West Indies vs India, 5th T20I: ಮಿಂಚಿದ ಬ್ರಾಂಡನ್ ಕಿಂಗ್, ವೆಸ್ಟ್ ಇಂಡೀಸ್ ಗೆ 3-2 ಅಂತರದಲ್ಲಿ ಟಿ-20 ಸರಣಿ ಗೆಲುವು

ಇಲ್ಲಿನ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್ ನಡೆದ ಐದನೇ ಟಿ ೨೦ ಪಂದ್ಯದಲ್ಲಿ ಬ್ರಾಂಡನ್ ಕಿಂಗ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತದ ವಿರುದ್ಧ ಎಂಟು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.ಆ ಮೂಲಕ ೩- ೨ ಅಂತರದಿಂದ ಟಿ೨೦ ಸರಣಿಯನ್ನು ತನ್ನದಾಗಿಸಿಕೊಂಡಿದೆ.

Written by - Manjunath N | Last Updated : Aug 14, 2023, 04:01 AM IST
  • ಟೀಮ್ ಇಂಡಿಯಾ ನೀಡಿದ ೧೬೬ ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡಿಸ್ ತಂಡವು ಇನ್ನೂ ೧೨ ಎಸೆತಗಳು ಇರುವಂತೆಯೇ ಗೆಲುವಿನ ಗುರಿಯನ್ನು ತಲುಪಿತು.
  • ವೆಸ್ಟ್ ಇಂಡೀಸ್ ತಂಡದ ಪರವಾಗಿ ಬ್ರಾಂಡನ್ ಕಿಂಗ್ ಕೇವಲ ೫೫ ಎಸೆಗಳಲ್ಲಿ ಆರು ಸಿಕ್ಸರ್ ಹಾಗೂ ಐದು ಬೌಂಡರಿಗಳ ನೆರವಿನಿಂದ ಬರೋಬ್ಬರಿ ೮೫ ರನ್ ಗಳಿಸಿದರು.
  • ವೆಸ್ಟ್ ಇಂಡೀಸ್ ತಂಡವು ಕೇವಲ ೧೮ ಓವರ್ ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ಗೆಲುವಿನ ಗುರಿಯನ್ನು ತಲುಪಿತು.
West Indies vs India, 5th T20I: ಮಿಂಚಿದ ಬ್ರಾಂಡನ್ ಕಿಂಗ್, ವೆಸ್ಟ್ ಇಂಡೀಸ್ ಗೆ 3-2  ಅಂತರದಲ್ಲಿ ಟಿ-20 ಸರಣಿ ಗೆಲುವು title=
Photo: X

ಫ್ಲೋರಿಡಾ: ಇಲ್ಲಿನ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್ ನಡೆದ ಐದನೇ ಟಿ ೨೦ ಪಂದ್ಯದಲ್ಲಿ ಬ್ರಾಂಡನ್ ಕಿಂಗ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತದ ವಿರುದ್ಧ ಎಂಟು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.ಆ ಮೂಲಕ ೩- ೨ ಅಂತರದಿಂದ ಟಿ೨೦ ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡವು ೨೦ ಓವರ್ ಗಳಲ್ಲಿ ೯ ವಿಕೆಟ್ ಗಳನ್ನು ಕಳೆದುಕೊಂಡು ೧೬೫ ರನ್ ಗಳನ್ನು ಗಳಿಸಿತು.ಟೀಮ್ ಇಂಡಿಯಾದ ಪರವಾಗಿ ಸೂರ್ಯ ಕುಮಾರ್ ಯಾದವ್ ೪೫ ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್ ಗಳ ನೆರವಿನಿಂದಾಗಿ ೬೧ ರನ್ ಗಳಿಸಿದರು. ಇವರಿಗೆ ಸಾಥ್ ನೀಡಿದ ತಿಲಕ್ ವರ್ಮಾ ೨೭ ರನ್ ಗಳಿಸಿದರು.

ಟೀಮ್ ಇಂಡಿಯಾ ನೀಡಿದ ೧೬೬ ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡಿಸ್ ತಂಡವು ಇನ್ನೂ ೧೨ ಎಸೆತಗಳು ಇರುವಂತೆಯೇ ಗೆಲುವಿನ ಗುರಿಯನ್ನು ತಲುಪಿತು. ವೆಸ್ಟ್ ಇಂಡೀಸ್ ತಂಡದ ಪರವಾಗಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಬ್ರಾಂಡನ್ ಕಿಂಗ್ ಕೇವಲ ೫೫ ಎಸೆಗಳಲ್ಲಿ ಆರು ಸಿಕ್ಸರ್ ಹಾಗೂ ಐದು ಬೌಂಡರಿಗಳ ನೆರವಿನಿಂದ ಬರೋಬ್ಬರಿ ೮೫ ರನ್ ಗಳಿಸಿದರು.ಇನ್ನೊಂದೆಡೆಗೆ ನಿಕೊಲಸ್ ಪೂರಣ್ ೩೫ ಎಸೆತಗಳಲ್ಲಿ ೪೫ ರನ್ ಗಳನ್ನು ಗಳಿಸುವ ಮೂಲಕ ವೆಸ್ಟ್ ಇಂಡೀಸ್ ತಂಡವು ಕೇವಲ ೧೮ ಓವರ್ ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ಗೆಲುವಿನ ಗುರಿಯನ್ನು ತಲುಪಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News