ನವದೆಹಲಿ: ಟೋಕಿಯೊ ಒಲಂಪಿಕ್ಸ್(Tokyo Olympics 2020)ನಲ್ಲಿ ಭಾರತದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್(Lovlina Borgohain) ಭಾರತಕ್ಕೆ 3ನೇ ಪದಕ ತಂದುಕೊಟ್ಟಿದ್ದಾರೆ. ಇಂದು ನಡೆದ ಸಮಿಫೈನಲ್ ಪಂದ್ಯದಲ್ಲಿ ಟರ್ಕಿಯ ಬುಸೆನಾಜ್ ಸುರ್ಮೆನೆಲಿ ವಿರುದ್ಧ 5-0 ಅಂತರದಲ್ಲಿ ಸೋಲು ಕಾಣುವ ಮೂಲಕ ಲವ್ಲಿನಾ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಬಾಕ್ಸಿಂಗ್ನಲ್ಲಿ ಮೇರಿಕೋಮ್ ಬಳಿಕ ಕಂಚಿನ ಪದಕ ಗೆದ್ದ ಭಾರತದ 2ನೇ ಮಹಿಳೆಯಾಗಿ ಲವ್ಲಿನಾ ಸಾಧನೆ ಮಾಡಿದ್ದಾರೆ. ಮಹಿಳಾ ಬಾಕ್ಸಿಂಗ್(Womens Boxing)ನ 69 ಕೆಜಿ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿಅಗ್ರ ಶ್ರೇಯಾಂಕಿತೆ ಟರ್ಕಿಯ ಬುಸೆನಾಜ್ ವಿರುದ್ಧ ಲವ್ಲಿನಾ ಪ್ರತಿರೋಧ ಒಡ್ಡಲು ಸಾಧ್ಯವಾಗಲಿಲ್ಲ. ಎದುರಾಳಿಯ ಆಕ್ರಮಣಕಾರಿ ಆಟಕ್ಕೆ ತಿರುಗಿ ಬೀಳಲು ಲವ್ಲಿನಾ ವಿಫಲರಾದರು. ಹೀಗಾಗಿ 5-0 ಅಂತರದಿಂದ ಸೋಲು ಕಂಡು ನಿರಾಸೆ ಮೂಡಿಸಿದರು.
ಇದನ್ನೂ ಓದಿ: Tokyo Olympics 2020 Updates: ಫ್ರೀ ಸ್ಟೈಲ್ ಕುಸ್ತಿ ಪಂದ್ಯದಲ್ಲಿ ಸೆಮಿಫೈನಲ್ ಹಂತ ತಲುಪಿದ ರವಿ ದಹಿಯಾ, ದೀಪಕ್ ಪುನಿಯಾ
India’s @LovlinaBorgohai goes down to Turkey’s Surmeneli Busenaz in the semifinal of the 69 Kg weight category 0-5 to win a bronze medal at the #Tokyo2020
With this she becomes the third Indian pugilist to win a medal at the Olympics.
Stay tuned for more updates. #Cheer4India pic.twitter.com/Corn5mpFof— SAIMedia (@Media_SAI) August 4, 2021
ಸೆಮಿಫೈನಲ್(Semi Final) ಪ್ರವೇಶಿಸುವ ಮೂಲಕ ಲಿವ್ಲಿನಾ ಭಾರತಕ್ಕೆ ಕಂಚಿನ ಪದಕವನ್ನು ಖಾತ್ರಿಪಡಿಸಿದ್ದರು. ಚಿನ್ನದ ಗುರಿ ಇಟ್ಟಿದ್ದ ಅವರಿಗೆ 4ರ ಘಟ್ಟದಲ್ಲಿ ನಿರಾಸೆಯಾಯಿತು. ಇದಕ್ಕೂ ಮುನ್ನ 64-69 ಕೆಜಿ ವಿಭಾಗದಲ್ಲಿ ನಡೆದ ಕ್ವಾರ್ಟರ್ಫೈನಲ್ ಕಾದಾಟದಲ್ಲಿ ಚೈನೀಸ್ ತೈಪೆಯ ಮಾಜಿ ಚಾಂಪಿಯನ್ ನಿಯೆನ್ ಚಿನ್ ಚೆನ್ ಅವರನ್ನು ಸೋಲಿಸುವ ಮೂಲಕ ಲವ್ಲಿನಾ 4ರ ಘಟ್ಟಕ್ಕೆ ಎಂಟ್ರಿಯಾಗಿದ್ದರು.
23 ವರ್ಷದ ಲವ್ಲಿನಾ ಕಂಚಿನ ಪದಕ(Bronze Medal) ಸಾಧನೆ ಮಾಡುವ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಒಲಂಪಿಕ್ಸ್ ನಲ್ಲಿ ಪದಕ ಗೆದ್ದ ಭಾರತದ 3ನೇ ಬಾಕ್ಸರ್ ಆಗಿ ಅವರು ಹೊರಹೊಮ್ಮಿದ್ದಾರೆ. 2008ರಲ್ಲಿ ವಿಜೇಂದರ್ ಸಿಂಗ್ ಮತ್ತು 2012ರಲ್ಲಿ ಮೇರಿಕೋಮ್ ಕಂಚಿನ ಪದಕ ಗೆದಿದ್ದರು. ಬಾಕ್ಸಿಂಗ್ ನಲ್ಲಿ ಕಂಚಿನ ಪದಕ ಸಾಧನೆ ಮಾಡುವ ಮೂಲಕ ಭಾರತದ ಕೀರ್ತಿ ಪತಾಕೆ ಹಾರಿಸಿರುವ ಲವ್ಲಿನಾಗೆ ಅನೇಕ ಗಣ್ಯರು ಶುಭಾಶಯ ತಿಳಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ಇನ್ನೂ ಹೆಚ್ಚಿನ ಪದಕಗಳು ಬರಲಿವೆ: ಪಿ.ವಿ.ಸಿಂಧು
ವೇಟ್‌ಲಿಫ್ಟಿಂಗ್ ನಲ್ಲಿ ಸೈಖೋಮ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದರೆ, ಬ್ಯಾಡ್ಮಿಂಟನ್ ನಲ್ಲಿ ಪಿ.ವಿ.ಸಿಂಧು(PV Sindhu) ಕಂಚಿನ ಪದಕ ಗೆದ್ದಿದ್ದಾರೆ. ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತ 1 ಬೆಳ್ಳಿ, 2 ಕಂಚು ಗೆಲ್ಲುವ ಮೂಲಕ ಸದ್ಯ ಪದಕ ಪಟ್ಟಿಯಲ್ಲಿ 62ನೇ ಸ್ಥಾನದಲ್ಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