"ಇನ್ಮುಂದೆ ರೋಹಿತ್ ಶರ್ಮಾ ನನ್ನ ಮಗ, ನೀನಲ್ಲ”- ಕೆಎಲ್ ರಾಹುಲ್ ಮುಖಕ್ಕೆ ಹೊಡೆದಂತೆ ಹೇಳಿದ ಸುನೀಲ್ ಶೆಟ್ಟಿ! ಶಾಕಿಂಗ್ ವಿಡಿಯೋ ವೈರಲ್

Suniel Shetty and KL Rahul IPL Advertisement: ಪಂದ್ಯಾವಳಿಯ ಆರಂಭಕ್ಕೂ ಮುನ್ನ ಸಂಘಟಕರು ವಿವಿಧ ಮನರಂಜನಾ ಜಾಹೀರಾತುಗಳನ್ನು ಪ್ರಸಾರ ಮಾಡುತ್ತಿದ್ದರು. ಅದರಲ್ಲಿ, ಮುಂಬೈ ಇಂಡಿಯನ್ಸ್‌ ಮಾಜಿ ನಾಯಕ ರೋಹಿತ್ ಶರ್ಮಾ, ಲಕ್ನೋ ಸೂಪರ್‌ಜೈಂಟ್ಸ್ (ಎಲ್‌ಎಸ್‌ಜಿ) ನಾಯಕ ಕೆಎಲ್ ರಾಹುಲ್ ಮತ್ತು ಬಾಲಿವುಡ್ ನಟ ಸುನೀಲ್ ಶೆಟ್ಟಿ ಕಾಣಿಸಿಕೊಂಡಿರುವ ಜಾಹೀರಾತು ಕೂಡ ಒಂದು.

Written by - Bhavishya Shetty | Last Updated : Mar 24, 2024, 02:46 PM IST
    • ಪಂದ್ಯಾವಳಿಯ ಆರಂಭಕ್ಕೂ ಮುನ್ನ ಮನರಂಜನಾ ಜಾಹೀರಾತುಗಳ ಪ್ರಸಾರ
    • ಲಕ್ನೋ ಆಟಗಾರ ರಾಹುಲ್’ರನ್ನು ಗೇಲಿ ಮಾಡಿದ ರೋಹಿತ್
    • ರೋಹಿತ್ ಮತ್ತು ಸುನೀಲ್ ಶೆಟ್ಟಿ ರೆಸ್ಟೋರೆಂಟ್ ಒಂದರಲ್ಲಿ ಕುಳಿತಿರುತ್ತಾರೆ
"ಇನ್ಮುಂದೆ ರೋಹಿತ್ ಶರ್ಮಾ ನನ್ನ ಮಗ, ನೀನಲ್ಲ”- ಕೆಎಲ್ ರಾಹುಲ್ ಮುಖಕ್ಕೆ ಹೊಡೆದಂತೆ ಹೇಳಿದ ಸುನೀಲ್ ಶೆಟ್ಟಿ! ಶಾಕಿಂಗ್ ವಿಡಿಯೋ ವೈರಲ್ title=
Suniel Shetty and KL Rahul

Suniel Shetty and KL Rahul IPL Advertisement: ಐಪಿಎಲ್ 17ನೇ ಸೀಸನ್ ಈಗಾಗಲೇ ಆರಂಭಗೊಂದಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಭರ್ಜರಿ ಜಯ ಸಾಧಿಸಿದೆ.

