VIDEO: ವಿರಾಟ್ ಸ್ಲೆಡ್ಜಿಂಗ್‌ ವಿಡಿಯೋ ವೈರಲ್‌, ನಗುತ್ತಲೇ ಈ ಆಟಗಾರನನ್ನು ಗೇಲಿ ಮಾಡಿದ ಕೊಹ್ಲಿ!

Virat Kohli Sledging Video: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ತುಂಬಾ ಆಕ್ರಮಣಕಾರಿ ರೀತಿಯಲ್ಲಿ ಕಾಣುತ್ತಾರೆ. ಪಂದ್ಯ ಗೆಲ್ಲಲಿ ಅಥವಾ ಸೋಲಲಿ ವಿರಾಟ್ ಶೈಲಿ ಬದಲಾಗುವುದಿಲ್ಲ. ಅವರು ಪ್ರಸ್ತುತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದಾರೆ. ಈ ನಡುವೆ ವಿರಾಟ್‌ಗೆ ಸಂಬಂಧಿಸಿದ ವಿಡಿಯೋವೊಂದು ಸಾಕಷ್ಟು ವೈರಲ್ ಆಗುತ್ತಿದೆ.  

Written by - Chetana Devarmani | Last Updated : Jul 16, 2023, 05:30 PM IST
  • ವೆಸ್ಟ್ ಇಂಡೀಸ್ - ಭಾರತ ಟೆಸ್ಟ್‌ ಪಂದ್ಯ
  • ವಿರಾಟ್ ಕೊಹ್ಲಿ ಸ್ಲೆಡ್ಜಿಂಗ್‌ ವಿಡಿಯೋ ವೈರಲ್‌
  • ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ
VIDEO: ವಿರಾಟ್ ಸ್ಲೆಡ್ಜಿಂಗ್‌ ವಿಡಿಯೋ ವೈರಲ್‌, ನಗುತ್ತಲೇ ಈ ಆಟಗಾರನನ್ನು ಗೇಲಿ ಮಾಡಿದ ಕೊಹ್ಲಿ!     title=
Virat Kohli

Virat Kohli Video, IND vs WI 1st Test : ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿ ಆಕ್ರಮಣಕಾರಿ ಶೈಲಿಗೆ ಬಹಳ ಪ್ರಸಿದ್ಧರಾಗಿದ್ದಾರೆ. ಪಂದ್ಯ ಗೆಲ್ಲಲಿ, ಸೋಲಲಿ, ಅವರು ನಾಯಕರಾಗಲಿ, ಇಲ್ಲದಿರಲಿ ವಿರಾಟ್ ಶೈಲಿ ಎಂದಿಗೂ ಬದಲಾಗುವುದಿಲ್ಲ. ವಿರಾಟ್ ಪ್ರಸ್ತುತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದು, ಡೊಮಿನಿಕಾದ ವಿಂಡ್ಸರ್ ಪಾರ್ಕ್‌ನಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್ ಪಂದ್ಯವನ್ನು ಟೀಮ್ ಇಂಡಿಯಾ 141 ರನ್‌ಗಳಿಂದ ಗೆದ್ದಿದೆ. ಈ ನಡುವೆ ವಿರಾಟ್‌ಗೆ ಸಂಬಂಧಿಸಿದ ವಿಡಿಯೋವೊಂದು ಸಾಕಷ್ಟು ವೈರಲ್ ಆಗುತ್ತಿದೆ.

