Virat Kohli: ಅನುಷ್ಕಾ ಫೋಟೋಗೆ ವಾರ್ನರ್ ಮಾಡಿದ್ರು ಅಚ್ಚರಿಯ ಕಮೆಂಟ್! ಟ್ರೋಲಿಗರ ಬಾಯಿಮುಚ್ಚಿಸಿದ ಕೊಹ್ಲಿಯ ರಿಯಾಕ್ಷನ್

ಇನ್ನು ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಹಂಚಿಕೊಂಡಿರುವ ಫೋಟೋಗಳನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ. ಇದೀಗ ವಿರಾಟ್ ಕೊಹ್ಲಿ ತಮ್ಮ ಪತ್ನಿ ನಟಿ ಅನುಷ್ಕಾ ಶರ್ಮಾ ಅವರ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

Written by - Bhavishya Shetty | Last Updated : Sep 3, 2022, 09:47 AM IST
    • ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಅವರ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ
    • ಈ ಫೋಟೋಗೆ ಕಾಮೆಂಟ್ ಮಾಡಿದ ಆಸ್ಟ್ರೇಲಿಯಾದ ಕ್ರಿಕೆಟರ್ ಡೇವಿಡ್ ವಾರ್ನರ್
    • ಈ ಕಮೆಂಟ್ ಗೆ ಅಭಿಮಾನಿಗಳು ಮುಗಿಬಿದ್ದಿದ್ದು, ಟ್ರೋಲರ್ ಗಳು ಹರಿಹಾಯ್ದಿದ್ದಾರೆ
Virat Kohli: ಅನುಷ್ಕಾ ಫೋಟೋಗೆ ವಾರ್ನರ್ ಮಾಡಿದ್ರು ಅಚ್ಚರಿಯ ಕಮೆಂಟ್! ಟ್ರೋಲಿಗರ ಬಾಯಿಮುಚ್ಚಿಸಿದ ಕೊಹ್ಲಿಯ ರಿಯಾಕ್ಷನ್ title=
Virat Kohli

ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ವಿಶ್ವದ ಮೂಲೆ ಮೂಲೆಗಳಲ್ಲಿಯೂ ತನ್ನ ವಿಭಿನ್ನ ಬ್ಯಾಟಿಂಗ್ ಸ್ಟೈಲ್ ನಿಂದ ಅಭಿಮಾನಿಗಳ ಮನಗೆದ್ದಿದ್ದಾರೆ. ಅಷ್ಟೇ ಅಲ್ಲದೆ ದಾಕಲೆಯ ರನ್ ಗಳನ್ನೂ ಗಳಿಸಿದ್ದಾರೆ. ಕೊಹ್ಲಿ ತಮ್ಮ ಲಯದಲ್ಲಿದ್ದಾಗ, ಅವರು ಯಾವುದೇ ಬೌಲಿಂಗ್ ದಾಳಿಯನ್ನು ಎದುರಿಸುವ ಶಕ್ತಿ ಹೊಂದಿದ್ದಾರೆ. 

ಇದನ್ನೂ ಓದಿ: Team India : ಟೀಂ ಇಂಡಿಯಾಗೆ ಬಿಗ್ ಶಾಕ್ : ಗಾಯದ ಕಾರಣ ಸರಣಿಯಿಂದ ಈ ಬೌಲರ್ ಔಟ್!

ಇನ್ನು ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಹಂಚಿಕೊಂಡಿರುವ ಫೋಟೋಗಳನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ. ಇದೀಗ ವಿರಾಟ್ ಕೊಹ್ಲಿ ತಮ್ಮ ಪತ್ನಿ ನಟಿ ಅನುಷ್ಕಾ ಶರ್ಮಾ ಅವರ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಆಸ್ಟ್ರೇಲಿಯಾದ ಕ್ರಿಕೆಟರ್ ಡೇವಿಡ್ ವಾರ್ನರ್ ಕಾಮೆಂಟ್ ಮಾಡಿದ್ದಾರೆ. ಈ ಕಮೆಂಟ್ ಗೆ ಅಭಿಮಾನಿಗಳು ಮುಗಿಬಿದ್ದಿದ್ದು, ಟ್ರೋಲರ್ ಗಳು ಹರಿಹಾಯ್ದಿದ್ದಾರೆ. ಈ ಬಳಿಕ ಕೊಹ್ಲಿ ಟ್ರೋಲರ್‌ಗಳಿಗೆ ಉತ್ತರ ನೀಡಿದ್ದಾರೆ.