ಇನ್ನು ಪಂದ್ಯಾವಳಿಯ ಆರಂಭಕ್ಕೂ ಮುನ್ನ ಸಂಘಟಕರು ವಿವಿಧ ಮನರಂಜನಾ ಜಾಹೀರಾತುಗಳನ್ನು ಪ್ರಸಾರ ಮಾಡುತ್ತಿದ್ದರು. ಅದರಲ್ಲಿ, ಮುಂಬೈ ಇಂಡಿಯನ್ಸ್‌ ಮಾಜಿ ನಾಯಕ ರೋಹಿತ್ ಶರ್ಮಾ, ಲಕ್ನೋ ಸೂಪರ್‌ಜೈಂಟ್ಸ್ (ಎಲ್‌ಎಸ್‌ಜಿ) ನಾಯಕ ಕೆಎಲ್ ರಾಹುಲ್ ಮತ್ತು ಬಾಲಿವುಡ್ ನಟ ಸುನೀಲ್ ಶೆಟ್ಟಿ ಕಾಣಿಸಿಕೊಂಡಿರುವ ಜಾಹೀರಾತು ಕೂಡ ಒಂದು. ಆ ಜಾಹೀರಾತಿನಲ್ಲಿ ಸುನಿಲ್ ಶೆಟ್ಟಿ ಮುಂಬೈ ಟೀ ಶರ್ಟ್ ಧರಿಸಿ ಈ ತಂಡವನ್ನು ಬೆಂಬಲಿಸುತ್ತಿದ್ದು, ರೋಹಿತ್ ಲಕ್ನೋ ಆಟಗಾರ ರಾಹುಲ್ ಅವರನ್ನು ಗೇಲಿ ಮಾಡುತ್ತಿದ್ದಾರೆ.

ಇದನ್ನೂ ಓದಿ: Viral Video: ಮೆಟ್ರೋದಲ್ಲೇ ಬಣ್ಣ ಹಚ್ಚಿಕೊಂಡು ಹೋಳಿ ಹಬ್ಬದ ರೀಲ್ಸ್‌ ಮಾಡಿದ ಯುವತಿಯರು!

ರೋಹಿತ್ ಮತ್ತು ಸುನೀಲ್ ಶೆಟ್ಟಿ ರೆಸ್ಟೋರೆಂಟ್ ಒಂದರಲ್ಲಿ ಕುಳಿತಿರುತ್ತಾರೆ, ಅದೇ ಸಮಯಕ್ಕೆ ರಾಹುಲ್ ಅಲ್ಲಿಗೆ ಬರುತ್ತಾರೆ. ಆಗ ರೋಹಿತ್, ರಾಹುಲ್’ಗೆ 'ಫ್ಯಾಮಿಲಿ ಡಿನ್ನರ್ ನಡೆಯುತ್ತಿದೆ ಫ್ರೆಂಡ್' ಎಂದು ಹೇಳುತ್ತಾನೆ. ರಾಹುಲ್ ತಕ್ಷಣವೇ ಸುನೀಲ್ ಶೆಟ್ಟಿ ಕಡೆ ತಿರುಗಿ ‘ಪಪ್ಪಾ’ ಎಂದು ಕರೆಯುತ್ತಾರೆ. ಆದರೆ ರಾಹುಲ್‌’ರನ್ನು ತಡೆದು, “ಬೇಡ ಪಪ್ಪಾ, ಪಂದ್ಯಾವಳಿ ನಡೆಯುತ್ತಿರುವವರೆಗೂ ಶರ್ಮಾ ಅವರ ಮಗ ನನ್ನ ಮಗ' ಎಂದು ಹೇಳುತ್ತಾರೆ ಸುನಿಲ್ ಶೆಟ್ಟಿ. ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದ್ದು, ಸ್ವತಃ ರೋಹಿತ್ ಶರ್ಮಾ ಅವರೇ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. 

ಇದನ್ನೂ ಓದಿ:RGV ಈ ಹುಡ್ಗಿನ ಇಷ್ಟ ಪಟ್ಟಿದ್ದು ಏಕೆ ಅಂತ ಇವಾಗ ಗೊತ್ತಾಯ್ತು ಗುರು..! ಫೋಟೋಸ್‌ ನೋಡಿ

ವಿಡಿಯೋ ಅಪ್ಲೋಡ್ ಮಾಡುತ್ತಾ, 'ರಾಹುಲ್ ಜೊತೆ ಫ್ಯಾಮಿಲಿ ಟೈಮ್ ಮುಗಿದಿದೆ. ಈಗ ವಾರ್ ಶುರುವಾಗಿದೆ. ಸುನೀಲ್ ಶೆಟ್ಟಿ ಈಗ ನಮ್ಮವರು” ಎಂದು ಕ್ಯಾಪ್ಶನ್ ನೀಡಿ, ರಾಹುಲ್ ಮತ್ತು ಸುನಿಲ್ ಶೆಟ್ಟಿ ಅವರನ್ನು ಟ್ಯಾಗ್ ಮಾಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News