ವಯಾಕಾಮ್​18ಗೆ ಭಾರತದಲ್ಲಿ ಮೋಟೋ ಜಿಪಿ ನೇರಪ್ರಸಾರದ ಎಕ್ಸ್​ಕ್ಲೂಸಿವ್​ ಹಕ್ಕು

ಶುಕ್ರವಾರ ಮತ್ತು ಶನಿವಾರದ ಅಭ್ಯಾಸ ಅವಧಿಗಳು, ಶನಿವಾರದ ಅರ್ಹತಾ ಮತ್ತು ಸ್ಪ್ರಿಂಟ್​ ರೇಸ್​ಗಳು ಹಾಗೂ ಭಾನುವಾರದ ಪ್ರಧಾನ ರೇಸ್​ ಸಹಿತ ಸಮಗ್ರ ನೇರಪ್ರಸಾರದ ಪ್ರಸ್ತುತಿಯನ್ನು ನೆಟ್​ವರ್ಕ್​ ಮೋಟೋ ಜಿಪಿ ಅಭಿಮಾನಿಗಳಿಗೆ ಒದಗಿಸಿಕೊಡಲಿದೆ.

Written by - Zee Kannada News Desk | Edited by - Manjunath N | Last Updated : Mar 25, 2023, 09:27 PM IST
  • ವಯಾಕಾಮ್​18ಗೆ ಭಾರತದಲ್ಲಿ ಮೋಟೋ ಜಿಪಿ ನೇರಪ್ರಸಾರದ ಎಕ್ಸ್​ಕ್ಲೂಸಿವ್​ ಹಕ್ಕು
    -ಪೋರ್ಚುಗಲ್​ ಜಿಪಿಯೊಂದಿಗೆ ಮಾರ್ಚ್​ 24ರಿಂದ ಮೋಟಾರ್​ಸೈಕಲ್​ ರೇಸ್​ ಆರಂಭ
    -ಮೋಟೋ ಜಿಪಿ ಕ್ಯಾಲೆಂಡರ್​ಗೆ ಸೆಪ್ಟೆಂಬರ್​ 24ರಂದು ಭಾರತದ ಐತಿಹಾಸಿಕ ಪದಾರ್ಪಣೆಯೂ ಜಿಯೋ ಸಿನಿಮಾ ಮತ್ತು ಸ್ಪೋರ್ಟ್ಸ್​18ನಲ್ಲಿ ಪ್ರಸಾರ
ವಯಾಕಾಮ್​18ಗೆ ಭಾರತದಲ್ಲಿ ಮೋಟೋ ಜಿಪಿ ನೇರಪ್ರಸಾರದ ಎಕ್ಸ್​ಕ್ಲೂಸಿವ್​ ಹಕ್ಕು title=

ಮುಂಬೈ, ಮಾರ್ಚ್ 25, 2023: ಜಿಯೋ ಸಿನಿಮಾ ಮತ್ತು ಸ್ಪೋರ್ಟ್ಸ್18ನಲ್ಲಿ ಮೋಟೋ ಜಿಪಿಯನ್ನು ಎಕ್ಸ್​​ಕ್ಲೂಸಿವ್​ ಆಗಿ ನೇರಪ್ರಸಾರ ಮಾಡುವ ಹಕ್ಕುಗಳ ಹೊಸ ಒಪ್ಪಂದವನ್ನು ಪಡೆದುಕೊಂಡಿರುವುದಾಗಿ ವಯಾಕಾಮ್​18 ಇಂದು ಘೋಷಿಸುತ್ತಿದೆ. ಗ್ರ್ಯಾಂಡ್​​ ಪ್ರೀಮಿಯೊ ಡಿ ಪೋರ್ಚುಗಲ್​ ಮೂಲಕ ಈ ಕವರೇಜ್​ ಆರಂಭಗೊಂಡಿದೆ.

ಶುಕ್ರವಾರ ಮತ್ತು ಶನಿವಾರದ ಅಭ್ಯಾಸ ಅವಧಿಗಳು, ಶನಿವಾರದ ಅರ್ಹತಾ ಮತ್ತು ಸ್ಪ್ರಿಂಟ್​ ರೇಸ್​ಗಳು ಹಾಗೂ ಭಾನುವಾರದ ಪ್ರಧಾನ ರೇಸ್​ ಸಹಿತ ಸಮಗ್ರ ನೇರಪ್ರಸಾರದ ಪ್ರಸ್ತುತಿಯನ್ನು ನೆಟ್​ವರ್ಕ್​ ಮೋಟೋ ಜಿಪಿ ಅಭಿಮಾನಿಗಳಿಗೆ ಒದಗಿಸಿಕೊಡಲಿದೆ.

