ನವದೆಹಲಿ: Tokyo Paralympics 2020 - ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ (Tokyo Paralympics) ಭಾರತದ ಖಾತೆಗೆ ಮತ್ತೊಂದು ಚಿನ್ನ ಸೇರ್ಪಡೆಯಾಗಿದೆ. ಪ್ರಮೋದ್ ಭಗತ್ (Pramod Bhagat) ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ SL3 (Badminton Men's Singles SL3) ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
A dominant #Gold medal for #IND 🔥 💪
World No. 1⃣ Pramod Bhagat overcomes a second set deficit to win 21-14, 21-17 against #GBR's Daniel Bethell in the #ParaBadminton Men's Singles SL3 Final!
India's 2nd 🥇medal of the day! 😍#Tokyo2020 #Paralympics @PramodBhagat83 pic.twitter.com/UnmkTecHrE
— #Tokyo2020 for India (@Tokyo2020hi) September 4, 2021
ಇತಿಹಾಸ ಬರೆದ ಪ್ರಮೋದ್
ಇದೇ ವರ್ಷ ಮೊದಲ ಬಾರಿಗೆ ಬ್ಯಾಡ್ಮಿಂಟನ್ ಅನ್ನು ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಸೇರಿಸಲಾಗಿದೆ. ವಿಶ್ವ ನಂಬರ್ ಒನ್ ಆಟಗಾರ ಪ್ರಮೋದ್ ಭಗತ್ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ. ಯೋಗತ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 45 ನಿಮಿಷಗಳ ರೋಚಕ ಫೈನಲ್ ಪಂದ್ಯದಲ್ಲಿ ಭಗತ್ ಎರಡನೇ ಶ್ರೇಯಾಂಕಿತ ಡೇನಿಯಲ್ ಬೆಥೆಲ್ ಅವರನ್ನು 21-14 21-17 ಅಂತರದಿಂದ ಸೋಲಿಸಿದ್ದಾರೆ.
ಪ್ರಮೋದ್ ಗೆ ಶುಭಾಷಯಗಳನ್ನು ಕೋರಿದ ಪ್ರಧಾನಿ ಮೋದಿ
ಈ ಕುರಿತು ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಚಿನ್ನದ ಹುಡುಗನನ್ನು ಅಭಿನಂದಿರಿಸುವ ಪ್ರಧಾನಿ ನರೇಂದ್ರ ಮೋದಿ ಅವರು , 'ಪ್ರಮೋದ್ ಭಗತ್ ಇಡೀ ರಾಷ್ಟ್ರದ ಹೃದಯ ಗೆದ್ದು, ಚಾಂಪಿಯನ್ ಆಗಿದ್ದಾರೆ. ಅವರ ಯಶಸ್ಸು ಲಕ್ಷಾಂತರ ಜನರನ್ನು ಪ್ರೆರೆಪಿಸಲಿದೆ. ಅವರು ಪ್ರಚಂಡ ದೃಢ ಸಂಕಲ್ಪ ತೋರಿಸಿದ್ದಾರೆ.. ಬ್ಯಾಡ್ಮಿಂಟನ್ ನಲ್ಲಿ ಚಿನ್ನ ಗೆದ್ದ ಅವರಿಗೆ ಅಭಿನಂದನೆಗಳು. ಅವರ ಭವಿಷ್ಯಕ್ಕೆ ಶುಭ ಹಾರೈಕೆಗಳು' ಎಂದಿದ್ದಾರೆ.
