ಪಂದ್ಯ ಗೆಲ್ಲುತ್ತಿದ್ದಂತೆ ಪತ್ನಿ ಅನುಷ್ಕಾ ಶರ್ಮಾಗೆ ಸನ್ನೆ ಮಾಡಿ ಹೀಗಂದ ವಿರಾಟ್ ಕೊಹ್ಲಿ! ವಿಡಿಯೋ ವೈರಲ್

Virat Kohli Gesture to Anushka Sharma: ವಿರಾಟ್ ಕೊಹ್ಲಿ ಮತ್ತೊಮ್ಮೆ ಬ್ಯಾಟಿಂಗ್’ನಲ್ಲಿ ಮಿಂಚಿದ್ದಲ್ಲದೆ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇನ್ನು ಪಂದ್ಯ ಗೆದ್ದ ಖುಷಿಯಲ್ಲಿ ಕೊಹ್ಲಿ ಅನುಷ್ಕಾ ಶರ್ಮಾ ಕಡೆಗೆ ನೋಡಿ ಸನ್ನೆ ಮಾಡಿರುವ ವಿಡಿಯೋ ವೈರಲ್ ಆಗಿದೆ.

Written by - Bhavishya Shetty | Last Updated : May 5, 2024, 05:46 PM IST
    • ನಿರ್ಣಾಯಕ ಜಯದೊಂದಿಗೆ ಪ್ಲೇಆಫ್‌ ರೇಸ್‌ ಕನಸು ಜೀವಂತವಾಗಿರಿಸಿದ ಆರ್‌ ಸಿ ಬಿ
    • ಈ ಗೆಲುವಿನೊಂದಿಗೆ ಮೂರು ಸ್ಥಾನ ಮೇಲೇರಿ 7ನೇ ಸ್ಥಾನಕ್ಕೆ ತಲುಪಿದ ಆರ್‌ ಸಿ ಬಿ
    • ವಿರಾಟ್ ಕೊಹ್ಲಿ ತಮ್ಮ ಪತ್ನಿಯ ಕಡೆ ನೋಡಿ ಸನ್ನೆ ಮಾಡಿದ ವಿಡಿಯೋ ವೈರಲ್
ಪಂದ್ಯ ಗೆಲ್ಲುತ್ತಿದ್ದಂತೆ ಪತ್ನಿ ಅನುಷ್ಕಾ ಶರ್ಮಾಗೆ ಸನ್ನೆ ಮಾಡಿ ಹೀಗಂದ ವಿರಾಟ್ ಕೊಹ್ಲಿ! ವಿಡಿಯೋ ವೈರಲ್  title=
Virat Kohli

Virat Kohli Gesture to Anushka Sharma: ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಜರಾತ್ ಟೈಟಾನ್ಸ್ ವಿರುದ್ಧ ನಾಲ್ಕು ವಿಕೆಟ್‌’ಗಳ ನಿರ್ಣಾಯಕ ಜಯದೊಂದಿಗೆ ಪ್ಲೇಆಫ್‌ ರೇಸ್‌ ಕನಸು ಜೀವಂತವಾಗಿರಿಸಿದೆ. ಐಪಿಎಲ್ 2024ರ 52ನೇ ಪಂದ್ಯದಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಿದ್ದವು. ಇದು 11 ಪಂದ್ಯಗಳಲ್ಲಿ ಆರ್‌ ಸಿ ಬಿಗೆ ನಾಲ್ಕನೇ ಜಯವಾಗಿದೆ. ಈ ಗೆಲುವಿನೊಂದಿಗೆ ಆರ್‌ ಸಿ ಬಿ ಮೂರು ಸ್ಥಾನ ಮೇಲೇರಿ 7ನೇ ಸ್ಥಾನಕ್ಕೆ ತಲುಪಿದೆ.

ಇದನ್ನೂ ಓದಿ: ಎಂಎಸ್ ಧೋನಿ ಅಣ್ಣ ಯಾರು ಗೊತ್ತಾ? ಖ್ಯಾತ ರಾಜಕಾರಣಿ ಇವರು… ಆದ್ರೆ ಅನೇಕ ವರ್ಷಗಳಿಂದ ಮಾತೇ ಬಿಟ್ಟಿದ್ದಾರಂತೆ ಕ್ಯಾಪ್ಟನ್ ಕೂಲ್!

