Tulsi Meghwar: ಕ್ರೀಡಾ ಜಗತ್ತಿನಲ್ಲಿ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಿದ ಪಾಕಿಸ್ತಾನದ ಮೊದಲ ಹಿಂದೂ ಹುಡುಗಿ ಈಕೆ

Tulsi Meghwar: ಪ್ರಸ್ತುತ ಪಾಕಿಸ್ತಾನದ ಹಿಂದೂ ಹುಡುಗಿಯೊಬ್ಬಳು ಪ್ರಪಂಚದಾದ್ಯಂತ ಸುದ್ದಿಯಲ್ಲಿದ್ದಾಳೆ. ಈಕೆಯ ಹೆಸರು ತುಳಸಿ ಮೇಘವರ್. ಈಕೆ, ಪಾಕಿಸ್ತಾನ ದೇಶದ ಕ್ರೀಡಾ ಜಗತ್ತಿನಲ್ಲಿ ಹೆಸರು ಗಳಿಸುತ್ತಿರುವ ಮೊದಲ ಹಿಂದೂ ಹುಡುಗಿ. 

Written by - Yashaswini V | Last Updated : Dec 13, 2023, 08:12 AM IST
  • ಪಾಕಿಸ್ತಾನದ ಮೊದಲ ಹಿಂದೂ ಹುಡುಗಿಯೊಬ್ಬಳು ಸಾಫ್ಟ್‌ಬಾಲ್ ರಾಷ್ಟ್ರೀಯ ತಂಡಕ್ಕೆ ಪ್ರವೇಶ ಪಡೆದಿದ್ದಾರೆ.
  • ಈಕೆಯ ಹೆಸರು ತುಳಸಿ ಮೇಘವರ್.
  • ತುಳಸಿ ಮೇಘವರ್ ಮೊದಲ ಪಾಕಿಸ್ತಾನಿ ಹಿಂದೂ ಸಾಫ್ಟ್‌ಬಾಲ್ ಆಟಗಾರ್ತಿ
Tulsi Meghwar: ಕ್ರೀಡಾ ಜಗತ್ತಿನಲ್ಲಿ  ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಿದ ಪಾಕಿಸ್ತಾನದ ಮೊದಲ ಹಿಂದೂ ಹುಡುಗಿ ಈಕೆ title=

Tulsi Meghwar: ತುಳಸಿ ಮೇಘವರ್ ಪಾಕಿಸ್ತಾನದ ರಾಷ್ಟ್ರೀಯ ಸಾಫ್ಟ್‌ಬಾಲ್ ತಂಡಕ್ಕೆ ಆಯ್ಕೆಯಾಗಿದ್ದು ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತ ಭಾರೀ ಚರ್ಚೆಯಲ್ಲಿದ್ದಾರೆ. ಇದಕ್ಕೆ ಮುಖ್ಯ ಕಾರಣ ಈಕೆ ಕ್ರೀಡಾ ಜಗತ್ತಿನಲ್ಲಿ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಿದ ಪಾಕಿಸ್ತಾನದ ಮೊದಲ ಹಿಂದೂ ಹುಡುಗಿ. 

ತುಳಸಿ ಮೇಘವರ್ ಪಾಕಿಸ್ತಾನದ ಸಣ್ಣ ಪಟ್ಟಣಗಳಲ್ಲಿ ಒಂದಾದ ಜಮ್ಶೋರೋ ನಗರದವರು. ಈಕೆಗೆ ಕೇವಲ 21 ವರ್ಷ ವಯಸ್ಸು.  ತುಳಸಿ ಮೇಘವರ್ ಅವರು ಅಲ್ಲಿನ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಅಲ್ಲಿನ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವುದೇ ದೊಡ್ಡ ವಿಚಾರ. ಹಾಗಾಗಿ, ತುಳಸಿ ಮೇಘವರ್ ಅವರ ಈ ಅದ್ಭುತ ಕಾರ್ಯ ಪ್ರಪಂಚದಾದ್ಯಂತ ಚರ್ಚೆಯಾಗುತ್ತಿದೆ. 

ತುಳಸಿ ಮೇಘವರ್ ಮೊದಲ ಪಾಕಿಸ್ತಾನಿ ಹಿಂದೂ ಸಾಫ್ಟ್‌ಬಾಲ್ ಆಟಗಾರ್ತಿ:
ಮೊದಲೇ ತಿಳಿಸಿದಂತೆ ತುಳಸಿ ಮೇಘವರ್ ಸಾಫ್ಟ್‌ಬಾಲ್ ರಾಷ್ಟ್ರೀಯ ತಂಡದ ಭಾಗವಾಗಿರುವ ಪಾಕಿಸ್ತಾನದ ಮೊದಲ ಹಿಂದೂ ಹುಡುಗಿ.  ವಾಸ್ತವವಾಗಿ, ತುಳಸಿ ಮೇಘವರ್ 2016ರಲ್ಲಿ ಏಳನೇ ತರಗತಿಯಲ್ಲಿದ್ದಾಗ ಶಾಲೆಯಲ್ಲಿ ಆಯೋಜಿಸಿದ್ದ ಶಿಬಿರದ ಮೂಲಕ ಮೊತ್ತ ಮೊದಲ ಬಾರಿ ಸಾಫ್ಟ್‌ಬಾಲ್ ಆಡಿದ್ದರು. ಈಕೆಯ ಪ್ರತಿಭೆಯನ್ನು ಕಂಡು ತರಬೇತುದಾರರು  ಈಕೆಗೆ ಪ್ರೋತ್ಸಾಹ ನೀಡಿದ್ದರು. ಆಕೆಯ ತಂದೆ ಹರ್ಜಿ ಲಾಲ್ ಸಮುದಾಯದ ವಿರೋಧದ ನಡುವೆಯೂ ಮಗಳಿಗೆ ಶಿಕ್ಷಣ ನೀಡುವ ಧೈರ್ಯದ ಹೆಜ್ಜೆ ಇಟ್ಟರು. 

