Virat Kohli : ಕೊಹ್ಲಿ ನಿವೃತ್ತಿ ಪ್ಲಾನ್? ಈ ಪೋಸ್ಟ್ ನೋಡಿ ಭಯಭೀತರಾದ ಫ್ಯಾನ್ಸ್

ಟೀಂ ಇಂಡಿಯಾ ನ್ಯೂಜಿಲೆಂಡ್ ಪ್ರವಾಸದಲ್ಲಿದೆ. ಇದೆಲ್ಲದರ ನಡುವೆ ವಿರಾಟ್ ಕೊಹ್ಲಿ ನಿವೃತ್ತಿ ಸುದ್ದಿ ಜೋರಾಗಿ ಸಡ್ಡು ಮಾಡುತ್ತಿದೆ. ಕೊಹ್ಲಿ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಪೋಸ್ಟ್ ಒಂದು ಅಭಿಮಾನಿಗಳಲ್ಲಿ ವಿರಾಟ್ ನಿವೃತ್ತಿಯ ಭಯ ಹುಟ್ಟಿಸಿದೆ.

Written by - Channabasava A Kashinakunti | Last Updated : Nov 27, 2022, 01:48 PM IST
  • ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ
  • ವಿರಾಟ್ ಕೊಹ್ಲಿ ನಿವೃತ್ತಿ ಸುದ್ದಿ ಜೋರಾಗಿ ಸದ್ದು ಮಾಡುತ್ತಿದೆ
  • ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ ವಿರಾಟ್
Virat Kohli : ಕೊಹ್ಲಿ ನಿವೃತ್ತಿ ಪ್ಲಾನ್? ಈ ಪೋಸ್ಟ್ ನೋಡಿ ಭಯಭೀತರಾದ ಫ್ಯಾನ್ಸ್ title=

Virat Kohli : ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಸದ್ಯ ಮೈದಾನದಿಂದ ದೂರ ಉಳಿದಿದ್ದಾರೆ. 2022ರ ಟಿ20 ವಿಶ್ವಕಪ್ ಬಳಿಕ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಹಾಗೆ, ಟೀಂ ಇಂಡಿಯಾ ನ್ಯೂಜಿಲೆಂಡ್ ಪ್ರವಾಸದಲ್ಲಿದೆ. ಇದೆಲ್ಲದರ ನಡುವೆ ವಿರಾಟ್ ಕೊಹ್ಲಿ ನಿವೃತ್ತಿ ಸುದ್ದಿ ಜೋರಾಗಿ ಸದ್ದು ಮಾಡುತ್ತಿದೆ. ಕೊಹ್ಲಿ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಪೋಸ್ಟ್ ಒಂದು ಅಭಿಮಾನಿಗಳಲ್ಲಿ ವಿರಾಟ್ ನಿವೃತ್ತಿಯ ಭಯ ಹುಟ್ಟಿಸಿದೆ.

ತಲ್ಲಣ ಮೂಡಿಸಿದ ಕೊಹ್ಲಿಯ ಈ ಪೋಸ್ಟ್ 

ಕೊಹ್ಲಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಒಂದು ಫೋಟೋ ಶೇರ್ ಮಾಡಿಕೊಂಡು, ಅಕ್ಟೋಬರ್ 23, 2022 ನನ್ನ ಹೃದಯದಲ್ಲಿ ಯಾವಾಗಲೂ ವಿಶೇಷವಾಗಿರುತ್ತದೆ. ಇಂತಹ ಶಕ್ತಿ ಕ್ರಿಕೆಟ್ ಆಟದಲ್ಲಿ ಹಿಂದೆಂದೂ ಕಂಡಿರಲಿಲ್ಲ. ಅದು ಎಷ್ಟು ಸುಂದರವಾದ ಸಂಜೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : Rain Stops IND vs NZ play: ಇಂಡೋ-ಕೀವಿಸ್ 2ನೇ ಏಕದಿನ ಪಂದ್ಯಕ್ಕೆ ವರುಣನಿಂದ ಅಡ್ಡಿ: ಬಲಿಯಾಗುತ್ತಾ ಟೀಂ ಇಂಡಿಯಾ ಕನಸು!

