10 ಸಿಕ್ಸರ್, 5 ಬೌಂಡರಿ… ಗುಜರಾತ್ ಭದ್ರಕೋಟೆಯಲ್ಲಿ ವಿಲ್ ಜಾಕ್ವೆಸ್ ಅಬ್ಬರ! ಭರ್ಜರಿ ಶತಕದಾಟ ಕಂಡು ಕೊಹ್ಲಿ ಶಾಕ್

IPL 2024ರಲ್ಲಿ RCB ಸದ್ಯ ಉತ್ತಮ ಪ್ರದರ್ಶನ ನೀಡುತ್ತದೆ ಗುಜರಾತ್‌ ಭದ್ರಕೋಟೆಯಲ್ಲಿ ವಿರಾಟ್ ಕೊಹ್ಲಿ ಮತ್ತು ವಿಲ್ ಜಾಕ್ವೆಸ್ ಅಬ್ಬರ ಐಪಿಎಲ್‌’ಗೂ ಮುನ್ನ ವಿಲ್ ಜಾಕ್ವೆಸ್ ದಕ್ಷಿಣ ಆಫ್ರಿಕಾ ಟಿ20 ಲೀಗ್‌’ನಲ್ಲಿ ಮಿಂಚಿದ್ದರು

Written by - Bhavishya Shetty | Last Updated : Apr 28, 2024, 09:07 PM IST
    • IPL 2024ರಲ್ಲಿ RCB ಸದ್ಯ ಉತ್ತಮ ಪ್ರದರ್ಶನ ನೀಡುತ್ತದೆ
    • ಗುಜರಾತ್‌ ಭದ್ರಕೋಟೆಯಲ್ಲಿ ವಿರಾಟ್ ಕೊಹ್ಲಿ ಮತ್ತು ವಿಲ್ ಜಾಕ್ವೆಸ್ ಅಬ್ಬರ
    • ಐಪಿಎಲ್‌’ಗೂ ಮುನ್ನ ವಿಲ್ ಜಾಕ್ವೆಸ್ ದಕ್ಷಿಣ ಆಫ್ರಿಕಾ ಟಿ20 ಲೀಗ್‌’ನಲ್ಲಿ ಮಿಂಚಿದ್ದರು
10 ಸಿಕ್ಸರ್, 5 ಬೌಂಡರಿ… ಗುಜರಾತ್ ಭದ್ರಕೋಟೆಯಲ್ಲಿ ವಿಲ್ ಜಾಕ್ವೆಸ್ ಅಬ್ಬರ! ಭರ್ಜರಿ ಶತಕದಾಟ ಕಂಡು ಕೊಹ್ಲಿ ಶಾಕ್ title=
Will Jacques-Virat Kohli

GT vs RCB: IPL 2024ರಲ್ಲಿ RCB ಸದ್ಯ ಉತ್ತಮ ಪ್ರದರ್ಶನ ನೀಡುತ್ತದೆ. ಅದರಲ್ಲೂ ಇಂದು ಗುಜರಾತ್‌’ನ ಭದ್ರಕೋಟೆಯಲ್ಲಿ ವಿರಾಟ್ ಕೊಹ್ಲಿ ಮತ್ತು ವಿಲ್ ಜಾಕ್ವೆಸ್ ಅಬ್ಬರದ ಬ್ಯಾಟಿಂಗ್ ನಡೆಸಿ, ಟೈಟಾನ್ಸ್’ಗೆ ಸೋಲುಣಿಸಿದ್ದಾರೆ.

ವಿಲ್ ಜಾಕ್ವೆಸ್ ಬಿರುಸಿನ ಶತಕದಿಂದಾಗಿ ಗುಜರಾತ್’ನ 201 ರನ್’ಗಳ ಗುರಿಯೂ ಸಾಧಾರಣ ಎನಿಸಿದ್ದು ಸುಳ್ಳಲ್ಲ. ಅಷ್ಟೇ ಅಲ್ಲದೆ, ಗುಜರಾತ್ ತಂಡವನ್ನು 9 ವಿಕೆಟ್‌’ಗಳಿಂದ ಸೋಲಿಸುವ ಮೂಲಕ ಆರ್‌’ಸಿಬಿ ಸತತ ಎರಡನೇ ಗೆಲುವು ದಾಖಲಿಸಿದೆ.

ಇದನ್ನೂ ಓದಿ: ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನಾನೇ ಅಭ್ಯರ್ಥಿ, ಬಹುಮತದಿಂದ ಗೆಲ್ಲಿಸಿ: ಸಿಎಂ

ಇನ್ನು ವಿಲ್ ಜಾಕ್ವೆಸ್ ಭರ್ಜರಿ ಬ್ಯಾಟಿಂಗ್ ಮಾಡಿದ್ದು, ಕೇವಲ 31 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ. ಅದಾದ ಬಳಿಕ ಕೇವಲ 41 ಎಸೆತಗಳಲ್ಲಿ 100 ರನ್‌’ಗಳ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದು ಕಂಡು ವಿರಾಟ್ ಕೂಡ ದಂಗಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಗಗನಚುಂಬಿ ಸಿಕ್ಸರ್‌’ಗಳನ್ನು ನೋಡಿದ ವಿರಾಟ್ ಕೊಹ್ಲಿ ಕೂಡ ಒಂದು ಕ್ಷಣ ಆಶ್ಚರ್ಯಚಕಿತರಾಗಿದ್ದರು.

 

ಇದನ್ನೂ ಓದಿ: ಕೊನೆಗೂ ಸ್ಟ್ರೈಕ್ ರೇಟ್ ಬಗ್ಗೆ ಮೌನ ಮುರಿದ ವಿರಾಟ್: ಟೀಕಾಕಾರಿಗೆ ಚಾಟಿ ಬೀಸಿದಂತಿದೆ ಕೊಹ್ಲಿ ಮಾತು

ವಿಲ್ ಜಾಕ್ವೆಸ್ ಯಾರು?

ವಿಲ್ ಜಾಕ್ವೆಸ್ ಇಂಗ್ಲೆಂಡ್ ಆಟಗಾರ. 2022 ರಲ್ಲಿ ಇಂಗ್ಲೆಂಡ್‌ ತಂಡಕ್ಕೆ ಪಾದಾರ್ಪಣೆ ಮಾಡಿದರು. ಐಪಿಎಲ್‌’ಗೂ ಮುನ್ನ ವಿಲ್ ಜಾಕ್ವೆಸ್ ದಕ್ಷಿಣ ಆಫ್ರಿಕಾ ಟಿ20 ಲೀಗ್‌’ನಲ್ಲಿ ಮಿಂಚಿದ್ದರು. ಒಂದರ ನಂತರ ಒಂದರಂತೆ ಅದ್ಭುತ ಇನ್ನಿಂಗ್ಸ್‌’ಗಳನ್ನು ಆಡಿದ ವಿಲ್ ಜಾಕ್ವೆಸ್ ಈಗಾಗಲೇ ಟಿ20ಯಲ್ಲಿ ಎರಡು ಶತಕಗಳನ್ನು ಬಾರಿಸಿದ್ದಾರೆ. ಅಂದಹಾಗೆ ಹರಾಜಿನ ವೇಳೆ ಆರ್‌ಸಿಬಿ 3.20 ಕೋಟಿ ರೂ.ಗೆ ಜಾಕ್ವೆಸ್ ಅವರನ್ನು ಖರೀದಿಸಿತ್ತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News