Team India: ಶೀಘ್ರವೇ ಟೀಂ ಇಂಡಿಯಾಗೆ ಎಂಟ್ರಿ ಕೊಡಲಿರುವ 19ರ ಹರೆಯದ ಈ ಯುವ ತಾರೆ!

Indian Cricket Team: ಹಲವು ಯುವ ಸ್ಟಾರ್ ಕ್ರಿಕೆಟಿಗರು ರಾಜ್ಯ ಮಟ್ಟದಲ್ಲಿ ಅಮೋಘ ಪ್ರದರ್ಶನ ನೀಡಿ ನಂತರ ಐಪಿಎಲ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸರಣಿಯಲ್ಲಿ ಇನ್ನೊಬ್ಬ ಸ್ಟಾರ್ ಬ್ಯಾಟ್ಸ್‌ಮನ್‌ ಸಹ ಇದ್ದಾರೆ, ಅವರು ಕೇವಲ 19ನೇ ವಯಸ್ಸಿನಲ್ಲಿ ತಮ್ಮ ಪ್ರತಿಭೆಗಾಗಿ ಎಲ್ಲಾ ದಂತಕಥೆಗಳಿಂದ ಪ್ರಶಂಸೆ ಗಳಿಸುತ್ತಿದ್ದಾರೆ. ಯಾರು ಆ ಆಟಗಾರ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...

Written by - Puttaraj K Alur | Last Updated : Sep 7, 2024, 06:37 PM IST
  • ದುಲೀಪ್ ಟ್ರೋಫಿಯಲ್ಲಿ ಅದ್ಭುತ ಇನ್ನಿಂಗ್ಸ್ ಆಡಿದ ಮುಶೀರ್ ಖಾನ್‌ ಬಗ್ಗೆ ಪ್ರಶಂಸೆ
  • ಮುಶೀರ್ ಖಾನ್ ಆಟವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ವಿಜಯ್ ದಹಿಯಾ
  • ಹೀಗೆಯೇ ಸ್ಥಿರತೆ ಕಾಯ್ದುಕೊಂಡರೆ ಮುಶೀರ್ ಭಾರತ ತಂಡಕ್ಕೆ ಉತ್ತಮ ಆಯ್ಕೆಯಾಗಬಹುದು
Team India: ಶೀಘ್ರವೇ ಟೀಂ ಇಂಡಿಯಾಗೆ ಎಂಟ್ರಿ ಕೊಡಲಿರುವ 19ರ ಹರೆಯದ ಈ ಯುವ ತಾರೆ! title=
ಮುಶೀರ್ ಭಾರತ ತಂಡಕ್ಕೆ ಉತ್ತಮ ಆಯ್ಕೆ!

Indian Cricket Team: ಹಲವು ಯುವ ಸ್ಟಾರ್ ಕ್ರಿಕೆಟಿಗರು ರಾಜ್ಯ ಮಟ್ಟದಲ್ಲಿ ಅಮೋಘ ಪ್ರದರ್ಶನ ನೀಡಿ ನಂತರ ಐಪಿಎಲ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ದುಲೀಪ್‌ ಟ್ರೋಫಿ ಸರಣಿಯಲ್ಲಿ ಇನ್ನೊಬ್ಬ ಸ್ಟಾರ್ ಬ್ಯಾಟ್ಸ್‌ಮನ್ ಹುಟ್ಟಿಕೊಂಡಿದ್ದು, ‌ಕೇವಲ 19ನೇ ವಯಸ್ಸಿನಲ್ಲಿ ತಮ್ಮ ಪ್ರತಿಭೆಯಿಂದ ಎಲ್ಲಾ ದಂತಕಥೆಗಳಿಂದ ಪ್ರಶಂಸೆ ಗಳಿಸುತ್ತಿದ್ದಾರೆ. ಈ ಬ್ಯಾಟ್ಸ್‌ಮನ್ ಬೇರೆ ಯಾರೂ ಅಲ್ಲ ತಮ್ಮ ಸ್ಫೋಟಕ ಬ್ಯಾಟಿಂಗ್‌ಗಾಗಿ ಹೆಡ್‌ಲೈನ್‌ನಲ್ಲಿರುವ ಟೀಂ ಇಂಡಿಯಾಕ್ಕೆ ಪಾದಾರ್ಪಣೆ ಮಾಡಿದ ಸರ್ಫರಾಜ್ ಖಾನ್ ಅವರ ಕಿರಿಯ ಸಹೋದರ ಮುಶೀರ್ ಖಾನ್. ಇದೀಗ ಭಾರತದ ಮಾಜಿ ವಿಕೆಟ್‌ಕೀಪರ್ ವಿಜಯ್ ದಹಿಯಾ ಅವರು ಮುಶೀರ್ ಖಾನ್ ಅವರ ಆಟವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಈ ಯುವ ಬ್ಯಾಟ್ಸ್‌ಮನ್ ಹೀಗೆಯೇ ಸ್ಥಿರತೆಯನ್ನು ಕಾಯ್ದುಕೊಂಡರೆ ಭವಿಷ್ಯದಲ್ಲಿ ಭಾರತ ತಂಡಕ್ಕೆ ಉತ್ತಮ ಆಸ್ತಿಯಾಗಬಹುದು ಅಂತಾ ಹೇಳಿದ್ದಾರೆ.  

