T20I Fastest Century: ಅತೀ ವೇಗದ ಶತಕ ಬಾರಿಸಿದ ಟಾಪ್ 5 ಆಟಗಾರರು ಇವರು

T20I Fastest Century: ಜಾನ್ ನಿಕೋಲ್ ಟಿ20 ಕ್ರಿಕೆಟ್‌ನಲ್ಲಿ 35 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಸೆಂಚುರಿ ಬಾರಿಸಿದ ವಿಶ್ವದ 5ನೇ ಬ್ಯಾಟರ್ ಆಗಿದ್ದಾರೆ.

Written by - Chetana Devarmani | Last Updated : Feb 28, 2024, 07:36 AM IST
  • ಟಿ20 ಕ್ರಿಕೆಟ್‌ನ ಅತೀ ವೇಗದ ಶತಕ ದಾಖಲೆ
  • ಕಡಿಮೆ ಎಸೆತಗಳಲ್ಲಿ ಸೆಂಚುರಿ ಬಾರಿಸಿದ ಆಟಗಾರರು
  • ನಮೀಬಿಯಾ ಬ್ಯಾಟರ್ ಜಾನ್ ನಿಕೋಲ್
T20I Fastest Century: ಅತೀ ವೇಗದ ಶತಕ ಬಾರಿಸಿದ ಟಾಪ್ 5 ಆಟಗಾರರು ಇವರು  title=

T20I Fastest Century: ನಮೀಬಿಯಾ ಬ್ಯಾಟರ್ ಜಾನ್ ನಿಕೋಲ್ ಲೋಫ್ಟಿ ಟಿ20 ಕ್ರಿಕೆಟ್‌ನ ಅತೀ ವೇಗದ ಶತಕ ಬಾರಿಸಿ ಹೊಸ ದಾಖಲೆ ಬರೆದಿದ್ದಾರೆ. ನೇಪಾಳ ವಿರುದ್ಧದ ಪಂದ್ಯದಲ್ಲಿ 33 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. ಜಾನ್ ನಿಕೋಲ್ ಟಿ20 ಕ್ರಿಕೆಟ್‌ನಲ್ಲಿ 35 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಸೆಂಚುರಿ ಬಾರಿಸಿದ ವಿಶ್ವದ 5ನೇ ಬ್ಯಾಟರ್ ಆಗಿದ್ದಾರೆ. 

ಜಾನ್ ನಿಕೋಲ್ ಲೋಫ್ಟಿ: ನೇಪಾಳ ವಿರುದ್ಧದ ಪಂದ್ಯದಲ್ಲಿ ನಮೀಬಿಯಾ ಆಟಗಾರ ಜಾನ್ ನಿಕೋಲ್ 8 ಭರ್ಜರಿ ಸಿಕ್ಸ್​ ಹಾಗೂ 11 ಫೋರ್‌ ಬಾರಿಸುವ ಮೂಲಕ ಕೇವಲ 33 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ  ಅತೀ ವೇಗದ ಶತಕ ಸಿಡಿಸಿ ವಿಶ್ವ ದಾಖಲೆ ಬರೆದಿದ್ದಾರೆ.

ಡೇವಿಡ್ ಮಿಲ್ಲರ್: ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲಿ 2017 ರಲ್ಲಿ ಸೌತ್ ಆಫ್ರಿಕಾದ ಡೇವಿಡ್ ಮಿಲ್ಲರ್ 35 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. 

ಇದನ್ನೂ ಓದಿ: 6,6,6,6.. ರೋಹಿತ್-ಗೇಲ್ ಹಿಂದಿಕ್ಕಿ ಅತ್ಯಂತ ವೇಗದಲ್ಲಿ T20 ಶತಕ ಬಾರಿಸಿದ್ದಾನೆ ಈ ಆಟಗಾರ! 

ರೋಹಿತ್ ಶರ್ಮಾ: 2017 ರಲ್ಲಿ ಭಾರತ ಕ್ರಿಕೆಟ್‌ ತಂಡದ ಹಿಟ್‌ ಮ್ಯಾನ್‌ ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧ ಕೇವಲ 35 ಎಸೆತಗಳಲ್ಲಿ ಸೆಂಚುರಿ ಸಿಡಿಸಿದರು. ಅಂದು ಅವರು ಡೇವಿಡ್ ಮಿಲ್ಲರ್ ಅವರ ರೆಕಾರ್ಡ್‌ ಬ್ರೇಕ್‌ ಮಾಟಿದ್ದರು. 

ಎಸ್ ವಿಕ್ರಮಶೇಖರ: 2019 ರಲ್ಲಿ ಜೆಕ್ ರಿಪಬ್ಲಿಕ್ ತಂಡದ ಆಟಗಾರ ಎಸ್ ವಿಕ್ರಮಶೇಖರ ಟರ್ಕಿ ವಿರುದ್ಧದ ಪಂದ್ಯದಲ್ಲಿ 35 ಎಸೆತಗಳಲ್ಲಿ ಶತಕ ಬಾರಿಸಿ ರೋಹಿತ್‌ ಶರ್ಮಾ ದಾಖಲೆಯನ್ನು ಸರಿಗಟ್ಟಿದ್ದರು.

ಕುಶಾಲ್ ಮಲ್ಲ: ಏಷ್ಯನ್ ಗೇಮ್ಸ್ 2023 ರ ಪಂದ್ಯದಲ್ಲಿ ನೇಪಾಳ ತಂಡದ ಎಡಗೈ ಬ್ಯಾಟರ್ ಕುಶಾಲ್ ಮಲ್ಲ ಮಂಗೋಲಿಯಾ ವಿರುದ್ಧ ಅತಿ ವೇಗದ ಶತಕ ಸಿಡಿಸಿದರು. ಕೇವಲ 34 ಎಸೆತಗಳಲ್ಲಿ ಶತಕ ಹೊಡೆಯುವ ಮೂಲಕ ದಾಖಲೆ ಬರೆದರು. 

ಇದನ್ನೂ ಓದಿ: RCBಗೆ ಬಿಗ್ ಶಾಕ್.. IPL ನಿಂದ ದೂರ ಉಳಿಯುತ್ತಾರಾ ವಿರಾಟ್ ಕೊಹ್ಲಿ? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News