Pramod Bhagat has won the hearts of the entire nation. He is a Champion, whose success will motivate millions. He showed remarkable resilience & determination. Congratulations to him for winning the Gold in Badminton. Best wishes to him for his future endeavours. @PramodBhagat83
— Narendra Modi (@narendramodi) September 4, 2021
ಕಂಚಿಗೆ ತೃಪ್ತಿಪಟ್ಟುಕೊಂಡ ಮನೋಜ್
ಭಾರತದ (India) ಎರಡನೇ ಶಟ್ಲರ್ ಮನೋಜ್ ಸರ್ಕಾರ್ (Manoj Sarkar) ಟೋಕಿಯೋ ಪ್ಯಾರಾಲಿಂಪಿಕ್ಸ್ ನ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಕ್ಲಾಸ್ ಎಸ್ ಎಲ್ 3 (Badminton Men's Singles SL3) ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕೆ (Bronze Medal) ತೃಪ್ತಿಪಟ್ಟುಕೊಂಡಿದ್ದಾರೆ.
Manoj does it for 🇮🇳! #IND's Manoj Sarkar bags the #Bronze medal in #ParaBadminton Men's Singles SL3, getting the better of #JPN's Daisuke Fujihara. 🥉
For the second time today, 2⃣ Indians make up the podium places. Wow. #Tokyo2020 #Paralympics pic.twitter.com/CrW8NMBC3v
— #Tokyo2020 for India (@Tokyo2020hi) September 4, 2021
ಮನೋಜ್ ಸರ್ಕಾರ್ ಅವರ ಬೆನ್ನುತಟ್ಟಿದ ಪ್ರಧಾನಿ ಮೋದಿ
ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿಯವರು ಮನೋಜ್ ಸರ್ಕಾರ ಅವರ ಬೆನ್ನನ್ನೂ ಕೂಡ ತಟ್ಟಿದ್ದಾರೆ, ಈ ಕುರಿತು ಟ್ವಿಟರ್‌ನಲ್ಲಿ ಬರೆದುಕೊಂಡ ಪ್ರಧಾನಿ, "ಮನೋಜ್ ಸರ್ಕಾರ್ ಅವರ ಅತ್ಯುತ್ತಮ ಪ್ರದರ್ಶನದಿಂದ ಉತ್ಸಾಹಿತನಾಗಿದ್ದೇನೆ, ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕವನ್ನು ತಂದಿದ್ದಕ್ಕಾಗಿ ಅವರಿಗೂ ಕೂಡ ಅಭಿನಂದನೆಗಳು. ಅವರ ಉತ್ತಮ ಭವಿಷ್ಯಕ್ಕಾಗಿ ಅವರಿಗೆ ಅನೇಕ ಶುಭಾಶಯಗಳು" ಎಂದಿದ್ದಾರೆ.
Overjoyed by @manojsarkar07’s wonderful performance. Congrats to him for bringing home the prestigious Bronze Medal in badminton. Wishing in the very best for the times ahead. #Paralympics #Praise4Para
— Narendra Modi (@narendramodi) September 4, 2021
ಇದನ್ನೂ ಓದಿ-Tokyo Paralympics: ಅರ್ಚರಿಯಲ್ಲಿ ಕಂಚು ಗೆದ್ದು ಇತಿಹಾಸ ನಿರ್ಮಿಸಿದ ಹರ್ವಿಂದರ್ ಸಿಂಗ್
ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಖಾತೆಯಲ್ಲಿ 17 ಪದಕಗಳು
4 ಚಿನ್ನ, 7 ಬೆಳ್ಳಿ ಮತ್ತು 6 ಕಂಚಿನೊಂದಿಗೆ ಒಟ್ಟು 17 ಪದಕಗಳು ಇದೀಗ ಭಾರತದ ಖಾತೆಗೆ ಬಂದಿವೆ, ಟೋಕಿಯೊ ಪ್ಯಾರಾಲಿಂಪಿಕ್ಸ್ ನ ಪದಕ ಪಟ್ಟಿಯಲ್ಲಿ ಭಾರತ 25 ನೇ ಸ್ಥಾನವನ್ನು ತಲುಪಿದ್ದು, ಈ ಕ್ರೀಡಾಕೂಟದ (Paralympics 2020) ಇತಿಹಾಸದಲ್ಲಿಯೇ ಭಾರತದ ಅತ್ಯುತಮ ಸಾಧನೆ ಇದಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.