ನವದೆಹಲಿ: ಸುದೀರ್ಘ ಕಾಲ ಮ್ಯಾಚ್ ಫಿಕ್ಸಿಂಗ್ ನಲ್ಲಿ ತೊಡಗಿದ್ದ ಆರೋಪದ ಮೇರೆಗೆ ಹಿರಿಯ ಕ್ರಿಕೆಟಿಗನನ್ನು ಐಸಿಸಿ ನಿಷೇಧಿಸಿದೆ. ಈ ಕ್ರಿಕೆಟಿಗ ಬೇರೆ ಯಾರೂ ಅಲ್ಲ ಜಿಂಬಾಬ್ವೆಯ ಮಾಜಿ ನಾಯಕ ಬ್ರೆಂಡನ್ ಟೇಲರ್(Brendan Taylor). ಟೇಲರ್ ಇತ್ತೀಚೆಗೆ 2019ರ ಪ್ರಕರಣವನ್ನು ಬಹಿರಂಗಪಡಿಸಿದ್ದರು. ಭಾರತೀಯ ಉದ್ಯಮಿಯೊಬ್ಬರು ಕೊಕೇನ್ ಡ್ರಗ್ಸ್ ತೆಗೆದುಕೊಳ್ಳುವ ವಿಡಿಯೋ ಮಾಡಿ, ಸ್ಪಾಟ್ ಫಿಕ್ಸಿಂಗ್‌ಗೆ ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದ್ದರು ಎಂದು ಅವರು ಹೇಳಿದ್ದರು.
ಈ ವಿಚಾರವನ್ನು ತಕ್ಷಣವೇ ತಿಳಿಸಲು ವಿಫಲವಾಗಿರುವ ಟೇಲರ್(Brendan Taylor)ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ICC) ಭ್ರಷ್ಟಾಚಾರ ನಿಗ್ರಹ ಘಟಕ (Anti-Corruption Unit) ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ಮೂರೂವರೆ ವರ್ಷ ನಿಷೇಧ ಶಿಕ್ಷೆ ವಿಧಿಸಿದೆ. ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಐಸಿಸಿ, ಟೇಲರ್ ಕೂಡ ನಿಷೇಧ ಶಿಕ್ಷೆಯನ್ನು ಒಪ್ಪಿಕೊಂಡಿದ್ದಾರೆ. ಜ.28 ರಿಂದಲೇ ಈ ಶಿಕ್ಷೆ ಆರಂಭವಾಗಲಿದೆ. ಡೋಪಿಂಗ್ ನಿಯಮ ಉಲ್ಲಂಘನೆ ಮಾಡಿದ ಆರೋಪವೂ ಅವರ ಮೇಲಿದೆ ಅಂತಾ ಹೇಳಿದೆ.
Former Zimbabwe captain Brendan Taylor has been banned from all cricket for three and a half years after he accepted breaching four charges of the ICC Anti-Corruption Code and, separately, one charge of the ICC Anti-Doping Code: ICC
Image Source: ICC pic.twitter.com/N3846eQGHU
— ANI (@ANI) January 28, 2022
ಕೆಲ ದಿನಗಳ ಹಿಂದಷ್ಟೇ ಈ ಬಗ್ಗೆ ಟ್ವೀಟ್ ಮಾಡಿದ್ದ ಟೇಲರ್(Brendan Taylor Match Fixing), ‘ಭಾರತ ಪ್ರವಾಸದಲ್ಲಿದ್ದ ವೇಳೆ ನಾನು ಕೊಕೇನ್ ಸೇವನೆ ಮಾಡುತ್ತಿದ್ದ ವಿಡಿಯೋವನ್ನು ಉದ್ಯಮಿಯೊಬ್ಬರು ಚಿತ್ರೀಕರಿಸಿದ್ದರು. ಬಳಿಕ ಈ ವಿಡಿಯೋ ಇಟ್ಟುಕೊಂಡು ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್ ಮಾಡುವಂತೆ ನನಗೆ ಅವರು ಬ್ಲ್ಯಾಕ್ ಮೇಲ್ (Black Mail) ಮಾಡುತ್ತಿದ್ದರು’ ಅಂತಾ ಹೇಳಿದ್ದರು. ಇದರಿಂದಾಗಿ ಕಳೆದ 2 ವರ್ಷಗಳಿಂದ ಕೊರೊನಾ ನಡುವಿನ ವೈಯಕ್ತಿಕ ಜೀವನದಲ್ಲಿ ಅವರು ಸಾಕಷ್ಟು ಮಾನಸಿಕ, ದೈಹಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆಂದು ತಿಳಿದುಬಂದಿದೆ.
