ಇಂದೋರ್: ಇಲ್ಲಿ ನಡೆದ ರಣಜಿ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ವಿದರ್ಭ ತಂಡವು ದೆಹಲಿಯನ್ನು 9 ವಿಕೆಟ್ಗಳಿಂದ ಸೋಲಿಸಿ ಮೊದಲ ಬಾರಿಗೆ ರಣಜಿ ಪ್ರಶಸ್ತಿಯನ್ನು ಎತ್ತಿ ಹಿಡಿದಿದೆ.
CHAMPIONS!
More pictures from Vidarbha's historical #RanjiTrophy victory pic.twitter.com/QfFGJTAL22— Cricbuzz (@cricbuzz) January 1, 2018
ಟಾಸ್ ಗೆದ್ದು ಫೀಲ್ಡಿಂಗ್ ಗೆ ಇಳಿದ ವಿದರ್ಭ ತಂಡವು ಮೊದಲ ಇನ್ನಿಂಗ್ಸ್ನಲ್ಲಿ ದೆಹಲಿಯನ್ನು 295 ರನ್ ಗಳಿಗೆ ಆಲೌಟ್ ಮಾಡಿತು. ವಿದರ್ಭದ ರಜನೀಶ್ ಗುರ್ಭಾನಿ ತಮ್ಮ ಪರಿಣಾಮಕಾರಿ ಬೌಲಿಂಗ್ ನಿಂದ ದೆಹಲಿಯ 6 ವಿಕೆಟ್ಗಳನ್ನು ತೆಗೆದುಕೊಂಡರು.
ದೆಹಲಿಯ 295 ರನ್ ಬೆನ್ನತ್ತಿದ ವಿದರ್ಭವು ತಂಡವು ತನ್ನ ಮೊದಲ ಇನಿಂಗ್ಸ್ನಲ್ಲಿ ಅಕ್ಷಯ ವಾಡೇಕರ್ ರವರ 133 ರನ್ಗಳ ನೆರವಿಂದ 547 ರನ್ ಗಳಿಸಿತು. ನಂತರ ದೆಹಲಿ ತಂಡವು ತನ್ನ ಎರಡನೆಯ ಇನ್ನಿಂಗ್ಸ್ ನಲ್ಲಿ 280 ರನ್ ಗಳಿಗೆ ತನ್ನ ಎಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. ಗೆಲುವಿಗೆ ಬೇಕಾಗಿದ್ದ 29 ರನ್ ಗಳ ಸುಲಭ ಗುರಿಯನ್ನು ವಿದರ್ಭ ತಂಡ ಮುಟ್ಟಿತು. ಆ ಮೂಲಕ ವಿದರ್ಭ ತಂಡ ಮೊದಲ ಬಾರಿಗೆ ಇಲ್ಲಿನ ಹೋಳ್ಕರ್ ಕ್ರೀಡಾಂಗಣದಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.