ನವದೆಹಲಿ: ಪಾಕಿಸ್ತಾನದ ಮಾಜಿ ನಾಯಕ ಜಾವೇದ್ ಮಿಯಾಂದಾದ್ ಅವರು ಬೆಂಗಳೂರಿನ ಹೋಟೆಲ್ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಮತ್ತು ಭಾರತೀಯ ಕ್ರಿಕೆಟ್ ತಂಡ ಒಟ್ಟಿಗೆ ಹೋಳಿ ಆಡಿದ ನೆನಪಿಗೆ ಜಾರಿದರು.
ಯುಟ್ಯೂಬ್ ವಿಡಿಯೋವೊಂದರಲ್ಲಿ ಮಾತನಾಡಿದ ಮಿಯಾಂದಾದ್, ಪಾಕಿಸ್ತಾನದ ಭಾರತ ಪ್ರವಾಸದಿಂದ ಆಟಗಾರರಿಗೆ ಹೋಟೆಲ್ನಲ್ಲಿ ಹೆಚ್ಚಿನ ಕೆಲಸವಿರಲಿಲ್ಲ , ಆದ್ದರಿಂದ ಅವರು ತಮ್ಮ ಸಮಯವನ್ನು ಪರಸ್ಪರ ಬಣ್ಣಗಳನ್ನು ಹಚ್ಚಿಕೊಂಡು ಪರಸ್ಪರ ಕೊಳದಲ್ಲಿ ಎಸೆಯುತ್ತಿದ್ದರು ಎಂದು ತಮ್ಮ ಹಳೆಯ ನೆನಪನ್ನು ಸ್ಮರಿಸಿಕೊಂಡಿದ್ದಾರೆ.
ಬೆಂಗಳೂರು ಟೆಸ್ಟ್ ಸಮಯದಲ್ಲಿ ಎರಡೂ ತಂಡಗಳು ಒಂದೇ ಹೋಟೆಲ್ನಲ್ಲಿ ತಂಗಿದ್ದವು. ಅಲ್ಲಿ ಹೆಚ್ಚು ಮಾಡಲು ಇರಲಿಲ್ಲ. ಸಂಜೆ, ನಾವೆಲ್ಲರೂ ಒಟ್ಟಿಗೆ ಸಮಯ ಕಳೆಯುತ್ತಿದ್ದೆವು. ಆಗ ಅದು ಹೋಳಿ ಸಮಯವಾಗಿತ್ತು ' ಎಂದು ಮಿಯಾಂದಾದ್ ನೆನಪಿಸಿಕೊಂಡರು. 'ಜನರು ಹೋಟೆಲ್ನಲ್ಲಿ ಹೋಳಿ ಆಡಲು ಪ್ರಾರಂಭಿಸಿದರು. ನಾವು ಇಮ್ರಾನ್ ಖಾನ್ ಅವರ ಕೋಣೆಗೆ ಪ್ರವೇಶಿಸಿ ಎಲ್ಲರೂ ಪರಸ್ಪರ ಬಣ್ಣಗಳನ್ನು ಹಾಕುತ್ತಿದ್ದರು ಎಂದು ನನಗೆ ನೆನಪಿದೆ. ಈ ಸಂದರ್ಭದಲ್ಲಿ ನಾವು ಭಾರತೀಯ ಕ್ರಿಕೆಟಿಗರನ್ನು ಸಹ ಬಿಡಲಿಲ್ಲ' ಎಂದು ಅವರು ಹೇಳಿದರು.
ಇದೇ ವೇಳೆ ಮಾಜಿ ಬಲಗೈ ಬ್ಯಾಟ್ಸ್ಮನ್ ರವಿಶಾಸ್ಟ್ರಿಯನ್ನು ಕೋಣೆಯಿಂದ ಎತ್ತಿಕೊಂಡು ಈಜುಕೊಳಕ್ಕೆ ಎಸೆದಿದ್ದನ್ನು ನೆನಪಿಸಿಕೊಂಡರು. 'ರವಿಶಾಸ್ತ್ರಿ ತನ್ನನ್ನು ಮರೆಮಾಚುತ್ತಿದ್ದ. ನಾವು ಅವನ ಕೋಣೆಗೆ ಪ್ರವೇಶಿಸಿ ಅವನನ್ನು ಎತ್ತಿಕೊಂಡು ಕೊಳದಲ್ಲಿ ಎಸೆದಿದ್ದೇವು. ನಾವೆಲ್ಲರೂ ನಿಜವಾಗಿಯೂ ಒಟ್ಟಿಗೆ ಆನಂದಿಸಿದ್ದೇವೆ, "ಅವರು ಹೇಳಿದರು.
ಮಿಯಾಂದಾದ್ ಇದನ್ನು ಪಾಕಿಸ್ತಾನದ ಅತ್ಯುತ್ತಮ ಪ್ರವಾಸ ಎಂದು ಕರೆದರು ಮತ್ತು ಪ್ರತಿಯೊಬ್ಬರೂ ಪರಸ್ಪರರ ಉತ್ಸವಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು. “ಇದು ಪಾಕಿಸ್ತಾನದ ಅತ್ಯುತ್ತಮ ಪ್ರವಾಸವಾಗಿತ್ತು. ನಮ್ಮನ್ನು ಎಲ್ಲೆಡೆ ಆಹ್ವಾನಿಸಲಾಯಿತು. ನಾವೆಲ್ಲರೂ ಒಟ್ಟಾಗಿ ಹೋಳಿ ಆಚರಿಸಿದ್ದೇವೆ. ಪ್ರತಿಯೊಬ್ಬರೂ ಪರಸ್ಪರರ ಹಬ್ಬಗಳಲ್ಲಿ ಭಾಗವಹಿಸಬೇಕು. ನಾನು ಅದರಲ್ಲಿ ಯಾವುದೇ ಸಮಸ್ಯೆ ಕಾಣುವುದಿಲ್ಲ, ”ಅವರು ಹೇಳಿದರು. 'ನನ್ನನ್ನು ಯಾವಾಗಲೂ ನೀರಿನಲ್ಲಿ ಎಸೆಯಲಾಗುತ್ತಿತ್ತು. ನಾವು ಒಬ್ಬರನ್ನೊಬ್ಬರು ಕೊಳದಲ್ಲಿ ತಳ್ಳುತ್ತಿದ್ದೆವು. ನಾವು ತುಂಬಾ ಖುಷಿಪಡುತ್ತಿದ್ದೆವು, ಎಂದು ಹೇಳಿದರು.