ಕ್ರಿಕೆಟ್‌ ಲೋಕದ ಸರದಾರ ಮುತ್ತಯ್ಯ ಮುರಳೀಧರನ್ 5 'ಅಮರ' ದಾಖಲೆಗಳು: ಈ ರೆಕಾರ್ಡ್ಸ್‌ ಮುರಿಯುವುದು ಬಿಡಿ... ಸಮೀಪಕ್ಕೂ ಯಾರೂ ಬಂದಿಲ್ಲ, ಬರೋದು ಇಲ್ಲ!

 Muttiah Muralitharan Unbreakable Records: ಈ ವರದಿಯಲ್ಲಿ ವಿಶ್ವದ ಅತ್ಯಂತ ಯಶಸ್ವಿ ಮತ್ತು ಶ್ರೇಷ್ಠ ಬೌಲರ್ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರ 5 ದಾಖಲೆಗಳ ಬಗ್ಗೆ ಮಾತನಾಡಲಿದ್ದೇವೆ. ಈ ದಾಖಲೆಗಳನ್ನು ಯಾರಿಂದಲೂ ಮುರಿಯಲು ಸಾಧ್ಯವೇ ಇಲ್ಲ ಎಂದನಿಸುತ್ತದೆ.  

Written by - Bhavishya Shetty | Last Updated : Oct 10, 2024, 09:37 PM IST
    • 800 ವಿಕೆಟ್‌ಗಳನ್ನು ಮುಟ್ಟಿದ ವಿಶ್ವದ ಏಕೈಕ ಬೌಲರ್ ಮುರಳೀಧರನ್
    • ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಎಸೆತಗಳನ್ನು ಎಸೆದ ಬೌಲರ್
    • ಏಕದಿನ ಮಾದರಿಯಲ್ಲಿ ಕೇವಲ ಇಬ್ಬರು ಬೌಲರ್‌ಗಳು 500 ವಿಕೆಟ್‌ಗಳ ಗಡಿಯನ್ನು ಮುಟ್ಟಿದ್ದಾರೆ.
ಕ್ರಿಕೆಟ್‌ ಲೋಕದ ಸರದಾರ ಮುತ್ತಯ್ಯ ಮುರಳೀಧರನ್ 5 'ಅಮರ' ದಾಖಲೆಗಳು: ಈ ರೆಕಾರ್ಡ್ಸ್‌ ಮುರಿಯುವುದು ಬಿಡಿ... ಸಮೀಪಕ್ಕೂ ಯಾರೂ ಬಂದಿಲ್ಲ, ಬರೋದು ಇಲ್ಲ! title=
Muttiah Muralitharan

Muttiah Muralitharan Unbreakable World Records: ಮುತ್ತಯ್ಯ ಮುರಳೀಧರನ್... ಈ ಮಾಂತ್ರಿಕ ಬೌಲರ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿರುವವರೆಗೂ, ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದವರು. ಜೊತೆಗೆ ಕೆಲವು ದಾಖಲೆಗಳನ್ನು ನಿರ್ಮಿಸಿ ಅಚ್ಚರಿಗೀಡು ಮಾಡಿದವರು. ನಾವಿಂದು ಈ ವರದಿಯಲ್ಲಿ ವಿಶ್ವದ ಅತ್ಯಂತ ಯಶಸ್ವಿ ಮತ್ತು ಶ್ರೇಷ್ಠ ಬೌಲರ್ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರ 5 ದಾಖಲೆಗಳ ಬಗ್ಗೆ ಮಾತನಾಡಲಿದ್ದೇವೆ. ಈ ದಾಖಲೆಗಳನ್ನು ಯಾರಿಂದಲೂ ಮುರಿಯಲು ಸಾಧ್ಯವೇ ಇಲ್ಲ ಎಂದನಿಸುತ್ತದೆ.

ಇದನ್ನೂ ಓದಿ: ರಿವೀಲ್ ಆಯ್ತು ಟಾಕ್ಸಿಕ್ ಚಿತ್ರದ ಯಶ್ ಕ್ಯಾರೆಕ್ಟರ್?; ʼವಕೀಲ್ ಸಾಬ್ʼ ಅವತಾರದಲ್ಲಿ ರಾಕಿಭಾಯ್!

ಟೆಸ್ಟ್‌ನಲ್ಲಿ ವಿಶ್ವದಾಖಲೆ:
ಮುರಳೀಧರನ್ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದು, ಈ ಸ್ವರೂಪದಲ್ಲಿ 800 ವಿಕೆಟ್‌ಗಳನ್ನು ಮುಟ್ಟಿದ ವಿಶ್ವದ ಏಕೈಕ ಬೌಲರ್ ಮುರಳೀಧರನ್. ಅವರ ನಂತರ ಇರುವ ಎರಡನೇ ನಂಬರ್ ಬೌಲರ್ ನಡುವೆ 92 ವಿಕೆಟ್‌ಗಳ ಅಂತರವಿದೆ.

