Watch: LIVE ಪಂದ್ಯದಲ್ಲೇ ಮೈದಾನಕ್ಕೆ ನುಗ್ಗಿದ 10 ಅಡಿ ಉದ್ದದ ಹಾವು! ದಿಕ್ಕಾಪಾಲಾಗಿ ಓಡಿದ ಆಟಗಾರರು

Snake Viral Video: ವಿಡಿಯೋದಲ್ಲಿ ಮೈದಾನಕ್ಕೆ ಹಾವು ಪ್ರವೇಶಿಸುತ್ತಿರುವುದನ್ನು ಕಾಣಬಹುದು. ಆಗ ಶಾಕಿಬ್ ಅಲ್ ಹಸನ್ ಅಂಪೈರ್ ಬಳಿ, ಅಲ್ಲಿ ಹಾವು ಬರುತ್ತಿದೆ ಎಂದು ತೋರಿಸಿದ್ದಾರೆ.

Written by - Bhavishya Shetty | Last Updated : Aug 1, 2023, 07:51 AM IST
    • ಗಾಲೆ ಟೈಟಾನ್ಸ್ ಮತ್ತು ಡಂಬುಲ್ಲಾ ಔರಾ ನಡುವಿನ ಪಂದ್ಯ ಸೂಪರ್ ಓವರ್‌ ನಲ್ಲಿ ಕೊನೆಗೊಂಡಿತು.
    • ಈ ಪಂದ್ಯದ ವೇಳೆ 10 ಅಡಿ ಉದ್ದದ ಬೃಹತ್ ಹಾವೊಂದು ಮೈದಾನಕ್ಕೆ ನುಗ್ಗಿದೆ.
    • ಭಾರತದ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಈ ಘಟನೆಯನ್ನು ಟ್ವೀಟ್ ಮಾಡಿದ್ದಾರೆ
Watch: LIVE ಪಂದ್ಯದಲ್ಲೇ ಮೈದಾನಕ್ಕೆ ನುಗ್ಗಿದ 10 ಅಡಿ ಉದ್ದದ ಹಾವು! ದಿಕ್ಕಾಪಾಲಾಗಿ ಓಡಿದ ಆಟಗಾರರು title=
snake in Cricket Ground

Snake Viral Video: ಲಂಕಾ ಪ್ರೀಮಿಯರ್ ಲೀಗ್ (LPL) 2023 ಪ್ರಸ್ತುತ ಶ್ರೀಲಂಕಾದಲ್ಲಿ ನಡೆಯುತ್ತಿದೆ. ಸೋಮವಾರ ಅಂದರೆ ಜುಲೈ 31ರಂದು ಲೀಗ್‌ ನಲ್ಲಿ ಗಾಲೆ ಟೈಟಾನ್ಸ್ ಮತ್ತು ಡಂಬುಲ್ಲಾ ಔರಾ ತಂಡಗಳ ನಡುವೆ ಪಂದ್ಯ ನಡೆಯುತ್ತಿತ್ತು. ಈ ಪಂದ್ಯದ ವೇಳೆ 10 ಅಡಿ ಉದ್ದದ ಬೃಹತ್ ಹಾವೊಂದು ಮೈದಾನಕ್ಕೆ ನುಗ್ಗಿದೆ. ಹಾವನ್ನು ಕಂಡ ಆಟಗಾರರು ಭಯಭೀತರಾಗಿ ದಿಕ್ಕಾಪಾಲಾಗಿ ಓಡಿದ್ದಾರೆ.

ಇದನ್ನೂ ಓದಿ: Watch: ಪೂರ್ಣ ಫಿಟ್ನೆಸ್ ನೊಂದಿಗೆ ಸಜ್ಜಾದ ಬುಮ್ರಾ...! ಬೂಮ್ ಬೂಮ್ ಕಾತುರದಲ್ಲಿ ಟೀಮ್ ಇಂಡಿಯಾ ..!