ಇದನ್ನೂ ಓದಿ- ಜೂನಿಯರ್ ಹಾಕಿ ವಿಶ್ವಕಪ್: ನೆದರ್ಲೆಂಡ್ಸ್ ಮಣಿಸಿ ಸೆಮಿಫೈನಲ್‌ ಪ್ರವೇಶಿಸಿದ ಭಾರತ

6 ಬಾರಿ ನ್ಯಾಷನಲ್  ಪಂದ್ಯಗಳನ್ನು ಆಡಿರುವ ತುಳಸಿ ಮೇಘವರ್: 
ಮಾಧ್ಯಮ ವರದಿಗಳ ಪ್ರಕಾರ, ತುಳಸಿ ಮೇಘವರ್ ಇಲ್ಲಿಯವರೆಗೆ 6 ಬಾರಿ ನ್ಯಾಷನಲ್ ಗೇಮ್ ಆಡಿದ್ದಾರೆ. ಸದ್ಯ ಕೊಟ್ರಿ ಗಲ್ಸ್ ಕಾಲೇಜಿನಲ್ಲಿ ಪ್ರಿ ಇಂಜಿನಿಯರಿಂಗ್ ನಲ್ಲಿ ಇಂಟರ್ ಮೀಡಿಯೇಟ್ ಮಾಡಿದ್ದಾರೆ. 

ತಂದೆ ಧೈರ್ಯವೇ ಈಕೆಗೆ ಶಕ್ತಿ: 
ಪಾಕಿಸ್ತಾನದಲ್ಲಿ ಹಿಂದೂಗಳ ಸ್ಥಿತಿ ಅಷ್ಟು ಉತ್ತಮವಾಗಿಲ್ಲ. ಅದರಲ್ಲೂ, ಹೆಣ್ಣು ಮಕ್ಕಳ ಸ್ಥಿತಿಯಂತು ತುಂಬಾ ಹೀನಾಯವಾಗಿದೆ. ಪ್ರತಿನಿತ್ಯ ಅಲ್ಲಿ ಹೆಣ್ಣು ಮಕ್ಕಳ ಅಪಹರಣ, ಬಲವಂತದ ಮತಾಂತರ, ಮದುವೆಯಂತಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಅಂತಹ ಪರಿಸ್ಥಿತಿಯಲ್ಲಿ ತಮ್ಮ ಹೆಣ್ಣುಮಕ್ಕಳ ಸುರಕ್ಷತೆಯ ಕಾರಣದಿಂದ ಸಮುದಾಯವು ತಮ್ಮ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಅವರನ್ನು ಹೊರಗೆ ಕಳುಹಿಸುವುದನ್ನು ನಿಲ್ಲಿಸಿದೆ. ಹೀಗಿರುವಾಗ ಸಮುದಾಯದ ವಿರೋಧದ ನಡುವೆಯೂ ಮಗಳಿಗೆ ಶಿಕ್ಷಣ, ತರಬೇತಿ ನೀಡುವ ಧೈರ್ಯ ಮಾಡಿರುವ ತಂದೆ ಧೈರ್ಯವೇ ಈಕೆಗೆ ಶಕ್ತಿ ಎಂದು ಮಾಧ್ಯಮಗಳು ವರದಿ ಮಾಡಿವೆ. 

ಇದನ್ನೂ ಓದಿ- ENG vs IND Test Squad: ಇಂಗ್ಲೆಂಡ್ ಟೆಸ್ಟ್ ಸರಣಿಗೆ ತಂಡ ಪ್ರಕಟ, 19 ವರ್ಷದ ಆಟಗಾರನಿಗೆ ಖುಲಾಯಿಸಿದ ಅದೃಷ್ಟ

ತುಳಸಿ ಮೇಘವರ್ ಅವರನ್ನು ಹೊರತುಪಡಿಸಿ ಇನ್ನೂ 8 ಹುಡುಗಿಯರನ್ನು ತಂಡದಲ್ಲಿ ಆಯ್ಕೆ ಮಾಡಲಾಗಿದೆ. ಆದರೆ ಭದ್ರತಾ ಕಾರಣಗಳಿಂದ ಅವರ ಕುಟುಂಬಗಳು ತಮ್ಮ ಹೆಣ್ಣು ಮಕ್ಕಳನ್ನು ಆಡಲು ಕಳುಹಿಸಲಿಲ್ಲ ಎಂದು ತುಳಸಿಯ ತಂದೆ ಹರ್ಜಿ ಲಾಲ್ ಹೇಳುತ್ತಾರೆ.

ತುಳಸಿ ಮೇಘವರ್ ಅವರ ಈ ಸಾಧನೆ ಬಗ್ಗೆ ಮಾತನಾಡಿರುವ ಆಕೆಯ ತರಬೇತುದಾರ ಆಯೇಶಾ ಇರಾಮ್ ಅವರು ಸಿಂಧ್ ಪ್ರಾಂತ್ಯದಲ್ಲಿ ತುಳಸಿ ಇತರರಿಗೆ ಮಾದರಿ ಮತ್ತು ಭರವಸೆಯ ಕಿರಣವಾಗಿದ್ದಾರೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News