ನವದೆಹಲಿ: ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟ(Tokyo Olympics 2020)ದಲ್ಲಿ ನೀರಜ್ ಚೋಪ್ರಾ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಶನಿವಾರ ನಡೆದ ಜಾವೆಲಿನ್ ಥ್ರೋ ಫೈನಲ್ ಪಂದ್ಯದಲ್ಲಿ 87.58 ಮೀಟರ್ ಎಸೆದು ನೀರಜ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಇದರೊಂದಿಗೆ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಪದಕ ಪಡೆದ ಮೊದಲ ಆಟಗಾರ ಎನಿಸಿಕೊಂಡರು.
#NeerajChopra sirf naam hi kaafi hai pic.twitter.com/36jc9C3tst
— Athletics Federation of India (@afiindia) August 7, 2021
From Khandra Village, home of #NeerajChopra @WorldAthletics pic.twitter.com/6Kgz76qzJj
— Athletics Federation of India (@afiindia) August 7, 2021
THE KING BRINGS IT HOME 🇮🇳
125 years of wait ends here in AFI's 75th year. We are speechless champion #NeerajChopra#Tokyo2020 #Athletics pic.twitter.com/w0WFmYTch7
— Athletics Federation of India (@afiindia) August 7, 2021
ಅರ್ಹತಾ ಸುತ್ತಿನಲ್ಲಿ 86.59 ಮೀ. ದೂರಕ್ಕೆ ಜಾವೆಲಿನ್ ಎಸೆದು(Javelin Throw)ಅಗ್ರಸ್ಥಾನ ಪಡೆದಿದ್ದ ನೀರಜ್ ಚಿನ್ನದ ಮೇಲೆ ಕಣ್ಣಿಟ್ಟಿದ್ದರು. ಅದರಂತೆ ಅವರು ಮಹತ್ವದ ಸಾಧನೆ ಮಾಡಿದ್ದು, ಚಿನ್ನದ ಪದಕವನ್ನು ತಮ್ಮ ಕೊರಳಿಗೆ ಹಾಕಿಕೊಂಡಿದ್ದಾರೆ. ಫೈನಲ್‌ನಲ್ಲೂ ಅವರು ತಮ್ಮ ಲಯವನ್ನು ಮುಂದುವರಿಸಿದ ಪರಿಣಾಮ ಚಿನ್ನದ ಬೇಟೆಯಾಡಲು ಸಾಧ್ಯವಾಯಿತು. ಅತ್ಯಂತ ವಿಶ್ವಾಸದಲ್ಲಿಯೇ ಕಣಕ್ಕಿಳಿದ ನೀರಜ್ ಚೋಪ್ರಾ(Neeraj Chopra) 87.58 ಮೀ. ದೂರಕ್ಕೆ ಜಾವೆಲಿನ್ ಎಸೆದು ಹೊಸ ದಾಖಲೆ ನಿರ್ಮಿಸಿದರು. ಈ ಮೂಲಕ ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಚಿನ್ನದವನ್ನು ತಂದುಕೊಟ್ಟ ಸಾಧನೆ ಮಾಡಿದ್ದಾರೆ.
.@Neeraj_chopra1 creates history by becoming the 1st Indian Track & Field athlete to clinch 🥇 at the #Olympics with a throw of 87.58m
His dedication & hard work has paid off and has given 🇮🇳 it's 2nd individual Olympic #Gold medal
Perfect podium finish for #IND at #Tokyo2020 pic.twitter.com/ZNZ7ZRFlCJ
— SAIMedia (@Media_SAI) August 7, 2021
‘ಚಿನ್ನ’ದ ಬರ ನೀಗಿಸಿದ ನೀರಜ್ ಚೋಪ್ರಾ
ಟೋಕಿಯೊ ಒಲಂಪಿಕ್ಸ್ ಜಾವೆಲಿನ್ ಥ್ರೋನಲ್ಲಿ ಚಿನ್ನಕ್ಕೆ ಗುರಿ ಇಟ್ಟ ನೀರಜ್ ಚೋಪ್ರಾ(Neeraj Chopra) ಭಾರತದ ಚಿನ್ನದ ಬರ ನೀಗಿಸಿದ್ದಾರೆ. ಬಂಗಾರದ ಪದಕ ಗೆಲ್ಲುವ ಮೂಲಕ ನೀರಜ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಫೈನಲ್ ಪಂದ್ಯದ ಆರಂಭದಿಂದಲೂ ಉತ್ತಮ ಪ್ರದರ್ಶನ ತೋರಿದ ನೀರಜ್ ಅಂತಿಮವಾಗಿ ಚಿನ್ನಕ್ಕೆ ಕೊರಳೊಡಿದ್ದರು. ಮೊದಲ ಪ್ರಯತ್ನದಲ್ಲಿ 87.03 ಮೀ., 2ನೇ ಪ್ರಯತ್ನದಲ್ಲಿ 87.58 ಮೀ., ಹಾಗೂ 3ನೇ ಪ್ರಯತ್ನದಲ್ಲಿ 76.79 ಮೀ. ಜಾವೆಲಿನ್ ಎಸೆದರು.
