ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತದ ಟೆಸ್ಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಹೊಸ ದಾಖಲೆ ಸೃಷ್ಟಿ!

IND vs BAN: ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ತಂಡ 280 ರನ್‌ಗಳ ಗೆಲುವು ಸಾಧಿಸಿದ್ದು ಹೊಸ ದಾಖಲೆಯನ್ನು ಸಹ ಸೃಷ್ಟಿಸಿದೆ. ಈ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿತ್ತು. ಈ ಮೂಲಕ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದೆ.

Written by - Puttaraj K Alur | Last Updated : Sep 22, 2024, 06:48 PM IST
  • ಬಾಂಗ್ಲಾದೇಶದ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದಲ್ಲಿ 280 ರನ್‌ಗಳ ಭರ್ಜರಿ ಗೆಲುವು
  • ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೆಸ್ಟ್ ಇತಿಹಾಸದಲ್ಲೇ ಮೊದಲ ಬಾರಿ ಹೊಸ ದಾಖಲೆ ಸೃಷ್ಟಿ!
  • ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾದ ಪ್ರದರ್ಶನ
ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತದ ಟೆಸ್ಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಹೊಸ ದಾಖಲೆ ಸೃಷ್ಟಿ! title=
ಬಾಂಗ್ಲಾ ವಿರುದ್ಧ ವಿಶೇಷ ದಾಖಲೆ!

IND vs BAN: ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ ತಂಡವು 280 ರನ್‌ಗಳ ಭರ್ಜರಿ ಗೆಲುವಿನೊಂದಿಗೆ ಆರಂಭಿಸಿದೆ. ಬಾಂಗ್ಲಾದೇಶ ತಂಡವು ಚೆನ್ನೈ ಟೆಸ್ಟ್ ಪಂದ್ಯದ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಗೆಲ್ಲಲು 515 ರನ್‌ಗಳ ಗುರಿಯನ್ನು ಹೊಂದಿತ್ತು. ಆದರೆ ಬಾಂಗ್ಲಾ 2ನೇ ಇನ್ನಿಂಗ್ಸ್‌ನಲ್ಲಿ ಕೇವಲ 234 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ಹೀಗಾಗಿ ಈ ಪಂದ್ಯದಲ್ಲಿ 280 ರನ್‌ಗಳ ದೊಡ್ಡ ಸೋಲನ್ನು ಎದುರಿಸಬೇಕಾಯಿತು. ಭಾರತ ತಂಡಕ್ಕೆ ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಬಹಳ ವಿಶೇಷವಾದ ಪಂದ್ಯವಾಗಿದೆ. ಏಕೆಂದರೆ ತವರಿನಲ್ಲಿ ನಡೆದ ಈ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತ ನಂತರ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುವ ಮೂಲಕ ಪಂದ್ಯವನ್ನು ಗೆಲ್ಲಲು ಸಾಧ್ಯವಾಯಿತು.

55 ವರ್ಷಗಳ ನಂತರ ತವರಿನಲ್ಲಿ ಮೊದಲ ಗೆಲುವು!

ಭಾರತ ತಂಡವು ಇದುವರೆಗೆ ತವರಿನಲ್ಲಿ ಆಡಿದ ಎಲ್ಲಾ ಟೆಸ್ಟ್ ಪಂದ್ಯಗಳಲ್ಲಿ, ಪ್ರವಾಸಿ ತಂಡವು ಟಾಸ್ ಗೆದ್ದ ನಂತರ ಟೀಂ ಇಂಡಿಯಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದು ಕೆಲವೇ ಬಾರಿ. ಇದುವರೆಗೆ ಬಾಂಗ್ಲಾದೇಶ ವಿರುದ್ಧದ ಪಂದ್ಯ ಸೇರಿದಂತೆ ಕೇವಲ 9 ಬಾರಿ ಮಾತ್ರ ಈ ರೀತಿ ಆಗಿದೆ. 1969ರಲ್ಲಿ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ ಸೋಲನುಭವಿಸಬೇಕಾಯಿತು. ಇದಾದ ನಂತರ ಮುಂದಿನ 5 ಪಂದ್ಯಗಳು ಡ್ರಾ ಆಗಿದ್ದರೆ, 2001ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಲು ಬಂದ ಟೀಂ ಇಂಡಿಯಾ ಸೋಲನುಭವಿಸಿತ್ತು. ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ನಡೆದ ಈ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ ಜಯ ಸಾಧಿಸಿದೆ.

