Viral Video: ಮೊಹಮ್ಮದ್ ಶಮಿಗೆ ಬಕ್ರೀದ್ ಶುಭಾಶಯ ತಿಳಿಸಿದ ಇಶಾಂತ್ ಶರ್ಮಾ

ಇಶಾಂತ್ ಶರ್ಮಾ ಅವರ ಹೃದಯಸ್ಪರ್ಶಿ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

Written by - Zee Kannada News Desk | Last Updated : Jul 22, 2021, 10:28 AM IST
  • ಮೊಹಮ್ಮದ್ ಶಮಿಗೆ ಬಕ್ರೀದ್ ಹಬ್ಬದ ಶುಭಾಶಯ ತಿಳಿಸಿದ ಇಶಾಂತ್ ಶರ್ಮಾ
  • ಮೈದಾನದಲ್ಲಿಯೇ ಪರಸ್ಪರ ಆಲಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡ ಆಟಗಾರು
  • ಇಶಾಂತ್ ಹೃದಯಸ್ಪರ್ಶಿ ನಡೆಗೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಮಹಾಪೂರ
Viral Video: ಮೊಹಮ್ಮದ್ ಶಮಿಗೆ ಬಕ್ರೀದ್ ಶುಭಾಶಯ ತಿಳಿಸಿದ ಇಶಾಂತ್ ಶರ್ಮಾ title=
ಮೊಹಮ್ಮದ್ ಶಮಿಗೆ ಶುಭಾಶಯ ತಿಳಿಸಿದ ಇಶಾಂತ್ ಶರ್ಮಾ

ನವದೆಹಲಿ: ವಿಶ್ವದಾದ್ಯಂತ ಬುಧವಾರ ಅತ್ಯಂತ ಸಂಭ್ರಮ ಸಡಗರದಿಂದ ಬಕ್ರೀದ್ (ಈದ್-ಉಲ್-ಅದಾ) ಹಬ್ಬವನ್ನು ಆಚರಿಸಲಾಯಿತು. ಇಂಗ್ಲೆಂಡ್ ನಲ್ಲಿ ಟೀಂ ಇಂಡಿಯಾ ಕ್ರಿಕೆಟರ್ ಗಳು ಕೂಡ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ. ಈ ಮಧ್ಯೆ ವೇಗಿ ಇಶಾಂತ್ ಶರ್ಮಾ ಮೈದಾನದಲ್ಲಿ ಮೊಹಮ್ಮದ್ ಶಮಿಗೆ ಬಕ್ರೀದ್ ಹಬ್ಬಕ್ಕೆ ಶುಭ ಕೋರಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: Viral Video: ‘ಭಾರತ್ ಮಾತಾಕೀ ಜೈ’ ಎಂದ ಡೇವಿಡ್ ವಾರ್ನರ್..!

ಇಂಗ್ಲೆಂಡ್ ನಲ್ಲಿ ಸರಣಿಗೂ ಮುನ್ನವೇ ದೇಶಿಯ ತಂಡಗಳ ವಿರುದ್ಧ ಅಭ್ಯಾಸ ಪಂದ್ಯವನ್ನಾಡಲು ಈ ಇಬ್ಬರು ಆಟಗಾರರು ಡುರ್ಹಾಮ್​ನಲ್ಲಿದ್ದಾರೆ. ಬ್ರಕೀದ್(Bakrid) ಹಬ್ಬದ ನಿಮಿತ್ತ ಇಬ್ಬರು ಆಟಗಾರರು ಪರಸ್ಪರ ಆಲಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ. ಇಶಾಂತ್ ಶರ್ಮಾ ಅವರ ಹೃದಯಸ್ಪರ್ಶಿ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ದೆಹಲಿ ಮೂಲದ ವೇಗಿ ಇಶಾಂತ್ ಶರ್ಮಾ(Ishant Sharma) ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಶಾಂತ್ ಅವರ ಈ ನಡೆಯು ಭಾರತೀಯ ಡ್ರೆಸ್ಸಿಂಗ್ ರೂಂನಲ್ಲಿ ಆಟಗಾರರ ನಡುವಿರುವ ಸಕಾರಾತ್ಮಕ ವಾತಾವರಣಕ್ಕೆ ಸಾಕ್ಷಿಯಾಗಿದೆ ಮತ್ತು ಈ ರೀತಿಯ ದೀರ್ಘ ಪ್ರವಾಸಗಳಲ್ಲಿ ಇದು ಸಾಕಷ್ಟು ಸಹಾಯ ಮಾಡುತ್ತದೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಮೊಹಮ್ಮದ್ ಶಮಿ ಮತ್ತು ಇಶಾಂತ್ ಶರ್ಮಾ ಟೀಂ ಇಂಡಿಯಾ ಬೌಲಿಂಗ್ ವಿಭಾಗಕ್ಕೆ ಶಕ್ತಿ ತುಂಬಲಿದ್ದಾರೆ.

ಇದನ್ನೂ ಓದಿ: "ಜನರು ನಿವೃತ್ತರಾದಾಗ ದಂತಕಥೆಗಳಾಗುತ್ತಾರೆ. ಕೊಹ್ಲಿ 30 ನೇ ವಯಸ್ಸಿನಲ್ಲಿಯೇ ದಂತಕಥೆ"

ಈ ಮಧ್ಯೆ ಕೌಂಟಿ ಇಲೆವೆನ್ ತಂಡ 2ನೇ ದಿನದ ಅಭ್ಯಾಸ ಪಂದ್ಯದಲ್ಲಿ ಕೇವಲ 220 ರನ್ ಗಳಿಗೆ ಸರ್ವಪತನ ಕಂಡಿದ್ದು, ಟೀಂ ಇಂಡಿಯಾ ವಿರುದ್ಧ ಯಾವುದೇ ಪ್ರತಿರೋಧ ನೀಡುವಲ್ಲಿ ವಿಫಲವಾಗಿದೆ. ಈ ಪಂದ್ಯದಲ್ಲಿ ಉಮೇಶ್ ಯಾದವ್(Umesh Yadav) 3 ವಿಕೆಟ್ ಪಡೆದು ಮಿಂಚಿದ್ದು, ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಪ್ರಮುಖ ಪಾತ್ರ ವಹಿಸುವ ಭರವಸೆ ಮೂಡಿಸಿದ್ದಾರೆ. ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಅಕ್ಸರ್ ಪಟೇಲ್ ಮತ್ತು ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ನಲ್ಲಿ(World Test Championship) ಭಾರತ ತಂಡವು 8 ವಿಕೆಟ್ ಗಳಿಂದ ನ್ಯೂಜಿಲ್ಯಾಂಡ್ ಎದುರು ಸೋಲು ಕಂಡಿತ್ತು. ಆಗಸ್ಟ್ 4ರಂದು ಟ್ರೆಂಟ್ ಬಿಡ್ಜ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News