ದುಲೀಪ್ ಟ್ರೋಫಿಯಲ್ಲಿ ಅದ್ಭುತ ಇನ್ನಿಂಗ್ಸ್  

ಬೆಂಗಳೂರಿನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿಯಲ್ಲಿ ಭಾರತ ʼಎʼ ವಿರುದ್ಧ ಭಾರತ ʼಬಿʼ ಪರ 181 ರನ್ ಗಳಿಸುವ ಮೂಲಕ ಮುಶೀರ್ ಎಲ್ಲರಿಂದಲೂ ಮೆಚ್ಚುಗೆ ಗಳಿಸಿದ್ದಾರೆ. ಅವರ ಅದ್ಭುತ ಇನ್ನಿಂಗ್ಸ್‌ನಿಂದ 94 ರನ್‌ಗಳಿಂದ 7 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತ ʼಬಿʼ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 321 ರನ್‌ಗಳನ್ನು ಗಳಿಸಿ ಪುನರಾಗಮನಕ್ಕೆ ನೆರವಾಯಿತು. ಈ ಬಗ್ಗೆ ಮಾತನಾಡಿದ ಮಾಜಿ ಕ್ರಿಕೆಟಿಗ ದಹಿಯಾ, 'ಮುಶೀರ್ ಅವರ ಮನಸ್ಥಿತಿಯೇ ವಿಭಿನ್ನವಾಗಿದೆ. ಏಕೆಂದರೆ ಅವರು ಬಲವಾದ ಮನಸ್ಥಿತಿಯ ಆಟಗಾರರಾಗಿದ್ದಾರೆ' ಎಂದು ಹೇಳಿದ್ದಾರೆ. 

ಇದನ್ನೂ ಓದಿ: ಕಾಂಗ್ರೆಸ್ ಸೇರಿರುವ ಕುಸ್ತಿಪಟು ವಿನೇಶ್ ಫೋಗಟ್ ರೈಲ್ವೆ ಇಲಾಖೆಯಲ್ಲಿ ಪಡೆಯುತ್ತಿದ್ದ ಸಂಬಳವೆಷ್ಟು ಗೊತ್ತೇ?

ಭಾರತ ತಂಡಕ್ಕೆ ಉತ್ತಮ ಆಯ್ಕೆಯಾಗಬಹುದು

ಮುಶೀರ್ ಖಾನ್ ಬಗ್ಗೆ ಮಾತನಾಡಿರುವ ವಿಜಯ್ ದಹಿಯಾ, ʼನಾನು ಊಹಿಸಲು ಸಾಧ್ಯವಿಲ್ಲ, ಅವರು ಹೀಗೆ ರನ್ ಗಳಿಸುವುದನ್ನು ಮುಂದುವರಿಸಿದರೆ ಭಾರತ ತಂಡಕ್ಕೆ ಉತ್ತಮ ಆಯ್ಕೆಯಾಗಬಹುದು' ಎಂದು ಹೇಳಿದ್ದಾರೆ. ಮುಶೀರ್ ಅವರ ಸ್ಥಿರತೆಗೆ ಆಶ್ಚರ್ಯ ವ್ಯಕ್ತಪಡಿಸಿದ ದಹಿಯಾ, 'ಅವರ ಬ್ಯಾಟಿಂಗ್‌ನಲ್ಲಿ ಅತ್ಯಂತ ವಿಶೇಷವಾದ ವಿಷಯವೆಂದರೆ ಸ್ಥಿರತೆ. ಮುಶೀರ್ ರಣಜಿ ಟ್ರೋಫಿ ಸೆಮಿ-ಫೈನಲ್ ಮತ್ತು ಫೈನಲ್‌ನಲ್ಲಿ ರನ್ ಗಳಿಸಿದ್ದಾರೆ. ನಂತರ 2024ರಲ್ಲಿ ದೇಶೀಯ ಕ್ರಿಕೆಟ್‌ನ ಮೊದಲ ದಿನವೇ ಶತಕ ಗಳಿಸಿದರು. ನೀವು ಕಠಿಣ ಪರಿಶ್ರಮ ಪಟ್ಟರೇ ದೊಡ್ಡದಾಗಿ ಸಾಧಿಸಬೇಕು ಅಂತಾ ದಹಿಯಾ ಹೇಳಿದ್ದಾರೆ. 