‘ಕಳೆದ ಕೆಲವು ವರ್ಷಗಳಲ್ಲಿ ನಾನು ಕೆಲವು ಡ್ರಗ್ ಟೆಸ್ಟ್ ಗಳನ್ನು ಉಲ್ಲಂಘನೆ ಮಾಡುತ್ತಾ ಬಂದಿದ್ದೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗುವ ಕೊನೆಯ ಪಂದ್ಯದ ವೇಳೆ 2021ರ ಸೆಪ್ಟೆಂಬರ್ ನಲ್ಲಿ ಉದ್ದೀಪನ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದೆ. 2019ರಲ್ಲಿ ಆದ ಈ ಪ್ರಕರಣದ ಕುರಿತು ನಾನು ಐಸಿಸಿಗೆ ಮಾಹಿತಿ ನೀಡಲು ವಿಫಲವಾಗಿದ್ದೆ. ಈ ಕಾರಣಕ್ಕೆ ಐಸಿಸಿಯಿಂದ ನಾನು ನಿಷೇಧಕ್ಕೂ ಒಳಗಾಗಬಹುದು’ ಅಂತಾ ಸ್ವತಃ ಟೇಲರ್(Legendary Cricketer) ಹೇಳಿಕೊಂಡಿದ್ದರು. ಟೇಲರ್ ತಮಗೆ ಬಂದಿದ್ದ ಆಹ್ವಾನವನ್ನು ತಿಳಿಸುವಲ್ಲಿ ವಿಳಂಬ ಮಾಡಿದ್ದು ಮಾತ್ರವಲ್ಲ, ಫಿಕ್ಸಿಂಗ್ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದ ಉದ್ಯಮಿ ನೀಡಿದ್ದ ಆತಿಥ್ಯ ಹಾಗೂ ಉಡುಗೊರೆಗಳನ್ನು ಸ್ವೀಕರಿಸಿದ್ದಾರೆ. ಇದೂ ಕೂಡ ಗಂಭೀರ ಅಪರಾಧವಾಗಿದೆ ಅಂತಾ ಐಸಿಸಿ(ICC) ಹೇಳಿದೆ.
To my family, friends and supporters. Here is my full statement. Thank you! pic.twitter.com/sVCckD4PMV
— Brendan Taylor (@BrendanTaylor86) January 24, 2022
ಇದನ್ನೂ ಓದಿ: ರಣಜಿ ಟ್ರೋಫಿ ಬದಲು ಐಪಿಎಲ್ ಗೆ ಆದ್ಯತೆ ನೀಡಿದ್ದಕ್ಕಾಗಿ ಬಿಸಿಸಿಐ ವಿರುದ್ಧ ರವಿಶಾಸ್ತ್ರಿ ಕಿಡಿ
‘ಪ್ರಾಯೋಜಕತ್ವ ಒಪ್ಪಂದದ ಕುರಿತು ಮಾತನಾಡಲು ಉದ್ಯಮಿಯೊಬ್ಬರು ನನ್ನನ್ನು ಭಾರತಕ್ಕೆ ಆಹ್ವಾನಿಸಿದ್ದರು. ಇದರೊಂದಿಗೆ ಜಿಂಬಾಬ್ವೆ(Zimbabwe)ಯಲ್ಲಿ ಟಿ-20 ಪಂದ್ಯಾವಳಿ ಆಯೋಜಿಸುವ ಪ್ರಸ್ತಾಪ ಮಾಡುವುದಾಗಿ ತಿಳಿಸಿದ್ದರು. ಇದಕ್ಕಾಗಿ ತಮಗೆ 15 ಸಾವಿರ ಅಮೆರಿಕನ್ ಡಾಲರ್ ನೀಡುವುದಾಗಿಯೂ ತಿಳಿಸಿದ್ದರು. ಸ್ಪಾಟ್ ಫಿಕ್ಸಿಂಗ್ ಗಾಗಿ ನನಗೆ ಸ್ವಲ್ಪ ಹಣ ನೀಡಲಾಗಿತ್ತು. ಆದರೆ ಸ್ಪಾಟ್ ಫಿಕ್ಸಿಂಗ್ ಮಾಡಲು ಸಾಧ್ಯವಾಗಿರಲಿಲ್ಲ’ ಅಂತಾ ಟೇಲರ್ ಒಪ್ಪಿಕೊಂಡಿದ್ದಾರೆ.
ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದ ಟೇಲರ್(Brendan Taylor Banned), 205 ಏಕದಿನ, 34 ಟೆಸ್ಟ್ ಹಾಗೂ 45 ಟಿ-20 ಪಂದ್ಯಗಳನ್ನು ಅಡಿದ್ದರು. 2004 ರಿಂದ 2021ರವರೆಗೆ ಜಿಂಬಾಬ್ವೆ ತಂಡವನ್ನು ಪ್ರತಿನಿಧಿಸಿದ್ದ ಅವರು ಒಟ್ಟು 17 ಶತಕಗಳೊಂದಿಗೆ 9,938 ರನ್ ಗಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.