ಮೋಟೋ ಜಿಪಿ ವಿಶ್ವ ಚಾಂಪಿಯನ್​ಷಿಪ್​ ಜಗತ್ತಿನಲ್ಲೇ ಅತ್ಯಂತ ಉನ್ನತ ಮಟ್ಟದ ಮೋಟಾರ್​ಸೈಕಲ್​ ರೇಸಿಂಗ್​ ಆಗಿರುತ್ತದೆ. ಅದರಲ್ಲಿ ವಿಶ್ವದರ್ಜೆಯ, ಉನ್ನತ ನಿರ್ವಹಣೆಯ, ಪ್ರಪಂಚದ ಅತ್ಯುತ್ತಮ ತಯಾರಕರು ನಿರ್ಮಿಸಿದ ಅತಿವೇಗದ ಪ್ರೋಟೋಟೈಪ್​ ಮೋಟಾರ್​ಸೈಕಲ್​ಗಳೊಂದಿಗೆ ಅತ್ಯಂತ ಕೌಶಲದ ರೈಡರ್​​ಗಳು ಸ್ಪರ್ಧಿಸಲಿದ್ದಾರೆ. 2023ರ ಮೋಟೋ ಜಿಪಿ ಋತು ಅತ್ಯಧಿಕ ಸಿರೀಸ್​ಗಳ ದಿನಾಂಕವನ್ನು ಒಳಗೊಂಡಿರುತ್ತದೆ. 18 ದೇಶಗಳಲ್ಲಿ ಒಟ್ಟು 21 ರೇಸ್​ಗಳು ನಡೆಯಲಿವೆ. ಇದರಲ್ಲಿ ಭಾರತದಲ್ಲಿ ನಡೆಯುವ 14ನೇ ಸುತ್ತಿನ ರೇಸ್​ ಕೂಡ ಒಳಗೊಂಡಿರುತ್ತದೆ. ಈ ಮೂಲಕ ಮೋಟೋ ಜಿಪಿ ಭಾರತದಲ್ಲಿ ಪದಾರ್ಪಣೆಯನ್ನೂ ಮಾಡಲಿದೆ.

ಇದನ್ನೂ ಓದಿ: 40 ದಿನದ‌ ಕಂದಮ್ಮನನ್ನು ಕದ್ದು ಪರಾರಿಯಾಗಿದ್ದ ಬುರ್ಖಾ ಲೇಡಿ ಅಂದರ್‌..!

'ಮೋಟೋ ಜಿಪಿ ವಿಶ್ವದಲ್ಲೇ ಅತ್ಯಂತ ನಾಟಕೀಯ ಘಟನೆಗಳ ರೇಸಿಂಗ್ ಸ್ಪರ್ಧೆಯಾಗಿರುತ್ತದೆ. ಸೆಪ್ಟೆಂಬರ್​ನಲ್ಲಿ ಇದರ ಸರಣಿಯು ಭಾರತದಲ್ಲೂ ಐತಿಹಾಸಿಕ ಪದಾರ್ಪಣೆ ಮಾಡುತ್ತಿರುವುದರಿಂದ ಭಾರತದ ಕ್ರೀಡಾಭಿಮಾನಿಗಳು ವಿಶೇಷ ಮನರಂಜನೆ ಪಡೆಯಲಿದ್ದಾರೆ. ವಿಶ್ವದ ಅತ್ಯುತ್ತಮ ಮೋಟಾರ್​ಸೈಕಲ್​ ರೇಸಿಂಗ್​ ಶೋವನ್ನು ಭಾರತದಲ್ಲಿ ಕ್ರೀಡಾಭಿಮಾನಿಗಳಿಗೆ ಒದಗಿಸಿಕೊಡಲು ನಾವು ಕಾತರಗೊಂಡಿದ್ದೇವೆ. ಈ ವೈವಿಧ್ಯಮಯ ಕೊಡುಗೆಗಳಿಂದ ನಾವು ನಮ್ಮ ಅಭಿಮಾನಿ ಬಳಗವನ್ನು ವಿಸ್ತರಿಸಿಕೊಳ್ಳುತ್ತಿದ್ದೇವೆ' ಎಂದು ವಯಾಕಾಮ್​18 ಸ್ಪೋರ್ಟ್ಸ್​​​ನ ಸ್ಟ್ರಾಟಜಿ ಮತ್ತು ಪಾಲುದಾರಿಕೆಗಳ ಮುಖ್ಯಸ್ಥ ಹರ್ಷ್​ ಶ್ರೀವಾಸ್ತವ ಹೇಳಿದ್ದಾರೆ.

