“Virat 71ನೇ ಶತಕ ಬಾರಿಸಿದರೆ ಮಾತ್ರ ನನ್ನ ಮದುವೆ”: ಪೋಸ್ಟರ್ ಹಿಡಿದಿದ್ದ ಫ್ಯಾನ್ ವಿವಾಹದ ದಿನ ಕೊಹ್ಲಿ ಕೊಟ್ರು ಗಿಫ್ಟ್

Virat Kohli Centuary On Fan’s Wedding:  ಸೆಪ್ಟೆಂಬರ್ 2022 ರ ಮೊದಲು, ವಿರಾಟ್ ಕೊಹ್ಲಿ ಡಿಸೆಂಬರ್ 2019 ರಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊನೆಯ ಶತಕವನ್ನು ಗಳಿಸಿದ್ದರು. ಇದರಿಂದ ಅಭಿಮಾನಿಗಳಲ್ಲಿ ಸಾಕಷ್ಟು ನಿರಾಸೆ ಉಂಟಾಗಿತ್ತು. ಆದರೆ ಕಳೆದ ವರ್ಷ ಏಷ್ಯಾಕಪ್‌ನಲ್ಲಿ ಶತಕದ ಬರವನ್ನು ಕೊನೆಗೊಳಿಸಿದರು.

Written by - Bhavishya Shetty | Last Updated : Jan 18, 2023, 04:03 PM IST
    • “ವಿರಾಟ್ ಕೊಹ್ಲಿ 71ನೇ ಶತಕ ಬಾರಿಸುವವರೆಗೂ ನಾನು ಮದುವೆಯಾಗುವುದಿಲ್ಲ”
    • ಕ್ರೀಡಾಂಗಣಕ್ಕೆ ಬಂದು ಚಿಯರ್ ಬೋರ್ಡ್‌ನಲ್ಲಿ ಬರೆದುಕೊಂಡಿದ್ದ ವಿರಾಟ್ ಅಭಿಮಾನಿ
    • ಈ ಅಭಿಮಾನಿಯ ಮದುವೆ ದಿನ 74ನೇ ಶತಕ ಬಾರಿಸಿದ ಕೊಹ್ಲಿ
“Virat 71ನೇ ಶತಕ ಬಾರಿಸಿದರೆ ಮಾತ್ರ ನನ್ನ ಮದುವೆ”: ಪೋಸ್ಟರ್ ಹಿಡಿದಿದ್ದ ಫ್ಯಾನ್ ವಿವಾಹದ ದಿನ ಕೊಹ್ಲಿ ಕೊಟ್ರು ಗಿಫ್ಟ್  title=
Virat Kohli

Virat Kohli Centuary On Fan’s Wedding:  ಪ್ರಾರ್ಥನೆಯಲ್ಲಿ ಎಷ್ಟು ಶಕ್ತಿಯಿದೆ ಎಂದರೆ ಅಸಾಧ್ಯವಾದ ವಿಷಯಗಳೂ ಸಹ ಸಾಧ್ಯವಾಗುತ್ತದೆ. ಒಬ್ಬ ವ್ಯಕ್ತಿಯು ತನ್ನ ಪ್ರೀತಿ ಪಾತ್ರರಿಗೆ ಒಳ್ಳೆಯದಾಗಲಿ ಎಂದು ಬೇಡಿಕೊಂಡರೆ, ಅದು ಶೀಘ್ರದಲ್ಲೇ ಈಡೇರುತ್ತದೆ. ಆಗ ಎಲ್ಲರೂ ಅದನ್ನು ಪವಾಡ ಎಂದು ಕರೆಯುತ್ತಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕಳೆದ ಎರಡು ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದೇ ಒಂದು ಶತಕವನ್ನು ಗಳಿಸಲು ಸಾಧ್ಯವಾಗಿರಲಿಲ್ಲ. ಅವರು ದೀರ್ಘಕಾಲದವರೆಗೆ ಕೆಟ್ಟ ಫಾರ್ಮ್‌ನೊಂದಿಗೆ ಹೋರಾಡುತ್ತಿದ್ದರು.

