ಭಾರತ -ಕೀವಿಸ್ ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೆ ಕೃಪೆ ತೋರಲಿದ್ದಾನೆಯೇ ವರುಣ..?

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್‌ನ ಮೊದಲ ಸೆಮಿಫೈನಲ್‌ನಲ್ಲಿ ಭಾರತವು ನ್ಯೂಜಿಲೆಂಡ್‌ ತಂಡವನ್ನುಎದುರಿಸಲಿದೆ. ಆದರೆ ಈಗ ಈ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Last Updated : Jul 9, 2019, 02:12 PM IST
 ಭಾರತ -ಕೀವಿಸ್ ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೆ ಕೃಪೆ ತೋರಲಿದ್ದಾನೆಯೇ ವರುಣ..?   title=
file photo

ನವದೆಹಲಿ: ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್‌ನ ಮೊದಲ ಸೆಮಿಫೈನಲ್‌ನಲ್ಲಿ ಭಾರತವು ನ್ಯೂಜಿಲೆಂಡ್‌ ತಂಡವನ್ನುಎದುರಿಸಲಿದೆ. ಆದರೆ ಈಗ ಈ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಕುರಿತಾಗಿ ಹೇಳಿಕೆ ನೀಡಿರುವ ಬ್ರಿಟಿಷ್ ಹವಾಮಾನ ಇಲಾಖೆ ' ಮಳೆಯ ಮೋಡಗಳು ಅದರಲ್ಲೂ ವಿಶೇಷವಾಗಿ ಬೆಳಿಗ್ಗೆ ಕುಂಬ್ರಿಯಾ ಮತ್ತು ಉತ್ತರ ಲಂಕಾಷೈರ್ನ ಭಾಗಗಳಲ್ಲಿ ಏಕಾಏಕಿ ಭಾರವಾಗಿರುತ್ತವೆ. ಆದರೆ ಮಧ್ಯಾಹ್ನದ ಸಮಯದಲ್ಲಿ ಬೆಳಕು ಮತ್ತು ತೇವವನ್ನು ಒಳಗೊಂಡಿರುತ್ತದೆ. ಇಲ್ಲಿನ ಗರಿಷ್ಟ ಗರಿಷ್ಠ ತಾಪಮಾನ 21 ° C, "ಎಂದು ಹವಾಮಾನ ಇಲಾಖೆ ಹೇಳಿದೆ. ಬಿಬಿಸಿ ಹವಾಮಾನ ವರದಿಯ ಪ್ರಕಾರ: “ಮುಂದಿನ ವಾರವು ಸಾಕಷ್ಟು ಬದಲಾಗಬಲ್ಲದು ಮತ್ತು ನಮ್ಮಲ್ಲಿ ಸ್ವಲ್ಪ ಮಳೆಯಾಗಲಿದೆ.ಈಗಾಗಲೇ ಅಟ್ಲಾಂಟಿಕ್‌ನ ಈಶಾನ್ಯದಲ್ಲಿ ಇಳಿಯುತ್ತಿದೆ' ಎಂದು ಹೇಳಿದೆ.

ಐಸಿಸಿ ವಿಶ್ವಕಪ್ 2019 ರ ಸಮಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮೊದಲ ಬಾರಿಗೆ ಎದುರಾಗುತ್ತಿದ್ದು ಮುಖಾಮುಖಿಯಾಗಲಿವೆ. ಇದಕ್ಕೂ ಮೊದಲು ಲೀಗ್ ಹಂತದಲ್ಲಿ ಮಳೆಯ ಕಾರಣ ಪಂದ್ಯ ರದ್ದಾದ ಹಿನ್ನಲೆಯಲ್ಲಿ ಎರಡು  ತಂಡಗಳಿಗೆ ಪಾಯಿಂಟ್ ಗಳನ್ನು ಹಂಚಲಾಗಿತ್ತು.

Trending News