಿದೆ ಸಂಭಾಷಣೆ

Suryakumar Yadav Wife Devisha Shetty: ಸೂರ್ಯಕುಮಾರ್ ಯಾದವ್ ಅವರ ಪತ್ನಿ ದೇವಿಶಾ ಶೆಟ್ಟಿ 1993 ರಲ್ಲಿ ಮುಂಬೈನಲ್ಲಿ ಜನಿಸಿದರು. ಸೂರ್ಯ ಮತ್ತು ಅವರು ಕಾಲೇಜಿನಲ್ಲಿ ಭೇಟಿಯಾಗಿದ್ದರು. ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ದೇವಿಶಾ ಅವರ ನೃತ್ಯಕ್ಕೆ ಮನಸೋತ ಸೂರ್ಯ, ಅವರನ್ನೇ ಮದುವೆಯಾಗಲು ನಿರ್ಧರಿಸಿದ್ದರು

Written by - Bhavishya Shetty | Last Updated : Jan 9, 2023, 02:06 PM IST
    • ಮೈದಾನದ ಸುತ್ತಾ ಬ್ಯಾಟ್ ಬೀಸುತ್ತಿದ್ದ ಸೂರ್ಯ ಮತ್ತೊಮ್ಮೆ ಟೀಂ ಇಂಡಿಯಾದ ಮಿ.360 ಎಂಬುದನ್ನು ಸಾಬೀತುಪಡಿಸಿದ್ದರು
    • ಪತಿ ಸೂರ್ಯಕುಮಾರ್ ಶತಕ ಬಾರಿಸುತ್ತಿದ್ದಂತೆ ಪತ್ನಿ ದೇವಿಶಾ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ
    • ಇದಕ್ಕೆ ಸೂರ್ಯಕುಮಾರ್ ಯಾದವ್ 3 ಪದಗಳಲ್ಲಿ ಉತ್ತರ ನೀಡಿದ್ದಾರೆ.
Suryakumar Yadav: ಮನದನ್ನೆಯ ಆ ಮಾತುಗಳಿಗೆ 3 ಪದದಲ್ಲಿ ಉತ್ತರಿಸಿದ ಮಿ.360: ಸಖತ್ ರೊಮ್ಯಾಂಟಿಕ್ ಆಗಿದೆ ಸಂಭಾಷಣೆ title=
Suryakumar Yadav

Suryakumar Yadav Wife Devisha Shetty: ಶ್ರೀಲಂಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಬಿರುಸಿನ ಇನ್ನಿಂಗ್ಸ್ ಆಡುವ ಮೂಲಕ ಎಲ್ಲರ ಮನ ಗೆದ್ದಿದ್ದರು. ಮೈದಾನದ ಸುತ್ತಾ ಬ್ಯಾಟ್ ಬೀಸುತ್ತಿದ್ದ ಸೂರ್ಯ ಮತ್ತೊಮ್ಮೆ ಟೀಂ ಇಂಡಿಯಾದ ಮಿ.360 ಎಂಬುದನ್ನು ಸಾಬೀತುಪಡಿಸಿದ್ದರು. ಈ ಪಂದ್ಯದಲ್ಲಿ ಸೂರ್ಯ ಬಾರಿಸಿದ ಶತಕ, ಟಿ20 ಕ್ರಿಕೆಟ್‌ನಲ್ಲಿ ಅವರು ಬಾರಿಸಿದ ಮೂರನೇ ಶತಕವಾಗಿದೆ. ಇದಾದ ಬಳಿಕ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಇನ್ನೊಂದೆಡೆ ಪತಿ ಸೂರ್ಯಕುಮಾರ್ ಶತಕ ಬಾರಿಸುತ್ತಿದ್ದಂತೆ ಪತ್ನಿ ದೇವಿಶಾ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕೆ ಸೂರ್ಯಕುಮಾರ್ ಯಾದವ್ 3 ಪದಗಳಲ್ಲಿ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: Suryakumar Yadav: ಶತಕ ಬಾರಿಸುತ್ತಿದ್ದಂತೆ ಕೊಹ್ಲಿ-ರಾಹುಲ್ ಸಂಭ್ರಮಾಚರಣೆ: ಪೋಸ್ಟ್ ಹಾಕಿ ಮಿ.360ಗೆ ಶುಭಕೋರಿದ ಲೆಜೆಂಡ್ಸ್