60,000 ಕ್ಕೂ ಹೆಚ್ಚು ಎಸೆತ:
ಮುರಳೀಧರನ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಕೆಟ್‌ಗಳು ಮಾತ್ರವಲ್ಲದೆ ಎಸೆತಗಳಿಂದಲೂ ವಿಶ್ವ ದಾಖಲೆಗಳನ್ನು ಕಾಯ್ದುಕೊಂಡಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಎಸೆತಗಳನ್ನು ಎಸೆದ ಬೌಲರ್. ಈ ಸ್ಪಿನ್ ರಾಜ ಎಲ್ಲಾ ಮೂರು ಸ್ವರೂಪಗಳಲ್ಲಿ ಒಟ್ಟು 63132 ಎಸೆತಗಳನ್ನು ಬೌಲ್ ಮಾಡಿದ್ದಾರೆ. ಇದು ಎರಡನೇ ನಂಬರ್ ಬೌಲರ್‌ಗಿಂತ ಸುಮಾರು 8000 ಎಸೆತಗಳು ಹೆಚ್ಚು.

324 ಪಂದ್ಯ-500 ಏಕದಿನ ವಿಕೆಟ್‌:
ಏಕದಿನ ಮಾದರಿಯಲ್ಲಿ ಕೇವಲ ಇಬ್ಬರು ಬೌಲರ್‌ಗಳು 500 ವಿಕೆಟ್‌ಗಳ ಗಡಿಯನ್ನು ಮುಟ್ಟಿದ್ದಾರೆ. ಮೊದಲ ಹೆಸರು ವಾಸಿಂ ಅಕ್ರಮ್ ಮತ್ತು ಎರಡನೇ ಹೆಸರು ಮುತ್ತಯ್ಯ ಮುರಳೀಧರನ್. ಈ ಇಬ್ಬರು ಶ್ರೇಷ್ಠರ ಪೈಕಿ ಮುರಳೀಧರನ್ ಅತ್ಯಂತ ವೇಗವಾಗಿ 500 ವಿಕೆಟ್‌ಗಳನ್ನು ಪೂರೈಸಿದ ಬೌಲರ್. ಏಕದಿನದಲ್ಲಿ ಅತಿ ಹೆಚ್ಚು 534 ವಿಕೆಟ್ ಪಡೆದ ಬೌಲರ್ ಮುರಳೀಧರನ್. ಅಲ್ಲದೆ, 324 ಪಂದ್ಯಗಳಲ್ಲಿ 500 ವಿಕೆಟ್‌ಗಳನ್ನು ಪೂರೈಸುವ ಮೂಲಕ, ಈ ಸ್ವರೂಪದಲ್ಲಿ ವೇಗವಾಗಿ 500 ವಿಕೆಟ್‌ಗಳನ್ನು ಪೂರೈಸಿದ ವಿಶ್ವದಾಖಲೆಯನ್ನು ನಿರ್ಮಿಸಿದ್ದಾರೆ

ಅತಿ ಹೆಚ್ಚು 5 ವಿಕೆಟ್:
ಮುರಳೀಧರನ್ ಅವರು ಎಲ್ಲಾ ಮೂರು ಸ್ವರೂಪಗಳಲ್ಲಿ ಒಟ್ಟು 5 ವಿಕೆಟ್ ಪಡೆದವರು ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಈ ಸ್ಪಿನ್ ರಾಜ ಅಂತರಾಷ್ಟ್ರೀಯ ಪಂದ್ಯ ಅಥವಾ ಇನ್ನಿಂಗ್ಸ್‌ನಲ್ಲಿ 77 ಬಾರಿ 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ನ ಲೆಜೆಂಡರಿ ಬೌಲರ್ ಸರ್ ರಿಚರ್ಡ್ ಹ್ಯಾಡ್ಲಿ ಅವರು 41 ಬಾರಿ ಈ ಅದ್ಭುತವನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:  ಈ ʼಕಾಯಿʼ ಮಧುಮೇಹಕ್ಕೆ ರಾಮಬಾಣ: ಊಟಕ್ಕೆ ಮುನ್ನ ಒಂದು ಪೀಸ್‌ ತಿಂದರೆ 45 ದಿನಗಳ ಕಾಲ ನಾರ್ಮಲ್‌ ಆಗಿರುತ್ತೆ ಬ್ಲಡ್‌ ಶುಗರ್!‌ ತೂಕ ಇಳಿಕೆಗೂ ಇದು ಸಹಾಯಕ

ದಾಖಲೆಯ 1347 ವಿಕೆಟ್:
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೇವಲ ಇಬ್ಬರು ಬೌಲರ್‌ಗಳು 1000 ಅಥವಾ ಅದಕ್ಕಿಂತ ಹೆಚ್ಚು ಬ್ಯಾಟ್ಸ್‌ಮನ್‌ಗಳ ವಿಕೆಟ್‌ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುರಳೀಧರನ್ ಮತ್ತು ಶೇನ್ ವಾರ್ನ್ ಹೆಸರುಗಳು ಈ ಪಟ್ಟಿಯಲ್ಲಿ ಸೇರಿವೆ. ಇದರಲ್ಲೂ ಮುರಳೀಧರನ್ ಗರಿಷ್ಠ 1347 ವಿಕೆಟ್‌ಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದ್ದು, 495 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡುವಾಗ ಇಷ್ಟು ವಿಕೆಟ್ ಪಡೆದಿದ್ದಾರೆ. ವಾರ್ನ್ ಅವರ ಹೆಸರಿನಲ್ಲಿ 1001 ಅಂತಾರಾಷ್ಟ್ರೀಯ ವಿಕೆಟ್‌ಗಳಿವೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

Trending News