ಟೀಮ್ ಇಂಡಿಯಾ ಪ್ರವೇಶಿಸಲಿದ್ದಾರೆ ಈ ಮಾರಣಾಂತಿಕ ವೇಗಿ! ಎದುರಾಳಿಗೆ ನಡುಕ ಹುಟ್ಟಿಸೋದು ಗ್ಯಾರಂಟಿ

ಈ ಪಂದ್ಯದಲ್ಲಿ ಸೌರಾಷ್ಟ್ರ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 98 ರನ್‌ ಬಾರಿಸಿ ಆಲೌಟ್ ಆಗಿತ್ತು. ಸೌರಾಷ್ಟ್ರದ ಈ ಕಳಪೆ ಪ್ರದರ್ಶನಕ್ಕೆ ಕಾರಣವಾಗಿದ್ದು,  ರೆಸ್ಟ್ ಆಫ್ ಇಂಡಿಯಾದ ಬೌಲರ್ ಉಮ್ರಾನ್ ಮಲಿಕ್. ಉಮ್ರಾನ್ ಮಲಿಕ್ ಬೌಲಿಂಗ್ ಗೆ ತತ್ತರಿಸಿದ ಸೌರಾಷ್ಟ್ರ ಕೇವಲ 98 ರನ್ ಬಾರಿಸಿದೆ.

Written by - Bhavishya Shetty | Last Updated : Oct 1, 2022, 05:16 PM IST
    • ಅಕ್ಟೋಬರ್ 1ರಿಂದ ಇರಾನಿ ಕಪ್ 2022 ಪ್ರಾರಂಭ
    • ಉಮ್ರಾನ್ ಮಲಿಕ್ ಬೌಲಿಂಗ್ ಗೆ ತತ್ತರಿಸಿದ ಸೌರಾಷ್ಟ್ರ
    • ಈ ಆಟಗಾರ T20 ವಿಶ್ವಕಪ್‌ ಗೆ ಸೇರ್ಪಡೆಗೊಳ್ಳುವ ಸಾಧ್ಯತೆ
ಟೀಮ್ ಇಂಡಿಯಾ ಪ್ರವೇಶಿಸಲಿದ್ದಾರೆ ಈ ಮಾರಣಾಂತಿಕ ವೇಗಿ! ಎದುರಾಳಿಗೆ ನಡುಕ ಹುಟ್ಟಿಸೋದು ಗ್ಯಾರಂಟಿ  title=
T20 World Cup

ಅಕ್ಟೋಬರ್ 1ರಿಂದ ಇರಾನಿ ಕಪ್ 2022 ಪ್ರಾರಂಭವಾಗಿದ್ದು, ಸೌರಾಷ್ಟ್ರ ಮತ್ತು ರೆಸ್ಟ್ ಆಫ್ ಇಂಡಿಯಾ ನಡುವೆ ಪಂದ್ಯ ನಡೆದಿದೆ. ಸುಮಾರು 3 ವರ್ಷಗಳ ನಂತರ ಇರಾನಿ ಟ್ರೋಫಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ರೆಸ್ಟ್ ಆಫ್ ಇಂಡಿಯಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ತಂಡದ ಈ ನಿರ್ಧಾರವು ಮಾರಕ ವೇಗದ ಬೌಲರ್‌ನಿಂದ ಸರಿ ಎಂದು ಸಾಬೀತಾಯಿತು. ಈ ಆಟಗಾರ ಉತ್ತಮವಾಗಿ ಬೌಲಿಂಗ್ ಮಾಡಿದ್ದು, 2022 ರ T20 ವಿಶ್ವಕಪ್‌ಗಾಗಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವ ಹಕ್ಕನ್ನು ಬಲಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: World Cup: ವಿಶ್ವಕಪ್ ಮುಡಿಗೇರಿಸಿಕೊಳ್ಳುವ ತಂಡಕ್ಕೆ ಸಿಗುವ ಮೊತ್ತ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ

ಈ ಪಂದ್ಯದಲ್ಲಿ ಸೌರಾಷ್ಟ್ರ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 98 ರನ್‌ ಬಾರಿಸಿ ಆಲೌಟ್ ಆಗಿತ್ತು. ಸೌರಾಷ್ಟ್ರದ ಈ ಕಳಪೆ ಪ್ರದರ್ಶನಕ್ಕೆ ಕಾರಣವಾಗಿದ್ದು,  ರೆಸ್ಟ್ ಆಫ್ ಇಂಡಿಯಾದ ಬೌಲರ್ ಉಮ್ರಾನ್ ಮಲಿಕ್. ಉಮ್ರಾನ್ ಮಲಿಕ್ ಬೌಲಿಂಗ್ ಗೆ ತತ್ತರಿಸಿದ ಸೌರಾಷ್ಟ್ರ ಕೇವಲ 98 ರನ್ ಬಾರಿಸಿದೆ. ಈ ಪಂದ್ಯದಲ್ಲಿ 5.5 ಓವರ್ ಬೌಲಿಂಗ್ ಮಾಡುವಾಗ ಉಮ್ರಾನ್ ಮಲಿಕ್ 25 ರನ್ ನೀಡಿ 3 ವಿಕೆಟ್ ಪಡೆದಿದ್ದರು. ಉಮ್ರಾನ್ ಮಲಿಕ್ ಹೊರತಾಗಿ ಕುಲದೀಪ್ ಸೇನ್ 3 ಹಾಗೂ ಮುಖೇಶ್ ಕುಮಾರ್ 4 ವಿಕೆಟ್ ಪಡೆದರು.