'ನಿವೃತ್ತಿಯ ಭಯ ಅಭಿಮಾನಿಗಳನ್ನು ಕಾಡುತ್ತಿದೆ'

ವಿರಾಟ್ ಕೊಹ್ಲಿ ಹಂಚಿಕೊಂಡಿರುವ ಈ ಫೋಟೋದಲ್ಲಿ ಅವರು ಮೈದಾನದಿಂದ ಪೆವಿಲಿಯನ್‌ಗೆ ಹಿಂತಿರುಗುತ್ತಿರುವುದನ್ನು ಕಾಣಬಹುದು. ವಿರಾಟ್ ಅವರ ಈ ಪೋಸ್ಟ್ ನಂತರ ಟ್ವೀಟ್‌ಗಳ ಮಹಾಪೂರವೇ ಹರಿದುಬಂದಿದೆ. ಅವರ ನಿವೃತ್ತಿಯ ಭಯ ಅಭಿಮಾನಿಗಳನ್ನು ಕಾಡತೊಡಗಿದೆ. ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಫ್ಯಾನ್ಸ್, 'ದಯವಿಟ್ಟು 2027 ರ ಮೊದಲು ನಿವೃತ್ತರಾಗಬೇಡಿ. ಮತ್ತೊಂದೆಡೆ, ಇನ್ನೊಬ್ಬ ಫ್ಯಾನ್ಸ್, 'ಅಣ್ಣ, ಈ ರೀತಿಯ ಪೋಸ್ಟ್ ಮಾಡಬೇಡಿ, ಇಮ್ಮ ನಿವೃತ್ತಿ ಸುದ್ದಿ ಕೇಳಿದ್ರೆ ಎಂದು ಹೃದಯ ಬಡಿತ ಹೆಚ್ಚಾಗುತ್ತದೆ' ಎಂದು ಬರೆದಿದ್ದಾರೆ. ಇದಲ್ಲದೇ, 'ಈ ಪೋಸ್ಟ್ ನಿಂದ ನೀವು ನನ್ನನ್ನು 10 ಸೆಕೆಂಡು ಹೆದರಿ ಬಿಟ್ಟೆ' ಎಂದು ಇನ್ನೊಬ್ಬ ಫ್ಯಾನ್ಸ್ ಬರೆದಿದ್ದಾರೆ.

ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ ವಿರಾಟ್

ಪಾಕಿಸ್ತಾನ ವಿರುದ್ಧದ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 82 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು. ಈ ಪಂದ್ಯದಲ್ಲಿ 160 ರನ್ ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಸ್ಕೋರ್ ಒಂದು ಬಾರಿಗೆ 4 ವಿಕೆಟ್ ನಷ್ಟಕ್ಕೆ 31 ರನ್ ಆಗಿತ್ತು. ಆದರೆ ವಿರಾಟ್ ಕೊಹ್ಲಿ ಈ ಪಂದ್ಯವನ್ನು ಭಾರತವನ್ನು ಸ್ವಂತವಾಗಿ ಗೆಲ್ಲುವಲ್ಲಿ ಯಶಸ್ವಿಯಾದರು. ಈ ಪಂದ್ಯದಲ್ಲಿ ಟೀಂ ಇಂಡಿಯಾ 4 ವಿಕೆಟ್‌ಗಳಿಂದ ಗೆದ್ದಿದೆ.

ಇದನ್ನೂ ಓದಿ : Gambhir on Suryakumar Yadav: ಟೆಸ್ಟ್ ಮಾದರಿಗೆ ಆಹ್ವಾನ ಸಾಧ್ಯತೆ: ಸೂರ್ಯಕುಮಾರ್ ಗೆ ಕ್ರಿಕೆಟ್ ದಿಗ್ಗಜರ ‘ಗಂಭೀರ’ ಸಲಹೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News