Viral Video: ಡ್ರೆಸ್ಸಿಂಗ್‌ ರೂಂ​ನಲ್ಲಿಯೇ ಸಿಗರೇಟ್‌ ಸೇದಿದ ಪಾಕ್​ ಆಟಗಾರ..!

Pakistan Super League 2024: ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ಕೂಡ ಆಗುತ್ತಿದೆ. ಅನೇಕರು ಇಮಾದ್‌ರನ್ನು ಟ್ರೋಲ್‌ ಮಾಡುತ್ತಿದ್ದಾರೆ. ಇನ್ನೂ ಅನೇಕರು ಆಟಗಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್‌ ಮಾಡಿದ್ದಾರೆ. ​

Written by - Puttaraj K Alur | Last Updated : Mar 21, 2024, 12:30 AM IST
  • ಡ್ರೆಸ್ಸಿಂಗ್‌ ರೂಂನಲ್ಲಿಯೇ ರಾಜಾರೋಷವಾಗಿ ಸಿಗರೇಟ್‌ ಸೇದಿದ ಇಮಾದ್ ವಾಸಿಂ
  • ಪಾಕಿಸ್ತಾನ್ ಸೂಪರ್ ಲೀಗ್‌ನ ಫೈನಲ್​ ಪಂದ್ಯದ ವೇಳೆ ನಡೆದಿರುವ ಘಟನೆ
  • ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿರುವ ವಿಡಿಯೋ
Viral Video: ಡ್ರೆಸ್ಸಿಂಗ್‌ ರೂಂ​ನಲ್ಲಿಯೇ ಸಿಗರೇಟ್‌ ಸೇದಿದ ಪಾಕ್​ ಆಟಗಾರ..! title=
ಸಿಗರೇಟ್‌ ಸೇದಿದ ಇಮಾದ್ ವಾಸಿಂ!

Pakistan Super League 2024: ಪಾಕಿಸ್ತಾನ್ ಸೂಪರ್ ಲೀಗ್‌ನ ಫೈನಲ್​ ಪಂದ್ಯದ ವೇಳೆ ಇಮಾದ್ ವಾಸಿಂ ಡ್ರೆಸ್ಸಿಂಗ್‌ ರೂಂನಲ್ಲಿಯೇ ರಾಜಾರೋಷವಾಗಿ ಸಿಗರೇಟ್‌ ಸೇದುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್‌ ಆಗಿದೆ. ಪಾಕ್‌ ಆಟಗಾರನ ಈ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದು ʼಪಾಕಿಸ್ತಾನ್‌ ಸ್ಮೋಕಿಂಗ್‌ ಲೀಗ್‌ʼ ಅಂತಾ ಅನೇಕರು ಕಾಮೆಂಟ್‌ ಮಾಡಿದ್ದಾರೆ. ಇನ್ನೂ ಅನೇಕರು ಫನ್ನಿ ಫನ್ನಿಯಾಗಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. 

ಇಸ್ಲಾಮಾಬಾದ್ ಯುನೈಟೆಡ್ ತಂಡದ ಆಲ್​ರೌಂಡರ್​ ಆಟಗಾರ ಇಮಾದ್ ವಾಸಿಂ ಫೈನಲ್​ ಪಂದ್ಯದಲ್ಲಿ 5 ವಿಕೆಟ್ ​ಕಿತ್ತು ತಮ್ಮ ತಂಡ ಚಾಂಪಿಯನ್​ ಆಗುವಲ್ಲಿ ಪ್ರಮುಖ ಪಾತ್ರಬಹಿಸಿದ್ದರು. ಗೆಲುವಿನ ಹೀರೋ ಎನಿಸಿಕೊಂಡಿದ್ದ ಈಮಾದ್ ಆ ಘಟನೆಯಿಂದ ನೆಟಿಜನ್ಸ್‌ ಪಾಲಿಗೆ ವಿಲನ್ ಆಗಿದ್ದಾರೆ. ಆತ ಡ್ರೆಸಿಂಗ್​ ರೂಂ​ನಲ್ಲಿಯೇ ರಾಜಾರೋಷವಾಗಿ ಸಿಗರೇಟ್​ ಸೇದಿದ್ದಾರೆ. ಈ ಬಗ್ಗೆ ಪಾಕ್​ ತಂಡದ ಹಲವು ಹಾಲಿ ಮತ್ತು ಮಾಜಿ ಆಟಗಾರರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: IPL 2024: 'ನನ್ನನ್ನು ಕಿಂಗ್ ಅಲ್ಲ ವಿರಾಟ ಅಂತ ಕರೆಯಿರಿ..' RCB ಆನ್ ಬಾಕ್ಸ್ ಇವೆಂಟ್ ನಲ್ಲಿ ಅಭಿಮಾನಿಗಳಿಗೆ ಮನವಿ ಮಾಡಿದ ಕೊಹ್ಲಿ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಮೊಹಮ್ಮದ್​ ರಿಜ್ವಾನ್‌ ಸಾರಥ್ಯದ ಮುಲ್ತಾನ್ ಸುಲ್ತಾನ್‌ ತಂಡವು ನಿಗದಿತ ೨೦ ಓವರ್‌ಗಳಿಗೆ 9 ವಿಕೆಟ್​​ ಕಳೆದುಕೊಂಡು 159 ರನ್‌ ಗಳಿಸಿತ್ತು. ಗುರಿ ಬೆನ್ನಟ್ಟಿದ ಇಸ್ಲಾಮಾಬಾದ್ ಯುನೈಟೆಡ್ 8 ವಿಕೆಟ್​ಗೆ 163 ರನ್​ ಗಳಿಸಿ ಗೆಲುವು ಸಾಧಿಸಿತು. ಈ ಪಂದ್ಯದ ಗೆಲುವಿಗೆ ಅಂತಿಮ ಎಸೆತದವರೆಗೂ ಹೋರಾಟ ನಡೆಸಿತು. ತಂಡದ ಪರ ಮಾರ್ಟಿನ್ ಗಪ್ಟಿಲ್(50) ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದರು. ಅಜಂ ಖಾನ್(30) ಮತ್ತು ಇಮಾದ್ ವಾಸಿಂ ಅಜೇಯ 19 ರನ್​ ಗಳಿಸಿದ್ದರು.

ಡ್ರೆಸ್ಸಿಂಗ್‌ ರೂಂನಲ್ಲಿಯೇ ರಾಜಾರೋಷವಾಗಿ ಸಿಗರೇಟ್‌ ಸೇದಿದ ಇಮಾದ್ ವಾಸಿಂ ನಡೆ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ಕೂಡ ಆಗುತ್ತಿದೆ. ಅನೇಕರು ಇಮಾದ್‌ರನ್ನು ಟ್ರೋಲ್‌ ಮಾಡುತ್ತಿದ್ದಾರೆ. ಇನ್ನೂ ಅನೇಕರು ಆಟಗಾರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್‌ ಮಾಡಿದ್ದಾರೆ. 

ಇದನ್ನೂ ಓದಿ: ಹೆಸರು ಬದಲಿಸಿ ಐಪಿಎಲ್‌ ಅಖಾಡಕ್ಕಿಳಿದ ಆರ್‌ಸಿ‌ಬಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News