ವಿರಾಟ್ ಕೊಹ್ಲಿ ಮತ್ತೊಮ್ಮೆ ಬ್ಯಾಟಿಂಗ್’ನಲ್ಲಿ ಮಿಂಚಿದ್ದಲ್ಲದೆ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇನ್ನು ಪಂದ್ಯ ಗೆದ್ದ ಖುಷಿಯಲ್ಲಿ ಕೊಹ್ಲಿ ಅನುಷ್ಕಾ ಶರ್ಮಾ ಕಡೆಗೆ ನೋಡಿ ಸನ್ನೆ ಮಾಡಿರುವ ವಿಡಿಯೋ ವೈರಲ್ ಆಗಿದೆ.

ಈ ಪಂದ್ಯ ಕೊಹ್ಲಿಗೆ ವಿಶೇಷವಾಗಿತ್ತು. ಏಕೆಂದರೆ ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ತಮ್ಮ ಎರಡನೇ ಮಗು 'ಅಕಾಯ್' ಜನನದ ಬಳಿಕ ಮೊದಲ ಬಾರಿಗೆ ಐಪಿಎಲ್ ವೀಕ್ಷಿಸಲು ಆಗಮಿಸಿದ್ದರು.

ಇನ್ನು ಗೆಲುವಿನ ನಂತರ ಹಿಂದಿರುಗುವಾಗ, ವಿರಾಟ್ ಕೊಹ್ಲಿ ತಮ್ಮ ಪತ್ನಿಯ ಕಡೆ ನೋಡಿ ಸನ್ನೆ ಮಾಡಿದರು, ಅದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕೊಹ್ಲಿ ಈ ರೀತಿ ಮಾಡುವುದನ್ನು ಕಂಡು ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಕೂಡ ಖುಷಿಯಲ್ಲಿ ಕೇಕೆ ಹಾಕಿದರು.

 

ಇದನ್ನೂ ಓದಿ: ಪ್ಲೇ ಆಫ್ ಹತ್ತಿರ ಬರ್ತಿದ್ದಂತೆ CSKಗೆ ಆಘಾತ! ದೀಪಕ್ ಚಹಾರ್ ಬಳಿಕ ಈ ಸ್ಟಾರ್ ಬೌಲರ್’ಗೂ ಗಾಯ

ಆರ್‌ ಸಿ ಬಿ ಪ್ಲೇಆಫ್ ಕನಸು ಜೀವಂತ:

ಗುಜರಾತ್ ಟೈಟಾನ್ಸ್ ವಿರುದ್ಧ RCB ಸತತ ಮೂರನೇ ಗೆಲುವು ಸಾಧಿಸಿದೆ. ಸೀಸನ್’ನ ಮೊದಲಾರ್ಧದಲ್ಲಿ ಕಳಪೆ ಪ್ರದರ್ಶನದ ತೋರಿದ್ದ ತಂಡ ಇದೀಗ ಕಂಬ್ಯಾಕ್ ಮಾಡುವ ಭರವಸೆ ನೀಡುತ್ತಿದೆ. ಇನ್ನು ಆರ್‌ಸಿಬಿ ಮೊದಲು ಸತತ ಆರು ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಉಳಿದಿತ್ತು. ಹ್ಯಾಟ್ರಿಕ್ ಗೆಲುವಿನೊಂದಿಗೆ ಕಮ್ ಬ್ಯಾಕ್ ಮಾಡಿದ ತಂಡ ಅಂತಿಮವಾಗಿ ಅಂಕಪಟ್ಟಿಯಲ್ಲಿ ಜಿಗಿದು 8 ಅಂಕಗಳೊಂದಿಗೆ ಏಳನೇ ಸ್ಥಾನಕ್ಕೆ ತಲುಪಿದೆ. ಅಂದಹಾಗೆ ಪ್ಲೇ ಆಫ್ ರೇಸ್‌ನಲ್ಲಿ ಉಳಿಯಲು RCB ಉಳಿದ ಮೂರು ಪಂದ್ಯಗಳನ್ನು ಗೆಲ್ಲಲೇಬೇಕು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News