'ನಾವು ಭಾರತದಲ್ಲಿ ಬಹಳಷ್ಟು ಅಭಿಮಾನಿಗಳನ್ನು ಹೊಂದಿದ್ದೇವೆ ಮತ್ತು ನಾವು ಈ ಬಾರಿ ಅವರಿಗೆ ಕ್ರೀಡೆಯನ್ನು ಅವರ ಬಳಿ ತರಲು ಉತ್ಸುಕರಾಗಿದ್ದೇವೆ. ಭಾರತವು ಮೋಟಾರ್​ಸೈಕಲ್​ ಉದ್ಯಮಕ್ಕೆ ಪ್ರಮುಖ ಮಾರುಕಟ್ಟೆಯಾಗಿದೆ. ದ್ವಿಚಕ್ರ ಪ್ರಪಂಚದ ಪರಾಕಾಷ್ಠೆಯಾಗಿರುವ ಮೋಟೋ ಜಿಪಿಯನ್ನು ಭಾರತಕ್ಕೆ ವಿಸ್ತರಿಸುತ್ತಿದ್ದೇವೆ. ಭಾರತದಾದ್ಯಂತ ವ್ಯಾಪ್ತಿಯನ್ನು ಹೊಂದಿರುವ ವಯಾಕಾಮ್​ ಮೂಲಕ ಮೋಟೋ ಜಿಪಿಯನ್ನು ದೇಶದ ಎಲ್ಲ ಮೂಲೆಗಳಿಗೆ ತಲುಪಿಸಲು ಮತ್ತು ಈ ಅದ್ಭುತವಾದ ಕ್ರೀಡೆಯನ್ನು ಹೆಚ್ಚಿನ ಅಭಿಮಾನಿಗಳು ವೀಕ್ಷಿಸುವಂತೆ ಮಾಡಲು ನಾವು ತುಂಬಾ ಉತ್ಸುಕರಾಗಿದ್ದೇವೆ' ಎಂದು ಡೋರ್ನಾ ಸಿಇಒ ಕ್ಯಾರ್ಮೆಲೊ ಎಜ್ಪೆಲೆಟಾ ಹೇಳಿದ್ದಾರೆ.

ಇದನ್ನೂ ಓದಿ: "ಯಾರ್ಯಾರೋ ನಾನೇ ಸಿಎಂ ನಾನೇ ಸಿಎಂ ಎಂಬ ಭ್ರಮೆಯಲ್ಲಿದ್ದಾರೆ"

'ಅತ್ಯಂತ ರೋಮಾಂಚನಕಾರಿ ಕ್ರೀಡೆಯಾದ ಮೋಟೋ ಜಿಪಿಯನ್ನು ಭಾರತದಲ್ಲಿ ಪ್ರಸಾರ ಮಾಡಲು ವಯಾಕಾಮ್​18 ಅತ್ಯಂತ ಸಮರ್ಥ ಪಾಲುದಾರ ಎಂಬ ವಿಶ್ವಾಸ ನಮಗಿದೆ. ಟಿವಿ ಮತ್ತು ಒಟಿಟಿ ಫ್ಲ್ಯಾಟ್​ಫಾರ್ಮ್​ಗಳ ಮೂಲಕ ಅವರು ಅತ್ಯಂತ ವ್ಯಾಪಕವಾದ ವ್ಯಾಪ್ತಿಯನ್ನು ಹೊಂದಿದ್ದಾರೆ. ದೇಶದ ಹೆಚ್ಚಿನ ಜನರಿಗೆ ಮೋಟೋ ಜಿಪಿ ಕ್ರೀಡೆಯು ತಲುಪುವುದರಿಂದ ಅದು ನಮ್ಮ ರಾಷ್ಟ್ರದ ಹೊಸ ತಲೆಮಾರಿನ ಪ್ರತಿಭಾವಂತ ಸವಾರರಿಗೆ ಹೆಚ್ಚಿನ ಉತ್ತೇಜನವನ್ನು ನೀಡುತ್ತದೆ' ಎಂದು ಭಾರತದ ರೇಸ್​ನ ಪ್ರವರ್ತಕರಾಗಿರುವ ಫೇರ್​ಸ್ಟ್ರೀಟ್​ ಸ್ಪೋರ್ಟ್ಸ್​ ಸಿಒಒ ಪುಷ್ಕರ್​ ನಾಥ್​ ಶ್ರೀವಾಸ್ತವ ಅವರು ಸಹಯೋಗದ ಬಗ್ಗೆ ತಮ್ಮ ಉತ್ಸಾಹವನ್ನು ಹಂಚಿಕೊಂಡಿದ್ದಾರೆ. ಅವರು ಬ್ರಾಡ್​ಕಾಸ್ಟಿಂಗ್​ ಹಕ್ಕುಗಳ ಪರವಾನಗಿದಾರರೂ ಆಗಿದ್ದಾರೆ. 