ಗಾಲೆ ಟೈಟಾನ್ಸ್ ಮತ್ತು ಡಂಬುಲ್ಲಾ ಔರಾ ನಡುವಿನ ಪಂದ್ಯ ಸೂಪರ್ ಓವರ್‌ ನಲ್ಲಿ ಕೊನೆಗೊಂಡಿತು. ರೋಚಕ ಮುಖಾಮುಖಿಯಲ್ಲಿ, ಗೌಲ್ ಟೈಟಾನ್ಸ್ ವಿಜಯಶಾಲಿಯಾಯಿತು. ಪಂದ್ಯದಲ್ಲಿ ದಂಬುಲ್ಲಾದ ಇನ್ನಿಂಗ್ಸ್‌ ನಲ್ಲಿ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಬೌಲಿಂಗ್ ಮಾಡುತ್ತಿದ್ದರು. ಅದೇ ಸಂದರ್ಭದಲ್ಲಿ ಮೈದಾನಕ್ಕೆ ಹಾವು ನುಗ್ಗಿದೆ. ಅದನ್ನು ಕಂಡು ಅಭಿಮಾನಿಗಳು, ಕಾಮೆಂಟೇಟರ್‌ ಗಳು ಹಾಗೂ ಆಟಗಾರರು ಬೆಚ್ಚಿಬಿದ್ದಿದ್ದಾರೆ.

ಈ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮೈದಾನಕ್ಕೆ ಹಾವು ಪ್ರವೇಶಿಸುತ್ತಿರುವುದನ್ನು ಕಾಣಬಹುದು. ಆಗ ಶಾಕಿಬ್ ಅಲ್ ಹಸನ್ ಅಂಪೈರ್ ಬಳಿ, ಅಲ್ಲಿ ಹಾವು ಬರುತ್ತಿದೆ ಎಂದು ತೋರಿಸಿದ್ದಾರೆ. ತಕ್ಷಣವೇ ಅಂಪೈರ್ ಮೈದಾನದಿಂದ ಹೊರಗೆ ಓಡಿಸಿದ್ದಾರೆ.

ಭಾರತದ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಈ ಘಟನೆಯನ್ನು ಟ್ವೀಟ್ ಮಾಡಿದ್ದಾರೆ. “ ಹಾವು ಮತ್ತೆ ಬಂದಿದೆ” ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.

ಇನ್ನು ಪಂದ್ಯದ ಕುರಿತು ಮಾತನಾಡುವುದಾದರೆ, ಮೊದಲು ಬ್ಯಾಟ್ ಮಾಡಿದ ಗಾಲೆ ಟೈಟಾನ್ಸ್ 5 ವಿಕೆಟ್ ನಷ್ಟದಲ್ಲಿ 180 ರನ್ ಗಳಿಸಿತ್ತು. ಗಾಲೆ ಟೈಟಾನ್ಸ್ ಪರ ಭಾನುಕ ರಾಜಪಕ್ಸೆ 48 ಮತ್ತು ನಾಯಕ ದಸುನ್ ಶನಕ 42 ರನ್ ಗಳಿಸಿದರು.

ಇದನ್ನೂ ಓದಿ: Weight Loss Tips: ವ್ಯಾಯಾಮ ಮಾಡಲು ಉತ್ತಮ ಸಮಯ ಯಾವುದು ಗೊತ್ತೇ ?

180 ರನ್‌ ಗಳಿಗೆ ಪ್ರತ್ಯುತ್ತರ ನೀಡಲು ಬಂದ ದಂಬುಲ್ಲಾ ಔರಾ ತಂಡಕ್ಕೆ 20 ಓವರ್‌ ಗಳಲ್ಲಿ 180 ರನ್ ಗಳಿಸಲಷ್ಟೇ ಶಕ್ತವಾಯಿತು. ಬಳಿಕ ಪಂದ್ಯದ ಫಲಿತಾಂಶ ಸೂಪರ್ ಓವರ್‌ನಲ್ಲಿ ಹೊರಬಿತ್ತು.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News