ಜಸ್ಪ್ರೀತ್ ಬುಮ್ರಾ ಅವರು ಗಾಯದ ಕಾರಣದಿಂದಾಗಿ 2022ರ T20 ವಿಶ್ವಕಪ್‌ನಿಂದ ಹೊರಗುಳಿಯುವ ಸಾಧ್ಯತೆಯಿದೆ. ಆದ್ದರಿಂದ ಉಮ್ರಾನ್ ಮಲಿಕ್ ಅವರು ಟೀಮ್ ಇಂಡಿಯಾದೊಂದಿಗೆ ಬ್ಯಾಕ್-ಅಪ್ ಆಗಿ ಆಸ್ಟ್ರೇಲಿಯಾಗೆ ಹಾರಬಹುದು. ಜಸ್ಪ್ರೀತ್ ಬುಮ್ರಾ ಸಂಪೂರ್ಣ ಫಿಟ್ ಆಗದಿದ್ದರೆ ಉಮ್ರಾನ್ ಮಲಿಕ್ ತಂಡದಲ್ಲಿ ಸ್ಥಾನ ಪಡೆಯಬಹುದು. ತಮ್ಮ ಮಾರಕ ವೇಗದ ಬೌಲಿಂಗ್ ಮೂಲಕ ಐಪಿಎಲ್ ನಲ್ಲಿ ಅಬ್ಬರಿಸಿದ್ದ ಉಮ್ರಾನ್ ಮಲಿಕ್ ಕಳೆದ ಕೆಲ ದಿನಗಳಿಂದ ತಂಡದಿಂದ ನಾಪತ್ತೆಯಾಗಿದ್ದಾರೆ. ಇಂಗ್ಲೆಂಡ್ ಪ್ರವಾಸದ ನಂತರ ಅವರು ಟೀಂ ಇಂಡಿಯಾದಿಂದ ಹೊರಗುಳಿಯುತ್ತಿದ್ದಾರೆ. 

ಇದನ್ನೂ ಓದಿ: ನಿಮಗೆ ಗೊತ್ತಿರಲಿ..! ಈ ಐದು ಕ್ರಿಕೆಟ್‌ ದಾಖಲೆಗಳನ್ನು ಮುರಿಯುವುದೆಂದರೆ ಕನಸಿನ ಮಾತು...!

ಉಮ್ರಾನ್ ಮಲಿಕ್ ಈ ವರ್ಷ ಐರ್ಲೆಂಡ್ ವಿರುದ್ಧ ಚೊಚ್ಚಲ ಪಂದ್ಯ ಆಡಿದ್ದರು. ಉಮ್ರಾನ್ ಮಲಿಕ್ ಇದುವರೆಗೆ ಟೀಂ ಇಂಡಿಯಾ ಪರ 3 ಟಿ20 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 12.44 ಎಕಾನಮಿಯಲ್ಲಿ ರನ್ ನೀಡಿ ಕೇವಲ 2 ವಿಕೆಟ್ ಪಡೆದಿದ್ದಾರೆ. ಅವರ ಕಳಪೆ ಪ್ರದರ್ಶನದಿಂದಾಗಿ ತಂಡದಿಂದ ಕೈಬಿಡಲಾಯಿತು. ಉಮ್ರಾನ್ ಮಲಿಕ್ IPL 2022 ರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನವನ್ನು ಪುನರಾವರ್ತಿಸಲು ಸಾಧ್ಯವಾಗಲಿಲ್ಲ. 3 ಪಂದ್ಯಗಳನ್ನು ಆಡಿದ ನಂತರವೇ ಟೀಮ್ ಇಂಡಿಯಾದಿಂದ ಹೊರಗಿದ್ದರು. ಆದರೆ ಮಾರಕ ಬೌಲಿಂಗ್ ಮೂಲಕ ಮತ್ತೊಮ್ಮೆ ಆಯ್ಕೆಗಾರರ ​​ಗಮನ ಸೆಳೆದಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News