Tokyo Olympics 2020, PV Sindhu: 2 ಒಲಿಂಪಿಕ್ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ ಪಿ.ವಿ. ಸಿಂಧು

Tokyo Olympics 2020, PV Sindhu: ಪಿವಿ ಸಿಂಧು ಈ ಹಿಂದೆ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

Written by - Yashaswini V | Last Updated : Aug 2, 2021, 07:11 AM IST
  • ಭಾನುವಾರ ನಡೆದ ಪಂದ್ಯದಲ್ಲಿ ಪಿ.ವಿ. ಸಿಂಧು (PV Sindhu) ಅವರು ಬಿಂಗ್ ಕ್ಸಿಯಾವೊ ಅವರನ್ನು ಎರಡು ನೇರ ಸೆಟ್ಗಳಲ್ಲಿ ಸೋಲಿಸಿ ಪದಕ ಗೆದ್ದರು
  • ಪಿ.ವಿ. ಸಿಂಧು ಈ ಹಿಂದೆ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು
  • ಅದಕ್ಕೂ ಮುನ್ನ ಕುಸ್ತಿಪಟು ಸುಶೀಲ್ ಕುಮಾರ್ ಪುರುಷರ ವಿಭಾಗದಲ್ಲಿ ಎರಡು ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಎರಡು ಪದಕಗಳನ್ನು ಗೆದ್ದಿದ್ದಾರೆ
Tokyo Olympics 2020, PV Sindhu: 2 ಒಲಿಂಪಿಕ್ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ ಪಿ.ವಿ. ಸಿಂಧು title=
Image courtesy: Twitter

Tokyo Olympics 2020, PV Sindhu: ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು (PV Sindhu) ಭಾನುವಾರ ಚೀನಾದ ಹೀ ಬಿಂಗ್ ಕ್ಸಿಯಾವೊ ಅವರನ್ನು ಸೋಲಿಸುವ ಮೂಲಕ ಇತಿಹಾಸ ಸೃಷ್ಟಿಸಿದರು. ಸಿಂಧು ಕೇವಲ ಕಂಚಿನ ಪದಕ ಗೆದ್ದಿಲ್ಲ, ಜೊತೆಗೆ ಭಾರತದ ಒಲಿಂಪಿಕ್ ಇತಿಹಾಸದಲ್ಲಿ ಸತತ ಎರಡು ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಗೆದ್ದ ಮೊದಲ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಭಾನುವಾರ ನಡೆದ ಪಂದ್ಯದಲ್ಲಿ ಪಿ.ವಿ. ಸಿಂಧು (PV Sindhu) ಅವರು ಬಿಂಗ್ ಕ್ಸಿಯಾವೊ ಅವರನ್ನು ಎರಡು ನೇರ ಸೆಟ್ಗಳಲ್ಲಿ ಸೋಲಿಸಿ ಪದಕ ಗೆದ್ದರು. ಅವರು ಮೊದಲ ಸೆಟ್ ನಲ್ಲಿ ಕ್ಸಿಯಾವೊ ಅವರನ್ನು 21-13ರಿಂದ ಸೋಲಿಸಿದರು. ಇದರ ನಂತರ, ಎರಡನೇ ಸೆಟ್ ನಲ್ಲಿ ಅವರು 21-15ರಿಂದ ಗೆಲುವಿನ ಕದ ತಟ್ಟಿದರು. ಪಿವಿ ಸಿಂಧು 52 ನಿಮಿಷಗಳ ಆಟದ ನಂತರ ಕಂಚಿನ ಪದಕ ಗೆದ್ದರು.

ಇದನ್ನೂ ಓದಿ- Tokyo Olympics 2020: ಸೆಮಿಸ್‌ನಲ್ಲಿ ಪಿ.ವಿ.ಸಿಂಧುಗೆ ಸೋಲು, ಚಿನ್ನದ ಕನಸು ಭಗ್ನ!

ಪಿ.ವಿ. ಸಿಂಧು ಈ ಹಿಂದೆ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಅದಕ್ಕೂ ಮುನ್ನ ಕುಸ್ತಿಪಟು ಸುಶೀಲ್ ಕುಮಾರ್ ಪುರುಷರ ವಿಭಾಗದಲ್ಲಿ ಎರಡು ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಎರಡು ಪದಕಗಳನ್ನು ಗೆದ್ದಿದ್ದಾರೆ. ಟೋಕಿಯೊ ಒಲಿಂಪಿಕ್ಸ್ (Tokyo Olympics) ನಲ್ಲಿ ಸೆಮಿಫೈನಲ್ ಪಂದ್ಯದಲ್ಲಿ ಸಿಂಧು ಸೋಲನ್ನು ಎದುರಿಸಬೇಕಾಯಿತು. ನಂತರ ಅವರು ಭಾನುವಾರ ಚೀನಾದ ಹೀ ಬಿಂಗ್ ಕ್ಸಿಯಾವೊ ವಿರುದ್ಧ ಕಂಚಿನ ಪದಕದ ಪಂದ್ಯದಲ್ಲಿ 3 ನೇ ಸ್ಥಾನಕ್ಕಾಗಿ ಆಡಿದರು.

ಇದನ್ನೂ ಓದಿ- Tokyo Olympics 2020: ಭಾರತಕ್ಕೆ ಮತ್ತೊಂದು ಪದಕ, ಕಂಚಿಗೆ ಮುತ್ತಿಕ್ಕಿದ ಪಿ.ವಿ.ಸಿಂಧು

ಪಿವಿ ಸಿಂಧು ವಿರುದ್ಧ ಅವರು ಬಿಂಗ್ ಕ್ಸಿಯಾವೊ ಅವರ ಪ್ರದರ್ಶನ ಅತ್ಯುತ್ತಮವಾಗಿತ್ತು. ಮತ್ತೊಂದು ಮಹತ್ವದ ವಿಷಯವೆಂದರೆ ಸಿಂಧು ಜೊತೆ ಕ್ಸಿಯಾವೊ ಇದುವರೆಗೂ 15 ಪಂದ್ಯಗಳಲ್ಲಿ ಆಡಿದ್ದು, ಒಂಬತ್ತು ಪಂದ್ಯಗಳನ್ನು ಗೆದ್ದಿದ್ದಾರೆ. ಆದರೆ ಸಿಂಧು ಕೇವಲ ಆರು ಪಂದ್ಯಗಳನ್ನು ಗೆದ್ದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News