ಸಿಡ್ನಿ ಟೆಸ್ಟ್: ಡ್ರಾ ನಂತರವೂ ಆಸ್ಟ್ರೇಲಿಯಾದಲ್ಲಿ ಇತಿಹಾಸ ಸೃಷ್ಟಿಸಿದ ಟೀಂ ಇಂಡಿಯಾ

ಸರಣಿಯಲ್ಲಿ 2-1 ಗೆಲುವು ಸಾಧಿಸಿದ ಭಾರತ.

Last Updated : Jan 7, 2019, 11:07 AM IST
ಸಿಡ್ನಿ ಟೆಸ್ಟ್: ಡ್ರಾ ನಂತರವೂ ಆಸ್ಟ್ರೇಲಿಯಾದಲ್ಲಿ ಇತಿಹಾಸ ಸೃಷ್ಟಿಸಿದ ಟೀಂ ಇಂಡಿಯಾ title=
Image Credits: Twitter/@cricketcomau

ಸಿಡ್ನಿ: ಮಳೆ ಕಾರಣದಿಂದಾಗಿ ಸಿಡ್ನಿ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯವಾಗಿದೆ. ಸಿಡ್ನಿ ಟೆಸ್ಟ್ ಡ್ರಾ ನಂತರವೂ ಟೀಂ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ 2-1 ಗೆಲುವು ಸಾಧಿಸಿತು. ವಿರಾಟ್​ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಆಸೀಸ್ ನೆಲದಲ್ಲಿ ಸರಣಿ ಗೆಲುವಿನ ನಗೆ ಬೀರಿದ್ದು, ಈ ಮೂಲಕ ಕಾಂಗುರೂಗಳ ನಾಡಲ್ಲಿ ಟೆಸ್ಟ್​ ಸರಣಿ ಗೆದ್ದ ಭಾರತದ ಪ್ರಪ್ರಥಮ ನಾಯಕ ಎಂಬ ಕೀರ್ತಿಗೆ ಕೊಹ್ಲಿ ಪಾತ್ರರಾಗಿದ್ದಾರೆ.

1947ರಿಂದ ಭಾರತ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್​ ಸರಣಿ​ ಆಡುತ್ತಿದೆ. ಆದರೆ, ಈವರೆಗೆ ಸರಣಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಭಾರತ ತಂಡ 1947-48ರಲ್ಲಿ ಲಾಲಾ ಅಮರನಾಥ್‌ ಅವರ ಸಾರಥ್ಯದಲ್ಲಿ ಮೊದಲ ಬಾರಿ ಆಸ್ಪ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಅಂದಿನಿಂದ ಇಂದಿನವರೆಗೂ ಒಟ್ಟಾರೆ 11 ಪ್ರಯತ್ನಗಳನ್ನು ನಡೆಸಿರುವ ಟೀಮ್‌ ಇಂಡಿಯಾ ಕಾಂಗರೂ ನೆಲದಲ್ಲಿ ಟೆಸ್ಟ್‌ ಸರಣಿ ಗೆಲ್ಲುವಲ್ಲಿ ವಿಫಲಗೊಂಡಿದೆ. 

ನಾಲ್ಕನೇ ದಿನದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 6 ರನ್ ಗಳಿಸಿದ್ದ ಆಸ್ಟ್ರೇಲಿಯಾ ಅಂತಿಮ ದಿನ ಸೋಲು ತಪ್ಪಿಸಾಲು ಹೋರಾಡಬೇಕಿತ್ತು. ಆದರೆ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ತವರು ನೆಲದಲ್ಲಿಯೇ 31 ವರ್ಷಗಳ ಬಳಿಕ ಫಾಲೋ ಆನ್ ಹೇರಿದ್ದ ಭಾರತ ತಂಡ ಇದೀಗ ಆಸಿಸ್ ನೆಲದಲ್ಲಿ ಸರಣಿ ಜಯದ ಮೂಲಕ ಅಮೋಘ ಜಯ ಸಾಧಿಸಿದೆ.

ಸರಣಿಯುದ್ದಕ್ಕೂ ಬ್ಯಾಟಿಂಗ್-ಬೌಲಿಂಗ್ ಸೇರಿದಂತೆ ಪಂದ್ಯದ ಎಲ್ಲ ವಿಭಾಗದಲ್ಲೂ ಟೀಮ್ ಇಂಡಿಯಾ ಶ್ರೇಷ್ಠ ಪ್ರದರ್ಶನ ಕಾಯ್ದುಕೊಂಡಿದೆ. ಏಳು ದಶಕಗಳ ಐತಿಹಾಸಿಕ ಕ್ಷಣದ ಸಾಧನೆಗೆ ಕೈಗನ್ನಡಿಯಾಗಿದೆ.

Trending News