ಪುರುಷರ ಟಿ20 ವಿಶ್ವಕಪ್‌ನ ರೋಚಕ ಸೂಪರ್ 12 ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಕೇವಲ 52 ಎಸೆತಗಳಲ್ಲಿ ಅಜೇಯ 82 ರನ್ ಗಳಿಸುವ ಮೂಲಕ ಭಾರತಕ್ಕೆ ನಾಲ್ಕು ವಿಕೆಟ್‌ಗಳ ಜಯ ಸಾಧಿಸಲು ವಿರಾಟ್ ಕೊಹ್ಲಿ ಅವರು ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಜೊತೆಗೆ ಈ ಪಂದ್ಯದಲ್ಲಿ ಅರ್ಧ ಶತಕ ಸಿಡಿಸುವ ಮೂಲಕ ಟಿ20 ಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: India vs Pakistan: ಇದು ಜೀವನದ ಶ್ರೇಷ್ಠ ಇನಿಂಗ್ಸ್ ಎಂದ ವಿರಾಟ್ ಕೊಹ್ಲಿ..!
ಭಾನುವಾರದಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ 90,293 ಅಭಿಮಾನಿಗಳು ಪಂದ್ಯ ವೀಕ್ಷಣೆ ಮಾಡಿದ್ದಾರೆ. ವಿರಾಟ್ ತನ್ನ ಇನ್ನಿಂಗ್ಸ್ ನಂತರ ಭಾವುಕರಾಗುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಟೀಂ ಇಂಡಿಯಾ ಪಾಕಿಸ್ತಾನ ವಿರುದ್ದ ರೋಚಕ ಪಂದ್ಯ ಗೆದ್ದಿದೆ. ಈ ಗೆಲುವಿಗೆ ವಿರಾಟ್ ಮತ್ತು ಪಾಂಡ್ಯ ಕೊಡುಗೆ ಬಹಳಷ್ಟಿದೆ. ಇನ್ನು ಇನ್ನಿಂಗ್ಸ್ ಮುಗಿಯುತ್ತಿದ್ದಂತೆ ಗೆಲುವನ್ನು ಸಂಭ್ರಮಿಸಿದ ಕೊಹ್ಲಿ ಮೈದಾನದಲ್ಲಿಯೇ ಕಣ್ಣೀರು ಹಾಕಿದ್ದಾರೆ. ಈ ಸಂದರ್ಭದಲ್ಲಿ ನಾಯಕ ರೋಹಿತ್ ಶರ್ಮಾ ಓಡಿ ಬಂದು ಕೊಹ್ಲಿಯನ್ನು ಎತ್ತಿ ಮುದ್ದಾಡಿದ್ದಾರೆ.
That Celebration ♥️🇮🇳🇮🇳#ViratKohli #INDvPAK pic.twitter.com/eUB494PB8C
— A B H I 🇮🇳 (@AbhishekICT) October 23, 2022
ವಿರಾಟ್ ಕೊಹ್ಲಿ ಟಿ20 ಪಂದ್ಯಗಳಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. 3794 ರನ್ ಗಳಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.
ಬಲ-ಎಡ ವೇಗದ ಬೌಲಿಂಗ್ ಜೋಡಿ ಹಾರ್ದಿಕ್ ಪಾಂಡ್ಯ ಮತ್ತು ಅರ್ಶ್‌ದೀಪ್ ಸಿಂಗ್ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಪಾಕಿಸ್ತಾನವನ್ನು ತಮ್ಮ 20 ಓವರ್‌ಗಳಲ್ಲಿ 159/8 ಗೆ ನಿರ್ಬಂಧಿಸಲು ಸಹಾಯ ಮಾಡಿದರು. ಈ ಬಳಿಕ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ (40) 77 ಎಸೆತಗಳಲ್ಲಿ 113 ರನ್‌ಗಳ ಜೊತೆಯಾಟ ನಡೆಸಿದರು.
ಇದನ್ನೂ ಓದಿ: IND vs PAK: ಇಂಡೋ-ಪಾಕ್ ರಣರೋಚಕ ಪಂದ್ಯ ವೀಕ್ಷಣೆಗೆ ಸ್ಟೇಡಿಯಂ ಫುಲ್: ಎಷ್ಟು ಜನ ಸೇರಿದ್ದರು ಗೊತ್ತೇ!
ಸಂಕ್ಷಿಪ್ತ ಸ್ಕೋರ್‌ಗಳು:
ಪಾಕಿಸ್ತಾನ 20 ಓವರ್‌ಗಳಲ್ಲಿ 159/8 (ಶಾನ್ ಮಸೂದ್ ಔಟಾಗದೆ 52, ಇಫ್ತಿಕರ್ ಅಹ್ಮದ್ 51; ಹಾರ್ದಿಕ್ ಪಾಂಡ್ಯ 3/30, ಅರ್ಷದೀಪ್ ಸಿಂಗ್ 3/32)
ಭಾರತ 20 ಓವರ್‌ಗಳಲ್ಲಿ 160/6 (ವಿರಾಟ್ ಕೊಹ್ಲಿ ಔಟಾಗದೆ 82, ಹಾರ್ದಿಕ್ ಪಾಂಡ್ಯ 40; ಹ್ಯಾರಿಸ್ ರೌಫ್ 2/36, ಮೊಹಮ್ಮದ್ ನವಾಜ್ 2/42) ನಾಲ್ಕು ವಿಕೆಟ್‌ಗಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