13 ವರ್ಷದ ಬಳಿಕ ಭಾರತಕ್ಕೆ ಚಿನ್ನ
ಭಾರತದ ಒಲಿಂಪಿಕ್ಸ್ ನಲ್ಲಿ 13 ವರ್ಷಗಳ ಬಳಿಕ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದೆ. 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ 100 ಮೀ. ಏರ್ ರೈಫಲ್ ಶೂಟಿಂಗ್ ನಲ್ಲಿ ಅಭಿನವ್ ಬಿಂದ್ರಾ(Abhinav Bindra)ಬಂಗಾರದ ಪದಕ ಗೆದಿದ್ದರು. ಆ ಬಳಿಕ ನಡೆದ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಯಾವೊಬ್ಬ ಕ್ರೀಡಾಪಟುಗಳು ಚಿನ್ನಕ್ಕೆ ಮುತ್ತಿಕ್ಕಿರಲಿಲ್ಲ. ಇದೀಗ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇಡೀ ದೇಶವೇ ನೀರಜ್ ಚೋಪ್ರಾ ಅವರ ಸಾಧನಗೆ ಸಲಾಂ ಎಂದಿದೆ.
ರಾಷ್ಟ್ರಪತಿ, ಪ್ರಧಾನಿ ಮೋದಿ ಅಭಿನಂದನೆ
Unprecedented win by Neeraj Chopra!Your javelin gold breaks barriers and creates history. You bring home first ever track and field medal to India in your first Olympics. Your feat will inspire our youth. India is elated! Heartiest congratulations!
— President of India (@rashtrapatibhvn) August 7, 2021
History has been scripted at Tokyo! What @Neeraj_chopra1 has achieved today will be remembered forever. The young Neeraj has done exceptionally well. He played with remarkable passion and showed unparalleled grit. Congratulations to him for winning the Gold. #Tokyo2020 https://t.co/2NcGgJvfMS
— Narendra Modi (@narendramodi) August 7, 2021
ಜಾವೆಲಿನ್ ಎಸೆತ(Javelin Throw)ದಲ್ಲಿ ಬಂಗಾರದ ಪದಕ ಗೆದ್ದು ಇಡೀ ದೇಶಕ್ಕೆ ಹೆಮ್ಮೆ ತಂದ ‘ಚಿನ್ನ’ದಂತಹ ಪುತ್ರನಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. ದೇಶಾದ್ಯಂತ ಸಂಭ್ರಮಾಚರಣೆ ನಡೆಸಯುತ್ತಿದ್ದು, ಚಿನ್ನ ಗೆದ್ದ ನೀಜರ್ ಸಾಧನೆಯನ್ನು ಇಡೀ ದೇಶದ ಜನರು ಕೊಂಡಾಡುತ್ತಿದ್ದಾರೆ.
ಟೋಕಿಯೋ ಒಲಿಂಪಿಕ್ಸ್(Tokyo Olympics 2020)ನಲ್ಲಿ ಭಾರತ ಈವರೆಗೆ ಒಟ್ಟು 7 ಪದಕಗಳನ್ನು ಗೆದ್ದಿದೆ. ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಚಿನ್ನ ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಹಾಗೂ ರಸ್ಲಿಂಗ್‌ನಲ್ಲಿ ರವಿಕುಮಾರ್ ಬೆಳ್ಳಿ ಪದಕ ಗೆದ್ದಿದ್ದರೆ, ಮಹಿಳಾ ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ.ಸಿಂಧು, ಮಹಿಳಾ ಬಾಕ್ಸಿಂಗ್‌ನಲ್ಲಿ ಲವ್ಲಿನಾ ಬೋರ್ಗೊಹೈನ್ ಹಾಗೂ ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದುಕೊಂಡಿದೆ. ಪದಕ ಪಟ್ಟಿಯಲ್ಲಿ ಭಾರತ 1 ಚಿನ್ನ, 2 ಬೆಳ್ಳಿ, 4 ಕಂಚಿನ ಪದಕಗಳೊಂದಿಗೆ 47ನೇ ಸ್ಥಾನವನ್ನು ಅಲಂಕರಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