ಮೋಟೋ ಜಿಪಿ ಕ್ರೀಡೆಯ ಸೇರ್ಪಡೆಯಿಂದ ವಯಾಕಾಮ್​18 ಸ್ಪೋರ್ಟ್ಸ್​ ತನ್ನ ವಿಶ್ವದರ್ಜೆಯ ಕ್ರೀಡಾಕೂಟಗಳ ವೈವಿಧ್ಯತೆಯನ್ನು ಹೆಚ್ಚಿಸಿಕೊಂಡಿದೆ. ವಯಾಕಾಮ್​18 ಸ್ಪೋರ್ಟ್ಸ್​ ಈಗಾಗಲೆ ಟಾಟಾ ಐಪಿಎಲ್​, ಟಾಟಾ ಡಬ್ಲ್ಯುಪಿಎಲ್​, ಡೈಮಂಡ್​ ಲೀಗ್​, ಫಿಫಾ ವಿಶ್ವಕಪ್​ ಕತಾರ್​-2022, ಎನ್​ಬಿಎ, ಲಾ ಲೀಗಾ, ಸೆರೀ ಎ, ಲೀಗ್​1 ಮತ್ತು ಆಯ್ದ ಬಿಡಬ್ಲ್ಯುಎಫ್​ ಟೂರ್ನಿಗಳ ಪ್ರಸಾರ ಹಕ್ಕು ಹೊಂದಿರುತ್ತದೆ. 

ಇದನ್ನೂ ಓದಿ: ಬಿಜೆಪಿಗರು ಕೌರವರು.. ಮದವೇರಿ ಮೆರೆಯುತ್ತಿದ್ದಾರೆ..!

ವೀಕ್ಷಕರು ಜಿಯೋ ಸಿನಿಮಾ ಆ್ಯಪ್​ (ಐಒಎಸ್​ ಮತ್ತು ಆಂಡ್ರಾಯ್ಡ್​) ಡೌನ್​ಲೋಡ್​ ಮಾಡಿಕೊಳ್ಳುವ ಮೂಲಕ ತಮ್ಮ ಆಯ್ಕೆಯ ಕ್ರೀಡೆಗಳನ್ನು ವೀಕ್ಷಿಸಬಹುದಾಗಿದೆ. ತಾಜಾ ಸುದ್ದಿಗಳು, ಸ್ಕೋರ್​, ವಿಡಿಯೋಗಳಿಗಾಗಿ ಅಭಿಮಾನಿಗಳು ಫೇಸ್​ಬುಕ್​, ಇನ್​ಸ್ಟಾಗ್ರಾಂ, ಟ್ವಿಟರ್​, ಯುಟ್ಯೂಬ್​ನಲ್ಲಿ ಸ್ಪೋರ್ಟ್ಸ್​18 ಮತ್ತು ಫೇಸ್​ಬುಕ್​, ಇನ್​ಸ್ಟಾಗ್ರಾಂ, ಟ್ವಿಟರ್​ ಮತ್ತು ಯುಟ್ಯೂಬ್​ನಲ್ಲಿ ಜಿಯೋ ಸಿನಿಮಾವನ್ನು ಫಾಲೋ ಮಾಡಬಹುದು.ಭಾರತದ ಸುತ್ತಿನ ಹೆಚ್ಚಿನ ಅಪ್​ಡೇಟ್​ಗಳಿಗಾಗಿ 'ಮೋಟೋ ಜಿಪಿ ಭಾರತ್​'ಅನ್ನು ಫೇಸ್​ಬುಕ್​, ಟ್ವಿಟರ್​ ಮತ್ತು ಇನ್​ಸ್ಟಾಗ್ರಾಂನಲ್ಲಿ ಫಾಲೋ ಮಾಡಿರಿ.

