Tokyo Olympics: ಭಾರತಕ್ಕೆ ಮತ್ತೊಂದು ದೊಡ್ಡ ಯಶಸ್ಸು, ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆದ ದೀಪಿಕಾ ಕುಮಾರಿ

Tokyo Olympics: ಮೂರನೇ ಬಾರಿಗೆ ಒಲಿಂಪಿಕ್ಸ್ ಆಡುತ್ತಿರುವ ದೀಪಿಕಾ ಕುಮಾರಿ, ಒಲಿಂಪಿಕ್ ಬಿಲ್ಲುಗಾರಿಕೆ ಸ್ಪರ್ಧೆಯ ಅಂತಿಮ ಎಂಟಕ್ಕೆ ತಲುಪಿದ ಮೊದಲ ಭಾರತೀಯ ಬಿಲ್ಲುಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕ್ವಾರ್ಟರ್ ಫೈನಲ್‌ನಲ್ಲಿ ದೀಪಿಕಾ ದಕ್ಷಿಣ ಕೊರಿಯಾ ಸ್ಯಾನ್ ಆನ್ ಅವರನ್ನು ಎದುರಿಸಲಿದ್ದಾರೆ.

Written by - Yashaswini V | Last Updated : Jul 30, 2021, 09:41 AM IST
  • ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಪಡೆದ ದೀಪಿಕಾ ಕುಮಾರಿ
  • ಪಂದ್ಯವನ್ನು 6-5ರಿಂದ ಗೆದ್ದ ದೀಪಿಕಾ
  • ದೀಪಿಕಾ ಕ್ವಾರ್ಟರ್ ಫೈನಲ್ ನಲ್ಲಿ ಸ್ಯಾನ್ ಎನ್ ಅವರನ್ನು ಎದುರಿಸಲಿದ್ದಾರೆ
Tokyo Olympics: ಭಾರತಕ್ಕೆ ಮತ್ತೊಂದು ದೊಡ್ಡ ಯಶಸ್ಸು, ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆದ ದೀಪಿಕಾ ಕುಮಾರಿ title=
Tokyo Olympics 2020

ಟೋಕಿಯೊ: ಭಾರತೀಯ ಮಹಿಳಾ ಬಿಲ್ಲುಗಾರರಾದ ದೀಪಿಕಾ ಕುಮಾರಿ ಟೋಕಿಯೊ ಒಲಿಂಪಿಕ್ಸ್‌ನ (Tokyo Olympics) ವೈಯಕ್ತಿಕ ಸ್ಪರ್ಧೆಯ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ. ಯುಮೆನೋಶಿಮಾ ಫೈನಲ್ ಫೀಲ್ಡ್ ನಲ್ಲಿ ನಡೆದ 1/8 ಎಲಿಮಿನೇಷನ್ ಸುತ್ತಿನಲ್ಲಿ ದೀಪಿಕಾ ಕುಮಾರಿ 6-5 ರ ಆರ್ಓಸಿಯ ಕೀನ್ಯಾ ಪೆರೋವಾ ಅವರನ್ನು ಮಣಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆದರು.

ಕ್ವಾರ್ಟರ್ ಫೈನಲ್‌ನಲ್ಲಿ ದೀಪಿಕಾ ಕುಮಾರಿ:
ದೀಪಿಕಾ ಕುಮಾರಿ (Deepika Kumari) ಮೊದಲ ಸೆಟ್‌ನ್ನು 28-25ರಿಂದ ಗೆದ್ದು 2-0 ಮುನ್ನಡೆ ಸಾಧಿಸಿದ್ದರು. ಆದರೆ ಪೆರೋವಾ ಎರಡನೇ ಸೆಟ್‌ ಅನ್ನು 27-26 ಗೆದ್ದು ಸ್ಕೋರ್‌ ಅನ್ನು 2-2 ಮಾಡಿದರು. ನಂತರ ದೀಪಿಕಾ ಎರಡನೇ ಸೆಟ್ ಅನ್ನು 28-27 ಗೆದ್ದು 4-2 ಮುನ್ನಡೆ ಸಾಧಿಸಿದರು. ಆದರೆ ಪೆರೋವಾ ಮುಂದಿನ ಸೆಟ್ ನಲ್ಲಿ ತನ್ನ ಮಟ್ಟವನ್ನು ಉಳಿಸಿಕೊಂಡು ಸ್ಕೋರ್ ಅನ್ನು 5-3 ಕ್ಕೆ ಇಳಿಸಿದರು.

ಇದನ್ನೂ ಓದಿ- Tokyo Olympics 2020: ಮ್ಯಾಚ್ ಗೂ ಮುನ್ನ ಜುಡೋ ಅಥ್ಲೀಟ್ ಗೆ ಕೋಚ್ ನಿಂದ ಕಪಾಳಮೋಕ್ಷ, ಆಶ್ಚರ್ಯಕ್ಕೊಳಗಾದ ಪ್ರೇಕ್ಷಕರು

ಪಂದ್ಯವನ್ನು 6-5ರಿಂದ ಗೆದ್ದ ದೀಪಿಕಾ :
ನಂತರ ಪೆರೋವಾ ಐದನೇ ಸೆಟ್ ಅನ್ನು 28-25 ರಿಂದ ಗೆದ್ದು ಸ್ಕೋರ್ ಅನ್ನು 5-5ಕ್ಕೆ ತಂದರು. ಆದರೆ, ಇದರ ನಂತರ ಒಂದು ಶೂಟ್ ಆಫ್ ಪಾಯಿಂಟ್ ಆಯೋಜಿಸಲಾಯಿತು, ಇದರಲ್ಲಿ ದೀಪಿಕಾ 7 ವಿರುದ್ಧ 10 ಅಂಕಗಳನ್ನು ಪಡೆಯುವ ಮೂಲಕ ಪಂದ್ಯವನ್ನು 6-5ರಲ್ಲಿ ಗೆದ್ದರು.

ಇದನ್ನೂ ಓದಿ- Viral Video: ಬೆಳ್ಳಿ ಗೆದ್ದ ಮೀರಾಬಾಯಿ ಚಾನುಗೆ ಸಿಕ್ಕಿತು ಚಿನ್ನದಂತಹ ಸ್ವಾಗತ..!

ಕ್ವಾರ್ಟರ್‌ಫೈನಲ್‌ನಲ್ಲಿ ದೀಪಿಕಾ ಸ್ಯಾನ್ ಎನ್ ಅವರನ್ನು ಎದುರಿಸಲಿದ್ದಾರೆ:
ಮೂರನೇ ಬಾರಿಗೆ ಒಲಿಂಪಿಕ್ಸ್ (Olympics) ಆಡುತ್ತಿರುವ ದೀಪಿಕಾ ಕುಮಾರಿ, ಒಲಿಂಪಿಕ್ ಆರ್ಚರಿ ಸ್ಪರ್ಧೆಯ ಕೊನೆಯ ಎಂಟನ್ನು ತಲುಪಿದ ಮೊದಲ ಭಾರತೀಯ ಬಿಲ್ಲುಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ದೀಪಿಕಾ ದಕ್ಷಿಣ ಕೊರಿಯಾ ಸ್ಯಾನ್ ಆನ್ ಅವರನ್ನು ಎದುರಿಸಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News