Shubman Gill : ಶುಭಮನ್ ಗಿಲ್ ಶತಕದ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ ಕೊಹ್ಲಿ!

Shubman Gill Century : ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 168 ರನ್‌ಗಳ ಜಯ ಸಾಧಿಸಿದೆ. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಟೀಂ ಇಂಡಿಯಾದ ಅತಿ ದೊಡ್ಡ ಗೆಲುವಾಗಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ.

Written by - Channabasava A Kashinakunti | Last Updated : Feb 2, 2023, 05:35 PM IST
  • ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯ
  • ಈ ಬಗ್ಗೆ ಕೊಹ್ಲಿ ಹೇಳಿದ್ದು ಹೀಗೆ
  • ಅಬ್ಬರದ ಇನ್ನಿಂಗ್ಸ್ ಆಡಿದ ಶುಭಮನ್ ಗಿಲ್
Shubman Gill : ಶುಭಮನ್ ಗಿಲ್ ಶತಕದ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ ಕೊಹ್ಲಿ! title=

 Virat Kohli On Shubman Gill Century : ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 168 ರನ್‌ಗಳ ಜಯ ಸಾಧಿಸಿದೆ. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಟೀಂ ಇಂಡಿಯಾದ ಅತಿ ದೊಡ್ಡ ಗೆಲುವಾಗಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಮೂರನೇ ಏಕದಿನ ಪಂದ್ಯವನ್ನು ಗೆದ್ದುಕೊಂಡಿರುವ ಟೀಂ ಇಂಡಿಯಾ 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ. ಮೂರನೇ ಏಕದಿನ ಪಂದ್ಯದಲ್ಲಿ ಶುಭಮನ್ ಗಿಲ್ ಬಿರುಸಿನ ಇನ್ನಿಂಗ್ಸ್ ಆಡಿ ಎಲ್ಲರ ಮನ ಗೆದ್ದಿದ್ದರು. ಇದೀಗ ಈ ಬಗ್ಗೆ ವಿರಾಟ್ ಕೊಹ್ಲಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. 

ಈ ಬಗ್ಗೆ ಕೊಹ್ಲಿ ಹೇಳಿದ್ದು ಹೀಗೆ

ಭವಿಷ್ಯದ ತಾರೆ ಇಲ್ಲಿದ್ದಾರೆ ಎಂದು ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದು ಕೊಂಡಿದ್ದಸ್ರು . ಅವರು ತಮ್ಮ ಮತ್ತು ಶುಭಮನ್ ಗಿಲ್ ಅವರ ಫೋಟೋವನ್ನು ಸಹ ಹಾಕಿದ್ದಾರೆ. ಕೊಹ್ಲಿ ವಿಶ್ವದ ಅತ್ಯುತ್ತಮ ಆಟಗಾರರೆಂದು ಪರಿಗಣಿಸಲ್ಪಟ್ಟಿದ್ದಾರೆ. ಟೀಂ ಇಂಡಿಯಾ ಪರ ಹಲವು ಪಂದ್ಯಗಳನ್ನು ಸ್ವಂತ ಬಲದಿಂದ ಗೆದ್ದಿದ್ದಾರೆ. ಇದೀಗ ಯುವ ಆಟಗಾರನನ್ನು ಹೊಗಳಿ ಎಲ್ಲರನ್ನೂ ತನ್ನ ಅಭಿಮಾನಿಯನ್ನಾಗಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : Team India : 2023 ರ ವಿಶ್ವಕಪ್‌ನಲ್ಲಿ ಆಡಲಿದ್ದಾರೆ ರೋಹಿತ್-ವಿರಾಟ್ ಈ ಶತ್ರು! 

ಅಬ್ಬರದ ಇನ್ನಿಂಗ್ಸ್ ಆಡಿದ ಶುಭಮನ್ ಗಿಲ್ 

ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡದ ಆರಂಭ ಅತ್ಯಂತ ಕಳಪೆಯಾಗಿತ್ತು. ಇಶಾನ್ ಕಿಶನ್ ಕೇವಲ ಒಂದು ರನ್ ಗಳಿಸಿ ಔಟಾದಾಗ. ಇದಾದ ನಂತರ ಶುಭಮನ್ ಗಿಲ್ ಅವರು ರಾಹುಲ್ ತ್ರಿಪಾಠಿ ಜೊತೆ ದೊಡ್ಡ ಜೊತೆಯಾಟವಾಡಿದರು. ಗಿಲ್ 63 ಎಸೆತಗಳಲ್ಲಿ ಏಳು ದೀರ್ಘ ಸಿಕ್ಸರ್‌ಗಳನ್ನು ಒಳಗೊಂಡ 126 ರನ್ ಗಳಿಸಿದರು. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳ ಅತ್ಯುತ್ತಮ ಸ್ಕೋರ್ ಇದಾಗಿದೆ.

ಗೆದ್ದು ಬಿಗಿದ ಟೀಮ್ ಇಂಡಿಯಾ

ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 234 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. ಶುಭಮನ್ ಗಿಲ್ ಹೊರತಾಗಿ ರಾಹುಲ್ ತ್ರಿಪಾಠಿ 22 ಎಸೆತಗಳಲ್ಲಿ 44 ರನ್ ಗಳಿಸಿ ಬಿರುಸಿನ ಆಟವಾಡಿದರು. ಇದಾದ ನಂತರ ಹಾರ್ದಿಕ್ ಪಾಂಡ್ಯ ಕೊನೆಯ ಓವರ್‌ನಲ್ಲಿ 30 ರನ್ ಗಳಿಸಿದರು. ಹಾರ್ದಿಕ್ ಬ್ಯಾಟಿಂಗ್ ಹೊರತಾಗಿ ಬೌಲಿಂಗ್ ಮೂಲಕ ಎಲ್ಲರ ಮನ ಗೆದ್ದರು. ಅವರು ತಮ್ಮ 4 ಓವರ್‌ಗಳಲ್ಲಿ 16 ರನ್‌ಗಳಿಗೆ 4 ವಿಕೆಟ್ ಪಡೆದರು.

ಇದನ್ನೂ ಓದಿ : Hanuma Vihari: ಬ್ಯಾಟಿಂಗ್ ವೇಳೆ ಎಡಗೈ ಮುರಿದರೂ ಒಂದೇ ಕೈಯಲ್ಲಿ 2 ಬೌಂಡರಿ ಸಿಡಿಸಿದ ಸ್ಟಾರ್ ಕ್ರಿಕೆಟಿಗ: ವಿಡಿಯೋ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News