ಡೊಮಿನಿಕಾದಲ್ಲಿ ನಡೆಯುತ್ತಿರುವ ಸರಣಿಯ ಆರಂಭಿಕ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನಾಯಕ ಕ್ರೈಗ್ ಬ್ರಾಥ್‌ವೈಟ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ವಿಂಡೀಸ್ ತಂಡದ ಮೊದಲ ಇನಿಂಗ್ಸ್ ಕೇವಲ 150 ರನ್‌ಗಳನ್ನು ಗಳಿಸಿತು. ನಂತರ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 5 ವಿಕೆಟ್ ಪಡೆದರು. ಇದಾದ ಬಳಿಕ ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗೆ 421 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಯಶಸ್ವಿ ಜೈಸ್ವಾಲ್ 171 ರನ್‌ಗಳ ಅಮೂಲ್ಯ ಇನ್ನಿಂಗ್ಸ್ ಆಡಿದರು. ನಾಯಕ ರೋಹಿತ್ 103 ಮತ್ತು ವಿರಾಟ್ 76 ರನ್ ಗಳಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಅಶ್ವಿನ್ 7 ವಿಕೆಟ್ ಕಬಳಿಸಿದ್ದು, ವಿಂಡೀಸ್ ತಂಡ ಕೇವಲ 130 ರನ್ ಗಳಿಸಲಷ್ಟೇ ಶಕ್ತವಾಗಿತ್ತು.

ಇದನ್ನೂ ಓದಿ: “RCBಗಾಗಿ 8 ವರ್ಷ ಆಡಿದೆ, ಆದ್ರೆ ಹೊರಹಾಕುವಾಗ ಒಂದು ಫೋನ್ ಕೂಡ ಮಾಡಿಲ್ಲ”: ಸ್ಟಾರ್ ಸ್ಪಿನ್ನರ್ ಬೇಸರ

ಮೊದಲ ಟೆಸ್ಟ್ ನಲ್ಲಿ ಟೀಂ ಇಂಡಿಯಾ ಗೆಲುವಿನ ಸನಿಹದಲ್ಲಿದ್ದಾಗ ವಿರಾಟ್ ಕೊಹ್ಲಿ ಎದುರಾಳಿ ತಂಡದೊಂದಿಗೆ ಸ್ಲೆಡ್ಜಿಂಗ್ ಮಾಡಲು ಯತ್ನಿಸಿದ್ದರು. ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಜೋಮೆಲ್ ವಾರಿಕನ್ ಅವರ ಬ್ಯಾಟಿಂಗ್ ನೋಡಿ ಕೊಹ್ಲಿ ಅವರನ್ನು ತೆಗಳಿದ್ದಾರೆ. ವಾಸ್ತವವಾಗಿ, ಆಗ ಭಾರತಕ್ಕೆ ಗೆಲ್ಲಲು ಕೇವಲ ಒಂದು ವಿಕೆಟ್ ಬೇಕಾಗಿತ್ತು.  

 

 

ವಿರಾಟ್ ವೆಸ್ಟ್ ಇಂಡೀಸ್ ನ ಈ ನಂಬರ್ 11 ಬ್ಯಾಟ್ಸ್ ಮನ್ ನನ್ನು ಗೇಲಿ ಮಾಡಿದ್ದಾರೆ. ರವೀಂದ್ರ ಜಡೇಜಾ ಅವರ ಓವರ್‌ನಲ್ಲಿ ವಾರಿಕನ್ ವಿಚಿತ್ರವಾದ ಶಾಟ್ ಆಡಿದರು, ಅದರ ಮೇಲೆ ವಿರಾಟ್ ಕೂಡ ಕಾಮೆಂಟ್ ಮಾಡಿದರು. ವಿರಾಟ್ ಲೈವ್ ಮ್ಯಾಚ್‌ನಲ್ಲಿಯೇ , ಏನು ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ಗೇಲಿ ಮಾಡಿದರು. ಸ್ಟಂಪ್ ಮೈಕ್ ವಿರಾಟ್ ಧ್ವನಿಯನ್ನು ಸೆರೆ ಹಿಡಿದಿದೆ. ಅವರ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: 22ರ ಹರೆಯದ ಈ ಕ್ರಿಕೆಟಿಗನಿಗೆ ಮರುಜೀವ ಕೊಟ್ಟ BCCI: ಕೊಹ್ಲಿ ಗೆಳೆಯನಿಗೆ Team Indiaದಲ್ಲಿ ಸಿಕ್ಕೇಬಿಡ್ತು ಸ್ಥಾನ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News