ಸೂಪರ್‌ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಅವರ ಫೋಟೋವನ್ನು ಹಂಚಿಕೊಳ್ಳುವಾಗ ‘ಮೈ ವರ್ಲ್ಡ್’ ಎಂದು ಶೀರ್ಷಿಕೆ ನೀಡಿದ್ದಾರೆ. ಇದಕ್ಕೆ, ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಈ ಫೋಟೋಗೆ ಕಾಮೆಂಟ್ ಮಾಡಿ, 'ಅದೃಷ್ಟ ವ್ಯಕ್ತಿ, ಸ್ನೇಹಿತ' ಎಂದು ಬರೆದಿದ್ದಾರೆ. ಈ ಕಾಮೆಂಟ್ ಮಾಡಲು ವಾರ್ನರ್‌ಗೆ ಅಗಾಧ ಕಾರಣವಿತ್ತು, ಅಷ್ಟೇ ಅಲ್ಲದೆ ಸ್ವಲ್ಪ ಹೆಚ್ಚು ಅರ್ಥವಿತ್ತು. ಇದಕ್ಕೂ ಮುನ್ನ ವಾರ್ನರ್ ಮಾಡಿದ ಕಮೆಂಟ್ ಅಪಾರ್ಥ ಉಂಟು ಮಾಡಿ, ವಿರುಷ್ಕಾ ಅಭಿಮಾನಿಗಳ ಕೋಪಕ್ಕೆ ಕಾರಣವಾದರು.

 
 
 
 

 
 
 
 
 
 
 
 
 
 
 

A post shared by Virat Kohli (@virat.kohli)

 

 

ಕೋಪಗೊಂಡ ಅಭಿಮಾನಿಗಳು ಡೇವಿಡ್ ವಾರ್ನರ್ ಅವರ ಕಾಮೆಂಟ್ ಅನ್ನು ಸ್ಪಷ್ಟಪಡಿಸುವಂತೆ ಕೇಳಿದರು. ಇದಾದ ನಂತರ ಕಾಮೆಂಟ್‌ನಲ್ಲಿ ಪ್ರತಿಕ್ರಿಯಿಸಿದ ವಾರ್ನರ್, 'ನಾವು ನಮ್ಮನ್ನು ಬೆಂಬಲಿಸುವ ಪತ್ನಿಯನ್ನು ಪಡೆಯಲು ಅದೃಷ್ಟ ಮಾಡಿದ್ದೇವೆ. ಇದು ನಾವು ಆಸ್ಟ್ರೇಲಿಯಾದಲ್ಲಿ ಬಳಸುವ ಸಾಮಾನ್ಯ ಮಾತುಗಳು. ನನ್ನೊಂದಿಗೆ ಕ್ಯಾಂಡಿಸ್ (ವಾರ್ನರ್ ಪತ್ನಿ) ಇರುವುದು ನನ್ನ ಅದೃಷ್ಟ. ನಾವು ಇತರರಿಗೆ ಹೇಳುವಾಗ, ನೀವು ಅದೃಷ್ಟವಂತರು ಎಂದು ನಾವು ಹೇಳುತ್ತೇವೆ” ಎಂದು ವಾರ್ನರ್ ಸ್ಪಷ್ಟನೆ ನೀಡಿದ್ದಾರೆ.

ಅಭಿಮಾನಿಗಳು ಡೇವಿಡ್ ವಾರ್ನರ್ ಅವರನ್ನು ಟ್ರೋಲ್ ಮಾಡಿದ ನಂತರ ವಿರಾಟ್ ಕೊಹ್ಲಿ ಅವರ ರಕ್ಷಣೆಗೆ ಬಂದು ಅಭಿಮಾನಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೊಹ್ಲಿ ತಮ್ಮ ಉತ್ತರದಿಂದ ಎಲ್ಲರ ಮನ ಗೆದ್ದಿದ್ದಾರೆ. ಡೇವಿಡ್ ವಾರ್ನರ್ ಗೆ ಉತ್ತರಿಸಿರುವ ವಿರಾಟ್ ಕೊಹ್ಲಿ, ‘ಐ ನೋ ಮೇಟ್( ನನಗೆ ಗೊತ್ತು ಗೆಳೆಯ)’ ಎಂದು ಬರೆದುಕೊಂಡಿದ್ದಾರೆ. 

ಇದನ್ನೂ ಓದಿ: Asia Cup 2022: ಪಾಕ್ ಪತ್ರಕರ್ತ ಕೇಳಿದ ಪ್ರಶ್ನೆಗೆ ಬಿದ್ದು ಬಿದ್ದು ನಕ್ಕ ಸೂರ್ಯಕುಮಾರ್ ಯಾದವ್! ಅಂತಹದ್ದೇನಂದ್ರು?

ವಿರಾಟ್ ಕೊಹ್ಲಿ ಪ್ರಸ್ತುತ ಏಷ್ಯಾ ಕಪ್ 2022 ರಲ್ಲಿ ಭಾರತ ತಂಡದ ಭಾಗವಾಗಿದ್ದಾರೆ. ಹಾಂಕಾಂಗ್ ವಿರುದ್ಧ ಭರ್ಜರಿ ಅರ್ಧಶತಕ ಬಾರಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News