ಮತ್ತೆ ಸುದ್ದಿಯಲ್ಲಿ ವಿರಾಟ್-ಅನುಷ್ಕಾ ಫೋಟೋ

ರೆಡ್ ಕಾರ್ಪೆಟ್ ಕಾರ್ಯಕ್ರಮದಲ್ಲಿ ಅನುಷ್ಕಾ ಜೊತೆಗಿನ ಫೋಟೋವನ್ನು ಕ್ರಿಕೆಟ್ ಕ್ಯಾಪ್ಟನ್ ವಿರಾಟ್ ತಮ್ಮ ಇನ್ಸ್ಟಾಗ್ರಾಂ ಡಿಪಿಯಾಗಿ ಹಾಕಿಕೊಂಡಿದ್ದಾರೆ.

Last Updated : Nov 13, 2017, 05:29 PM IST
ಮತ್ತೆ ಸುದ್ದಿಯಲ್ಲಿ ವಿರಾಟ್-ಅನುಷ್ಕಾ ಫೋಟೋ title=

ಮುಂಬೈ: ವಿರಾಟ್ ಕೊಹ್ಲಿ, ತಮ್ಮ ಗೆಳತಿ ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಜೊತೆಗಿನ ತಮ್ಮ ಮನದಾಸೆಯನ್ನು ಮತ್ತೆ ತೋರ್ಪಡಿಸಿದ್ದಾರೆ. ನ.11 ರಂದು ವಿರಾಟ್ ತಮ್ಮ  ಇನ್ಸ್ಟಾಗ್ರಾಂ ಡಿಪಿಯಲ್ಲಿ ಅನುಷ್ಕಾ ಶರ್ಮಾಳ ಫೋಟೋವನ್ನು ಅಪ್ಲೋಡ್ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. 

ಕೆಂಪು ಹಾಸಿನ ಮೇಲೆ ಕೆಂಪು ವರ್ಣದ್ದೇ ಉಡುಗೆಯನ್ನು ತೊಟ್ಟಿರುವ  ಅನುಷ್ಕಾ ಜೊತೆ, ಸೂಟ್ ನಲ್ಲಿ ಮಿಂಚುತ್ತಿರುವ ವಿರಾಟ್, ಒಬ್ಬರದು ಬಣ್ಣದ ಲೋಕವಾದರೆ ಇನ್ನೊಬ್ಬರದು ಕ್ರೀಡಾಲೋಕ. ಹೀಗೆ ಕ್ರಿಕೆಟ್ ಮತ್ತು ಬಾಲಿವುಡ್ನ ಈ ಪ್ರೇಮ-ಪ್ರಣಯ ಕಳೆದೆರಡು ವರ್ಷಗಳಿಂದ ನಿರಂತರವಾಗಿ ಸುದ್ದಿ ಮಾಡುತ್ತಲೇ ಇದೆ. 

ಇದಕ್ಕೆ ಸಾಕ್ಷಿಯಾಗಿ ಇತ್ತೀಚಿಗೆ ಜಾಹಿರಾತುವೊಂದರಲ್ಲಿ ಮದುವೆಯ ಜೋಡಿಯಾಗಿ ಸುದ್ದಿ ಮಾಡಿದ್ದ ಇವರು, ಈಗ ವಿರಾಟ್ ಪ್ರೇಯಸಿಯ ಮೇಲಿನ ಮಿಡಿತವನ್ನು  ತಮ್ಮ ಇನ್ಸ್ಟಾಗ್ರಾಂ ನಲ್ಲಿ ಪೋಟೋ ಹಾಕುವುದರ ಮೂಲಕ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಕ್ರಿಕೆಟ್ ಮತ್ತು ಬಾಲಿವುಡ್ ನ ವೈವಾಹಿಕ ಸಂಬಂಧಗಳಿಗೆ ಸಾಕ್ಷಿಯಾಗಿ  ಅಜರುದ್ಧೀನ್-ಸಂಗೀತಾ ಬಿಜಲಾನಿ, ವಿವಿನ್ ರಿಚರ್ಡ್ಸ್-ನೀನಾ ಗುಪ್ತಾ, ಜಹೀರಖಾನ್-ಸಾಗರೀಕಾ ಘಾಟ್ಗೆ ಜೋಡಿಗಳನ್ನು ನೋಡಬಹುದು ಈಗ ಅವರ ಸಾಲಿಗೆ ಈ ನವ ಜೋಡಿಯು ಸೇರುವ ಸಾಧ್ಯತೆ ಇದೆ.
 

Trending News