2023ರ ಮೋಟೋ ಜಿಪಿ ಕ್ಯಾಲೆಂಡರ್​
ದಿನಾಂಕ    ಸ್ಪರ್ಧೆ
ಮಾರ್ಚ್​ 24-26    ಗ್ರ್ಯಾಂಡ್​ ಪ್ರೀಮಿಯೊ ಡಿ ಪೋರ್ಚುಗಲ್​
ಮಾರ್ಚ್​ 31-ಏಪ್ರಿಲ್​ 2    ಗ್ರ್ಯಾನ್​​ ಪ್ರೀಮಿಯೊ ಡಿ ಲಾ ರಿಪಬ್ಲಿಕಾ ಅರ್ಜೆಂಟೀನಾ
ಏಪ್ರಿಲ್​ 14-16    ಗ್ರ್ಯಾಂಡ್​ ಪ್ರಿಕ್ಸ್​​ ಆಫ್​ ದಿ ಅಮೆರಿಕಾಸ್​
ಏಪ್ರಿಲ್​ 28-30    ಗ್ರ್ಯಾನ್​ ಪ್ರೀಮಿಯೊ ಡಿ ಇಸ್ಪಾನಾ
ಮೇ 12-14    ಗ್ರ್ಯಾಂಡ್​ ಪ್ರಿಕ್ಸ್ ಡಿ ಫ್ರಾನ್ಸ್
ಜೂನ್​ 09-11    ಗ್ರ್ಯಾನ್​ ಪ್ರಿಮಿಯೊ ಡಿ ಇಟಲಿಯಾ
ಜೂನ್​ 16-18    ಗ್ರ್ಯಾಂಡ್​ ಪ್ರಿಕ್ಸ್ ಡಾಯಾಚ್ಲೆಂಡ್​
ಜೂನ್​ 23-25    ಟಿಟಿ ಅಸೆನ್​, ನೆದರ್ಲೆಂಡ್​
ಜುಲೈ 7-9    ಗ್ರ್ಯಾಂಡ್​ ಪ್ರಿಕ್ಸ್​ ಆಫ್​ ಕಜಾಕ್​ಸ್ತಾನ
ಆಗಸ್ಟ್​ 4-6    ಬ್ರಿಟಿಷ್​ ಗ್ರ್ಯಾಂಡ್​ ಪ್ರಿಕ್ಸ್
ಆಗಸ್ಟ್​ 18-20    ಗ್ರ್ಯಾಂಡ್​ ಪ್ರಿಕ್ಸ್ ವೊನ್​ ಒಸ್ಟೆರಿಚ್​, ಆಸ್ಟ್ರಿಯಾ
ಸೆಪ್ಟೆಂಬರ್​ 1-3    ಗ್ರ್ಯಾನ್​ ಪ್ರೀಮಿ ಡಿ ಕ್ಯಾಟಲುನ್ಯಾ
ಸೆಪ್ಟೆಂಬರ್​ 8-10    ಗ್ರ್ಯಾನ್​ ಪ್ರಿಮಿಯೊ ಡಿ ಸ್ಯಾನ್​ ಮರಿನೊ, ಇಟಲಿ
ಸೆಪ್ಟೆಂಬರ್​ 22-24    ಗ್ರ್ಯಾಂಡ್​ ಪ್ರಿಕ್ಸ್ ಆಫ್​ ಇಂಡಿಯಾ
ಸೆಪ್ಟೆಂಬರ್ 29-ಅಕ್ಟೋಬರ್​ 1 ಗ್ರ್ಯಾಂಡ್​ ಪ್ರಿಕ್ಸ್ ಆಫ್​ ಜಪಾನ್​
ಅಕ್ಟೋಬರ್​ 13-15   ಗ್ರ್ಯಾಂಡ್ ಪ್ರಿಕ್ಸ್ ಆಫ್​ ಇಂಡೋನೇಷ್ಯಾ
ಅಕ್ಟೋಬರ್​ 20-22   ಆಸ್ಟ್ರೇಲಿಯನ್​ ಮೋಟಾರ್​ಸೈಕಲ್​ ಗ್ರ್ಯಾಂಡ್ ಪ್ರಿಕ್ಸ್​
ಅಕ್ಟೋಬರ್​ 27-29  ಥಾಯ್ಲೆಂಡ್​ ಗ್ರ್ಯಾಂಡ್​ ಪ್ರಿಕ್ಸ್
ನವೆಂಬರ್​ 10-12    ಗ್ರ್ಯಾಂಡ್ ಪ್ರಿಕ್ಸ್ ಆಫ್​ ಮಲೇಷ್ಯಾ
ನವೆಂಬರ್​ 17-19    ಗ್ರ್ಯಾಂಡ್ ಪ್ರಿಕ್ಸ್ ಆಫ್​ ಕತಾರ್​
ನವೆಂಬರ್​ 24-26    ಗ್ರ್ಯಾನ್​ ಪ್ರೀಮಿಯೊ ಡಿ ವಲೆನ್ಸಿಯಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News