Viral Video: ಪುಟ್ಟ ಹುಡುಗಿಯ ಜಿಮ್ನಾಸ್ಟಿಕ್ಸ್ ಕೌಶಲ್ಯಕ್ಕೆ ವೀರೇಂದ್ರ ಸೆಹ್ವಾಗ್ ಫಿದಾ..!

ಚಿಕ್ಕ ಹುಡುಗಿಯ ಅದ್ಭುತ ಜಿಮ್ನಾಸ್ಟಿಕ್ಸ್  ಕಸರತ್ತಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Written by - Puttaraj K Alur | Last Updated : Aug 25, 2021, 11:18 AM IST
  • ಪುಟ್ಟ ಹುಡುಗಿ ತನ್ನ ಜಿಮ್ನಾಸ್ಟಿಕ್ ಕೌಶಲ್ಯದಿಂದ ನೋಡುಗರನ್ನು ಬೆರಗೊಳಿಸಿದ್ದಾಳೆ
  • ಅದ್ಭುತ ಜಿಮ್ನಾಸ್ಟಿಕ್ಸ್ ಕಸರತ್ತಿಗೆ ವೀರೇಂದ್ರ ಸೆಹ್ವಾಗ್, ನಾಡಿಯಾ ಕೊಮೆನೆಸಿ ಫಿದಾ
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆದ ಬಾಲೆಯ ಜಿಮ್ನಾಸ್ಟಿಕ್ಸ್ ವಿಡಿಯೋ
Viral Video: ಪುಟ್ಟ ಹುಡುಗಿಯ ಜಿಮ್ನಾಸ್ಟಿಕ್ಸ್ ಕೌಶಲ್ಯಕ್ಕೆ ವೀರೇಂದ್ರ ಸೆಹ್ವಾಗ್ ಫಿದಾ..! title=
ಪುಟ್ಟ ಹುಡುಗಿಯ ಅದ್ಭುತ ಜಿಮ್ನಾಸ್ಟಿಕ್ಸ್ ಕಸರತ್ತು (Photo Courtesy: Twitter/@virendersehwag)

ನವದೆಹಲಿ: ಚಿಕ್ಕ ಹುಡುಗಿಯ ಅದ್ಭುತ ಜಿಮ್ನಾಸ್ಟಿಕ್ಸ್(Gymnastics) ಕಸರತ್ತಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಪುಟ್ಟ ಹುಡುಗಿ ತನ್ನ ಜಿಮ್ನಾಸ್ಟಿಕ್ ಕೌಶಲ್ಯದಿಂದ ನೋಡುಗರನ್ನು ಬೆರಗೊಳಿಸಿದ್ದಾಳೆ. ತದೇಕಚಿತ್ತದಿಂದ ನೋಡುವಂತೆ ಮಾಡುವ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಈ ಮಧ್ಯೆ ಟೀಂ ಇಂಡಿಯಾದ ಮಾಜಿ ಆರಂಭಿಕ ಬ್ಯಾಟ್ಸಮನ್ ವೀರೇಂದ್ರ ಸೆಹ್ವಾಗ್ ಪುಟ್ಟ ಹುಡುಗಿಯ ಜಿಮ್ನಾಸ್ಟಿಕ್ಸ್ ಕೌಶಲ್ಯಕ್ಕೆ ಮಾರುಹೋಗಿದ್ದಾರೆ.

ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪುಟ್ಟ ಹುಡುಗಿಯ ಜಿಮ್ನಾಸ್ಟಿಕ್ಸ್ ಕೌಶಲ್ಯದ ವಿಡಿಯೋ ಹಂಚಿಕೊಂಡಿರುವ ವೀರೇಂದ್ರ ಸೆಹ್ವಾಗ್(Virender Sehwag), ‘ಮನುಷ್ಯ ಬಯಸಿದರೆ ಎಲ್ಲವನ್ನೂ ಸಾಧಿಸಬಹುದು’ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ. 1.11 ನಿಮಿಷವಿರುವ ಈ ವಿಡಿಯೋ ಕ್ಲಿಪ್ ನಲ್ಲಿ ಪುಟ್ಟ ಹುಡುಗಿ ತನ್ನ ವಿಶೇಷ ಕೌಶಲ್ಯಗಳಿಂದ ಗಮನ ಸೆಳೆಯುತ್ತಾಳೆ. ವಿವಿಧ ರೀತಿಯ ಕಸರತ್ತುಗಳನ್ನು ಅದ್ಭುತವಾಗಿ ಪ್ರದರ್ಶಿಸಿ ನೋಡುಗರಲ್ಲಿ ಅಚ್ಚರಿ ಮೂಡಿಸಿದ್ದಾಳೆ.

ಇದನ್ನೂ ಓದಿ: ICC- ಈ ಆಟಗಾರನ ಮೇಲೆ ನಿಷೇಧ ಹೇರಿದ ಐಸಿಸಿ, ಯಾಕಿಷ್ಟು ದೊಡ್ಡ ಶಿಕ್ಷೆ ಎಂದು ತಿಳಿಯಿರಿ!

‘ಇದು ನಂಬಲಾಗದ ದೃಶ್ಯ, ಆ ವಯಸ್ಸಿನಲ್ಲಿ ಪುಟ್ಟ ಹುಡುಗಿಯ ಶಿಸ್ತು ಮತ್ತು ಏಕಾಗ್ರತೆ ... ಅದ್ಭುತ!’ ಅಂತಾ ಟ್ವಿಟರ್ ಬಳಕೆದಾರರೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 5 ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತೆ ಮತ್ತು ರೊಮೇನಿಯನ್ ಜಿಮ್ನಾಸ್ಟ್ ನಾಡಿಯಾ ಕೊಮೆನೆಸಿ(Nadia Comaneci) ಕೂಡ ಪುಟ್ಟ ಹುಡುಗಿಯ ಜಿಮ್ನಾಸ್ಟಿಕ್ಸ್ ಕೌಶಲ್ಯಕ್ಕೆ ಫಿದಾ ಆಗಿದ್ದಾರೆ. ಅಸಾಧಾರಣ ಕೌಶಲ್ಯಗಳನ್ನು ಪ್ರದರ್ಶಿಸಿದ ಪುಟ್ಟ ಹುಡುಗಿಗೆ ಪ್ರಶಂಸೆ ವ್ಯಕ್ತಪಡಿಸಿರುವ  ಅವರು, ‘ವಾವ್ಹ್… ಅದ್ಭುತ ಪ್ರತಿಭೆ’ ಅಂತಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ ‘ಬ್ಲ್ಯಾಕ್ ವಾಟರ್’ ಕುಡಿಯುತ್ತಾರಂತೆ! ಇದರ ಬೆಲೆ ಎಷ್ಟು ಗೊತ್ತಾ?

ಪುಟ್ಟ ಹುಡುಗಿ ತನ್ನ ವಿಶೇಷ ಕೌಶಲ್ಯ ಮತ್ತು ಕಸರತ್ತಿನಿಂದ ಸಾಮಾಜಿಕ ಜಾಲತಾಣ(Social Media)ಗಳಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾಳೆ. ಈ ವಿಡಿಯೋ ನೋಡಿದ ಪ್ರತಿಯೊಬ್ಬರೂ ಕೂಡ ‘ಅದ್ಭುತ’ ಎನ್ನದೆ ಇರಲಾರರು. ಯಾಕೆಂದರೆ ಅಷ್ಟು ಸಣ್ಣ ವಯಸ್ಸಿನಲ್ಲಿ ಆ ಹುಡುಗಿ ರೂಢಿಸಿಕೊಂಡಿರುವ ಕೌಶಲ್ಯ ನೋಡುಗರಲ್ಲಿ ಅಚ್ಚರಿ ಮೂಡಿಸುವಂತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News