ಸೂರ್ಯಕುಮಾರ್ ಯಾದವ್ ಶತಕ ಬಾರಿಸಿದ ನಂತರ ಸೂರ್ಯಕುಮಾರ್ ಯಾದವ್ ಅವರ ಪತ್ನಿ ದೇವಿಶಾ ಶೆಟ್ಟಿ ಅವರ ಫೋಟೋಗಳನ್ನು Instagram ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳ ಜೊತೆಗೆ “ವರ್ಣಿಸಲು ಯಾವುದೇ ಪದವಿಲ್ಲ. ನಿಮ್ಮ ಬಗ್ಗೆ ಹೆಮ್ಮೆ ಇದೆ ನನ್ನ ಪ್ರೀತಿಯೇ... ಹಾಗೇ ಮುಂದುವರೆಯಿರಿ” ಎಂದು ಬರೆದುಕೊಂದುಕೊಂಡಿದ್ದಾರೆ. ಇದಕ್ಕೆ ಸೂರ್ಯ “ಐ ಲವ್ ಯೂ..” ಎನ್ನುವ ಮೂಲಕ ಉತ್ತರ ನೀಡಿದ್ದಾರೆ.

 

ಸೂರ್ಯಕುಮಾರ್ ಯಾದವ್ ಮತ್ತು ದೇವಿಶಾ 5 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದು, ನಂತರ 2016 ರಲ್ಲಿ ವಿವಾಹವಾದರು. ದೇವಿಶಾ ಶೆಟ್ಟಿ ಕುಟುಂಬ ಕರ್ನಾಟಕದ ಮಂಗಳೂರು ಮೂಲದವರು.

ಸೂರ್ಯಕುಮಾರ್ ಯಾದವ್ ಅವರ ಪತ್ನಿ ದೇವಿಶಾ ಶೆಟ್ಟಿ 1993 ರಲ್ಲಿ ಮುಂಬೈನಲ್ಲಿ ಜನಿಸಿದರು. ಸೂರ್ಯ ಮತ್ತು ಅವರು ಕಾಲೇಜಿನಲ್ಲಿ ಭೇಟಿಯಾಗಿದ್ದರು. ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ದೇವಿಶಾ ಅವರ ನೃತ್ಯಕ್ಕೆ ಮನಸೋತ ಸೂರ್ಯ, ಅವರನ್ನೇ ಮದುವೆಯಾಗಲು ನಿರ್ಧರಿಸಿದ್ದರು.

ಇದನ್ನೂ ಓದಿ: Suryakumar Yadav : ಸೂರ್ಯಕುಮಾರ್ ಯಾದವ್ ಫಿಟ್ನೆಸ್ ಸೀಕ್ರೆಟ್ ಏನು ಗೊತ್ತಾ? ಇಲ್ಲಿದೆ ನೋಡಿ

ಸೂರ್ಯಕುಮಾರ್ ಸ್ಪೋಟಕ ಪ್ರದರ್ಶನ:

ಸೂರ್ಯಕುಮಾರ್ ಯಾದವ್ ಶ್ರೀಲಂಕಾ ವಿರುದ್ಧ 51 ಎಸೆತಗಳಲ್ಲಿ 112 ರನ್ ಬಾರಿಸಿದ್ದಾರೆ. ಇವರ ಬ್ಯಾಟಿಂಗ್ ನೋಡಿ ಎದುರಾಳಿ ಬೌಲರ್ ಗಳು ಭಯಭೀತರಾಗಿದ್ದರು. ಅವರಿಂದಲೇ ಟೀಂ ಇಂಡಿಯಾ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಭಾರತ ತಂಡದ ಅತಿದೊಡ್ಡ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದರು. ಐಸಿಸಿ ಟಿ20 ಶ್ರೇಯಾಂಕದಲ್ಲಿ ಸೂರ್ಯ ಮೊದಲ ಸ್ಥಾನದಲ್ಲಿದ್ದಾರೆ. 2022 ರಲ್ಲಿ, ಅವರು T20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಟೀಂ ಇಂಡಿಯಾ ಪರ 45 ಟಿ20 ಪಂದ್ಯಗಳಲ್ಲಿ 1578 ರನ್ ಗಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News