ಇದನ್ನೂ ಓದಿ: Saina Nehwal: 'ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ'.. ಆಘಾತಕಾರಿ ಹೇಳಿಕೆ ನೀಡಿದ ಸೈನಾ ನೆಹ್ವಾಲ್

ಸೆಪ್ಟೆಂಬರ್ 2022 ರ ಮೊದಲು, ವಿರಾಟ್ ಕೊಹ್ಲಿ ಡಿಸೆಂಬರ್ 2019 ರಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊನೆಯ ಶತಕವನ್ನು ಗಳಿಸಿದ್ದರು. ಇದರಿಂದ ಅಭಿಮಾನಿಗಳಲ್ಲಿ ಸಾಕಷ್ಟು ನಿರಾಸೆ ಉಂಟಾಗಿತ್ತು. ಆದರೆ ಕಳೆದ ವರ್ಷ ಏಷ್ಯಾಕಪ್‌ನಲ್ಲಿ ಶತಕದ ಬರವನ್ನು ಕೊನೆಗೊಳಿಸಿದರು. ಅಫ್ಘಾನಿಸ್ತಾನ ವಿರುದ್ಧ ಶತಕ ಬಾರಿಸುವ ಮೂಲಕ ತಮ್ಮ ಫಾರ್ಮ್‌ಗೆ ಮರಳಿದರು. ವಿರಾಟ್ ಕೊಹ್ಲಿ ಫಾರ್ಮ್‌ಗೆ ಬರುವುದರ ಹಿಂದೆ ಅವರ ವಿಶೇಷ ಅಭಿಮಾನಿಯ ಪ್ರಾರ್ಥನೆ ಇದೆ ಎಂದು ಈಗ ಹೇಳಿದರೆ ತಪ್ಪಾಗುವುದಿಲ್ಲ.

 

ವಿರಾಟ್ ಕೊಹ್ಲಿ ಅಭಿಮಾನಿಗಳ ಪ್ರಾರ್ಥನೆ:

ಹೌದು, ವಿರಾಟ್ ಕೊಹ್ಲಿ ಅವರ ಅಭಿಮಾನಿಯೊಬ್ಬರು ಕ್ರೀಡಾಂಗಣಕ್ಕೆ ಬಂದು ಚಿಯರ್ ಬೋರ್ಡ್‌ನಲ್ಲಿ ಬರೆದುಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾರಣ, “ವಿರಾಟ್ ಕೊಹ್ಲಿ 71ನೇ ಶತಕ ಬಾರಿಸುವವರೆಗೂ ನಾನು ಮದುವೆಯಾಗುವುದಿಲ್ಲ” ಎಂದು ತಮ್ಮ ಚಿಯರ್ ಬೋರ್ಡ್ ನಲ್ಲಿ ಬರೆದುಕೊಂಡಿದ್ದರು. ಅವರು ಏಷ್ಯಾಕಪ್‌ನಲ್ಲಿ ತಮ್ಮ 71 ನೇ ಶತಕವನ್ನು ಗಳಿಸಿದರು. ಅದರ ಜೊತೆಗೆ ಇತ್ತೀಚೆಗೆ ಶ್ರೀಲಂಕಾ ವಿರುದ್ಧ 74 ನೇ ಶತಕವನ್ನು ಗಳಿಸಿದರು. ವಿರಾಟ್ ಕೊಹ್ಲಿ ಶತಕದ ನಂತರವೇ ಮದುವೆಯಾಗುವುದಾಗಿ ಚಿಯರ್ ಬೋರ್ಡ್ ಹಿಡಿದಿದ್ದ ಅಭಿಮಾನಿಯ ಮದುವೆಯ ದಿನವೇ ವಿರಾಟ್ ಕೊಹ್ಲಿ ಅಜೇಯ 166 ರನ್ ಬಾರಿಸಿ ದಾಖಲೆ ಸೃಷ್ಟಿಸಿದ್ದರು.  

 

ಇದನ್ನೂ ಓದಿ: IND vs NZ : ಭಾರತದ Playing 11 ನಲ್ಲಿ ಈ ಆಟಗಾರನಿಗೆ ಸ್ಥಾನ ನೀಡಲು ನಿರಾಕರಿಸಿದ ಕೋಚ್-ಕ್ಯಾಪ್ಟನ್ !

ವಿರಾಟ್ ಕೊಹ್ಲಿ ಭರ್ಜರಿ ಸರ್ಪ್ರೈಸ್:

ವಿರಾಟ್ ಕೊಹ್ಲಿ ಶತಕದ ನಂತರ ವರನ ವೇಷಭೂಷಣದಲ್ಲಿರುವ ವ್ಯಕ್ತಿ ಟಿವಿ ಮುಂದೆ ನಿಂತು ಫೋಟೋ ತೆಗೆದಿದ್ದು, ಈ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಅಮನ್ ಅಗರ್ವಾಲ್ ಎಂಬ ಹೆಸರಿನ ವಿರಾಟಿಯನ್ ಅಭಿಮಾನಿ ಟ್ವಿಟರ್‌ನಲ್ಲಿ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ""ನಾನು 71 ನೇ ಶತಕವನ್ನು ಕೇಳಿದೆ ಆದರೆ ಅವರು ನನ್ನ ವಿಶೇಷ ದಿನದಂದು 74 ನೇ ಶತಕವನ್ನು ಸಿಡಿಸಿದ್ದಾರೆ” ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News