/kannada/photo-gallery/shikanji-buttermilk-is-helpful-in-dissolving-stubborn-obesity-around-the-waist-249358 ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! 249358

ಏಷ್ಯಾದಲ್ಲೇ ಅತಿ ಹೆಚ್ಚು ಲೈಕ್ ಪಡೆದ ಪೋಸ್ಟ್ ಆಯ್ತು ವಿರಾಟ್ ಕೊಹ್ಲಿ ಶೇರ್ ಮಾಡಿದ ಆ ಫೋಟೋ!

Virat Kohli Instagram Post: 21 ದಶಲಕ್ಷಕ್ಕೂ ಹೆಚ್ಚು ಲೈಕ್‌’ಗಳನ್ನು ಗಳಿಸಿರುವ ಕೊಹ್ಲಿಯ ಪೋಸ್ಟ್‌’ನಲ್ಲಿ ಟೀಮ್ ಇಂಡಿಯಾ ತಮ್ಮ ವಿಜಯವನ್ನು ಆಚರಿಸುತ್ತಿದೆ. ಜೊತೆಗೆ "ಇದಕ್ಕಿಂತ ಉತ್ತಮ ದಿನವನ್ನು ಕನಸಲ್ಲೂ ಕಾಣಲು ಸಾಧ್ಯವಾಗಲಿಲ್ಲ.

Written by - Bhavishya Shetty | Last Updated : Jul 8, 2024, 04:54 PM IST
    • ಭಾರತ T20 ವಿಶ್ವಕಪ್ 2024ರ ಗೆಲುವನ್ನು ಆಚರಿಸುವ ಫೋಟೋ
    • ವಿರಾಟ್ ಕೊಹ್ಲಿ ತಮ್ಮ Instagramನಲ್ಲಿ ಶೇರ್ ಮಾಡಿಕೊಂಡಿದ್ದರು
    • ಏಷ್ಯಾದಲ್ಲಿ ಹೆಚ್ಚು ಲೈಕ್ ಪಡೆದ ಪೋಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರ
ಏಷ್ಯಾದಲ್ಲೇ ಅತಿ ಹೆಚ್ಚು ಲೈಕ್ ಪಡೆದ ಪೋಸ್ಟ್ ಆಯ್ತು ವಿರಾಟ್ ಕೊಹ್ಲಿ ಶೇರ್ ಮಾಡಿದ ಆ ಫೋಟೋ!  title=
File Photo

Virat Kohli Instagram Post: ಭಾರತ T20 ವಿಶ್ವಕಪ್ 2024ರ ಗೆಲುವನ್ನು ಆಚರಿಸುವ ಫೋಟೋ ಒಂದನ್ನು ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ Instagramನಲ್ಲಿ ಶೇರ್ ಮಾಡಿಕೊಂಡಿದ್ದರು. ಇದೀಗ ಆ ಪೋಸ್ಟ್ ದಾಖಲೆಗಳನ್ನು ಸೃಷ್ಟಿಸಿದ್ದಲ್ಲದೆ, ಏಷ್ಯಾದಲ್ಲಿ ಹೆಚ್ಚು ಲೈಕ್ ಪಡೆದ ಪೋಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ BTS ಆರ್ಮಿ ಮೆಂಬರ್ ವಿ (ಕಿಮ್ ಟೇಹ್ಯುಂಗ್) ದಾಖಲೆಯನ್ನು ಮುರಿದಿದ್ದಾರೆ.

ಇದನ್ನೂ ಓದಿ: ತನಗಿಂತ 10 ವರ್ಷ ಹಿರಿಯ ಯುವತಿ ಜೊತೆ ಅಭಿಷೇಕ್ ಶರ್ಮಾ ಡೇಟಿಂಗ್!? ಟೀಂ ಇಂಡಿಯಾ ಜೊತೆ ಸಂಬಂಧ ಹೊಂದಿದ ಈಕೆ ಬೇರಾರು ಅಲ್ಲ…

21 ದಶಲಕ್ಷಕ್ಕೂ ಹೆಚ್ಚು ಲೈಕ್‌’ಗಳನ್ನು ಗಳಿಸಿರುವ ಕೊಹ್ಲಿಯ ಪೋಸ್ಟ್‌’ನಲ್ಲಿ ಟೀಮ್ ಇಂಡಿಯಾ ತಮ್ಮ ವಿಜಯವನ್ನು ಆಚರಿಸುತ್ತಿದೆ. ಜೊತೆಗೆ "ಇದಕ್ಕಿಂತ ಉತ್ತಮ ದಿನವನ್ನು ಕನಸಲ್ಲೂ ಕಾಣಲು ಸಾಧ್ಯವಾಗಲಿಲ್ಲ. ದೇವರು ದೊಡ್ಡವನು… ನಾನು ಕೃತಜ್ಞತೆಯಿಂದ ತಲೆ ಬಾಗಿಸುತ್ತೇನೆ. ಕೊನೆಗೂ ಸಾಧಿಸಿದೆವು, ಜೈ ಹಿಂದ್” ಎಂದು ಬರೆದುಕೊಂಡಿದ್ದರು.

ಜೂನ್ 30 ರಂದು ಅಂದರೆ ಭಾರತವು T20 ವಿಶ್ವಕಪ್ 2024 ಗೆದ್ದ ಮರುದಿನ ಕೊಹ್ಲಿ ಈ ಪೋಸ್ಟ್ ಹಂಚಿಕೊಂಡಿದ್ದರು.  ಇದಲ್ಲದೆ, ಕೊಹ್ಲಿಯ ಪೋಸ್ಟ್ ಬಾಲಿವುಡ್ ಜೋಡಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ವಿವಾಹದ ಲೈಕ್ಸ್ ದಾಖಲೆಯನ್ನು ಹಿಂದಿಕ್ಕಿದೆ. ಈ ಮೂಲಕ ಭಾರತದಲ್ಲಿ ಅತಿ ಹೆಚ್ಚು ಇಷ್ಟಪಟ್ಟ ಪೋಸ್ಟ್ ಎಂಬ ಕೀರ್ತಿ ಪಡೆದಿದೆ.

ಇದನ್ನೂ ಓದಿ: ವಿರಾಟ್ ಜೊತೆ ಮದುವೆಗೆ ಮುಂಚೆಯೇ ತಾಯಿಯಾಗಿದ್ದೆ; ಅದಕ್ಕೆ ಈ ನಟನೇ ಕಾರಣ-ಅನುಷ್ಕಾ ಶರ್ಮಾ ಶಾಕಿಂಗ್ ಹೇಳಿಕೆ

ಕೊಹ್ಲಿಯ ಪೋಸ್ಟ್ ಏಷ್ಯಾದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದು ಮಾತ್ರವಲ್ಲದೆ, 20 ಮಿಲಿಯನ್ ಲೈಕ್‌’ಗಳನ್ನು ತಲುಪಿದ ಏಷ್ಯಾದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಜೊತೆಗೆ ವಿಶ್ವಾದ್ಯಂತ ಅತಿ ಹೆಚ್ಚು ಲೈಕ್ ಪಡೆದ ಕ್ರೀಡಾಪಟುಗಳ ಟಾಪ್ 5 ಪೋಸ್ಟ್’ಗಳ ಸಾಲಿಗೆ ಸೇರ್ಪಡೆಗೊಂಡಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