Virat Kohli : 'ಟೀಂ ಇಂಡಿಯಾ ಏಷ್ಯಾಕಪ್ - ವಿಶ್ವಕಪ್ ಗೆಲ್ಲುವಂತೆ ಮಾಡುತ್ತೇನೆ'

ಈ ವರ್ಷ ಭಾರತಕ್ಕೆ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್ ಗೆಲ್ಲುವುದು ನನ್ನ ದೊಡ್ಡ ಗುರಿಯಾಗಿದೆ, ಅದಕ್ಕಾಗಿ ನಾನು ಅತ್ಯುತ್ತಮ ಪ್ರದರ್ಶನ ನೀಡುತ್ತೇನೆ

Written by - Channabasava A Kashinakunti | Last Updated : Jul 24, 2022, 05:57 PM IST
  • ಪ್ಯಾಮಿಲಿ ಜೊತೆ ಪ್ಯಾರಿಸ್‌ ಪ್ರವಾಸದಲ್ಲಿ ವಿರಾಟ್ ಕೊಹ್ಲಿ
  • ಸಂಚಲನ ಸೃಷ್ಟಿಸಿದ ಕೊಹ್ಲಿ ಈ ಹೇಳಿಕೆ
  • 'ತಪ್ಪದೆ ಶತಕದೊಂದಿಗೆ ಹಿಂತಿರುಗುತ್ತೇನೆ'
Virat Kohli : 'ಟೀಂ ಇಂಡಿಯಾ ಏಷ್ಯಾಕಪ್ - ವಿಶ್ವಕಪ್ ಗೆಲ್ಲುವಂತೆ ಮಾಡುತ್ತೇನೆ' title=

Virat Kohli : ಈ ವರ್ಷ ಭಾರತಕ್ಕೆ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್ ಗೆಲ್ಲುವುದು ನನ್ನ ದೊಡ್ಡ ಗುರಿಯಾಗಿದೆ, ಅದಕ್ಕಾಗಿ ನಾನು ಅತ್ಯುತ್ತಮ ಪ್ರದರ್ಶನ ನೀಡುತ್ತೇನೆ ಎಂದು ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಸಂಚಲನ ಸೃಷ್ಟಿಸಿದ ಕೊಹ್ಲಿ ಈ ಹೇಳಿಕೆ 

ಸ್ಟಾರ್ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಕೊಹ್ಲಿ,'ಟೀಂ ಇಂಡಿಯಾ ಏಷ್ಯಾಕಪ್ ಮತ್ತು ವಿಶ್ವಕಪ್ ಗೆಲ್ಲಲು ಸಹಾಯ ಮಾಡುವುದು ನನ್ನ ದೊಡ್ಡ ಗುರಿಯಾಗಿದೆ. ಇದಕ್ಕಾಗಿ ಏನು ಮಾಡಬೇಕು, ನಾನು ಅದಕ್ಕೆ ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Ravi Shastri On Hardik Pandya : ಹಾರ್ದಿಕ್ ಪಾಂಡ್ಯ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ ರವಿಶಾಸ್ತ್ರಿ..!

ಏಷ್ಯಾ ಕಪ್ ಅನ್ನು ಆಗಸ್ಟ್ 27 ರಿಂದ ಯುಎಇ ಆಯೋಜಿಸಲಿದೆ. ಇದಾದ ಬಳಿಕ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಕೂಡ ನಡೆಯಲಿದೆ. ಈ ಎರಡೂ ದೊಡ್ಡ ಟೂರ್ನಿಗಳು ಟಿ20 ಮಾದರಿಯಲ್ಲಿರುತ್ತವೆ.

'ತಪ್ಪದೆ ಶತಕದೊಂದಿಗೆ ಹಿಂತಿರುಗುತ್ತೇನೆ'

ಆಗಸ್ಟ್ 27 ರಿಂದ ಪ್ರಾರಂಭವಾಗುವ ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ಪರ ಆಡಲು ವಿರಾಟ್ ಕೊಹ್ಲಿ ಈಗ ನೇರವಾಗಿ ಹೋಗಬೇಕಾಗಿದೆ. ನವೆಂಬರ್ 2019 ರಿಂದ, ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ಒಂದೇ ಒಂದು ಶತಕವನ್ನು ಗಳಿಸಿಲ್ಲ, ಆದರೆ ಅವರು ಖಂಡಿತವಾಗಿಯೂ ಒಂದು ದಿನ ಶತಕದೊಂದಿಗೆ ಮರಳುತ್ತೇನೆ ಎಂದು ಕೊಹ್ಲಿ ಹೇಳಿದ್ದಾರೆ. 

ಪ್ಯಾಮಿಲಿ ಜೊತೆ ಪ್ಯಾರಿಸ್‌ ಪ್ರವಾಸದಲ್ಲಿ ವಿರಾಟ್ ಕೊಹ್ಲಿ

ಪ್ರಸ್ತುತ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಗಳು ವಾಮಿಕಾ ಜೊತೆ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಹಾಲಿ ಡೇ ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಇಂಗ್ಲೆಂಡ್ ಪ್ರವಾಸದಲ್ಲೂ ಕೊಹ್ಲಿ 6 ಅಂತಾರಾಷ್ಟ್ರೀಯ ಇನ್ನಿಂಗ್ಸ್‌ಗಳಲ್ಲಿ 76 ರನ್ ಗಳಿಸಲಷ್ಟೇ ಶಕ್ತರಾಗಿ ಟೀಂ ಇಂಡಿಯಾದಲ್ಲಿ ಸ್ಥಾನದ ಬಗ್ಗೆ ಪ್ರಶ್ನೆಗಳು ಹರಿದಾಡುತ್ತಿವೆ.

ಇದನ್ನೂ ಓದಿ : ಈ ಆಟಗಾರ ತಂಡದಲ್ಲಿ ಇದ್ರೆ ವಿಶ್ವಕಪ್ ಪಕ್ಕಾ ಎಂದ ರಿಕ್ಕಿ ಪಾಂಟಿಂಗ್..!

ಭಾರತಕ್ಕೆ ಕೊಹ್ಲಿಗಿಂತ ಅನುಭವಿ ಬ್ಯಾಟ್ಸ್‌ಮನ್ ಇಲ್ಲ

ಆಗಸ್ಟ್ 27ರಿಂದ ಆರಂಭವಾಗಲಿರುವ ಏಷ್ಯಾಕಪ್, ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಮತ್ತು ಮುಂದಿನ ವರ್ಷ 2023ರಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಪ್ರಮುಖ ಆಟಗಾರರಾಗಲಿದ್ದಾರೆ, ಏಕೆಂದರೆ ಭಾರತವು ಹೆಚ್ಚು ಅನುಭವಿ ಬ್ಯಾಟ್ಸ್‌ಮನ್‌ಗಳನ್ನು ಹೊಂದಿಲ್ಲ. ಹೀಗಾಗಿ ಕೊಹ್ಲಿ ಅನುಭವ ಇಲ್ಲಿ ವರ್ಕ್ ಆಗಲಿದೆ ಎಂದು ಹೇಳಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News