ಇದನ್ನೂ ಓದಿ: ಮೊದಲ ಟೆಸ್ಟ್ ಗೆದ್ದ ಖುಷಿಯಲ್ಲಿ ಕುಣಿದಾಡಿದ ರೋಹಿತ್ ಶರ್ಮಾ! ಈ ಗೆಲುವಿನ ನಿಜವಾದ ಹೀರೋ ಈತನೇ ಎಂದು ಕೊಂಡಾಡಿದ ಕ್ಯಾಪ್ಟನ್

ತವರಿನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪ್ರದರ್ಶನ

  • 10 ವಿಕೆಟ್‌ಗಳ ಸೋಲು - ಆಸ್ಟ್ರೇಲಿಯಾ ವಿರುದ್ಧ (1969, ಕೋಲ್ಕತ್ತಾ ಟೆಸ್ಟ್)
  • ಡ್ರಾ – ವೆಸ್ಟ್ ಇಂಡೀಸ್ ವಿರುದ್ಧ (1978, ಮುಂಬೈ ಟೆಸ್ಟ್ ಪಂದ್ಯ)
  • ಡ್ರಾ – ಇಂಗ್ಲೆಂಡ್ ವಿರುದ್ಧ (1982, ಚೆನ್ನೈ ಟೆಸ್ಟ್ ಪಂದ್ಯ)
  • ಡ್ರಾ – ಪಾಕಿಸ್ತಾನ ವಿರುದ್ಧ (1987, ಕೋಲ್ಕತ್ತಾ ಟೆಸ್ಟ್ ಪಂದ್ಯ)
  • ಡ್ರಾ – ಶ್ರೀಲಂಕಾ ವಿರುದ್ಧ (1997, ಮುಂಬೈ ಟೆಸ್ಟ್ ಪಂದ್ಯ)
  • ಡ್ರಾ – ನ್ಯೂಜಿಲೆಂಡ್ ವಿರುದ್ಧ (1999, ಮೊಹಾಲಿ ಟೆಸ್ಟ್ ಪಂದ್ಯ)
  • 10 ವಿಕೆಟ್‌ಗಳ ಸೋಲು - ಆಸ್ಟ್ರೇಲಿಯಾ ವಿರುದ್ಧ (2001, ಮುಂಬೈ ಟೆಸ್ಟ್ ಪಂದ್ಯ)
  • ಡ್ರಾ – ಶ್ರೀಲಂಕಾ ವಿರುದ್ಧ (2017, ಕೋಲ್ಕತ್ತಾ ಟೆಸ್ಟ್ ಪಂದ್ಯ)
  • 280 ರನ್‌ಗಳಿಂದ ಗೆಲುವು - ಬಾಂಗ್ಲಾದೇಶ ವಿರುದ್ಧ (ವರ್ಷ 2024, ಚೆನ್ನೈ ಟೆಸ್ಟ್ ಪಂದ್ಯ)

ಇದನ್ನೂ ಓದಿ: ಭಾರತದ ಈ ಪ್ರತಿಷ್ಠಿತ ಶಾಲೆಯಲ್ಲಿ ಮಗಳಿಗೆ ದಾಖಲಾತಿ ಮಾಡಿಸಿದ ಧೋನಿ! 3ನೇ ತರಗತಿ ಓದುತ್ತಿರುವ ಝಿವಾ ಫೀಜ್‌ ಎಷ್ಟು ಗೊತ್ತಾ? ಆ ಸ್ಕೂಲ್‌ ಯಾವುದು?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News