ಪ್ರಥಮ ದರ್ಜೆ ವೃತ್ತಿಜೀವನದಲ್ಲಿ ಅತ್ಯುತ್ತಮ ದಾಖಲೆ

ಮುಶೀರ್ ಖಾನ್ ತಮ್ಮ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. ವೃತ್ತಿಜೀವನದಲ್ಲಿ ಅವರು ಹೊಸ ಎತ್ತರವನ್ನು ಮುಟ್ಟುತ್ತಿದ್ದಾರೆ. ಅವರು 7 ಪ್ರಥಮ ದರ್ಜೆ ಪಂದ್ಯಗಳಲ್ಲಿ 3 ಶತಕಗಳು ಮತ್ತು ಒಂದು ಅರ್ಧ ಶತಕವನ್ನು ಗಳಿಸಿದ್ದಾರೆ, ಇದರಲ್ಲಿ ಅವರ ಅತ್ಯುತ್ತಮ ಸ್ಕೋರ್ 203 ಆಗಿದೆ. ಇಲ್ಲಿಯವರೆಗೆ ರೆಡ್‌ ಬಾಲ್ ಮಾದರಿಯಲ್ಲಿ 64.54 ಸರಾಸರಿಯಲ್ಲಿ 11 ಇನ್ನಿಂಗ್ಸ್‌ಗಳಲ್ಲಿ 710 ರನ್ ಗಳಿಸಿದ್ದಾರೆ.

ಇದನ್ನೂ ಓದಿ: ಬಾಲ್ಯದಲ್ಲಿ ಪಾದ್ರಿಯಾಗುವ ಕನಸು ಕಂಡಿದ್ದ ಈತ ಇಂದು ವಿಶ್ವದ ಅತಿ ವೇಗದ ಬೌಲರ್!‌ ಒಂದೇ ಪಂದ್ಯದಲ್ಲಿ 8 ವಿಕೆಟ್ ಕಿತ್ತು ಆರ್ಭಟಿಸಿದ್ದ ವೇಗಿ

ಅಂಡರ್-19 ವಿಶ್ವಕಪ್‌ನಲ್ಲಿ ಸಂಚಲನ  

ಈ ವರ್ಷ ನಡೆದ ಅಂಡರ್ 19 ವಿಶ್ವಕಪ್‌ನಲ್ಲೂ ಮುಶೀರ್ ಖಾನ್ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದರು. ಬೌಲರ್‌ಗಳಿಗೆ ನಡುಕ ಹುಟ್ಟಿಸಿದ ಮುಶೀರ್, ಈ ಪಂದ್ಯಾವಳಿಯಲ್ಲಿ 360 ರನ್ ಗಳಿಸಿದರು. ಈ ಐಸಿಸಿ ಟೂರ್ನಿಯಲ್ಲಿ ಅತಿಹೆಚ್ಚು ಶತಕ ಸಿಡಿಸಿದ ಬ್ಯಾಟ್ಸ್‌ಮನ್ ಮುಶೀರ್ 2 ಶತಕಗಳನ್ನು ಗಳಿಸಿದರು. ಐರ್ಲೆಂಡ್ ವಿರುದ್ಧ 118 ರನ್‌ಗಳ ಇನ್ನಿಂಗ್ಸ್ ಮತ್ತು ನ್ಯೂಜಿಲೆಂಡ್ ವಿರುದ್ಧ 131 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ. ಅಷ್ಟೇ ಅಲ್ಲ ಅಮೆರಿಕ ವಿರುದ್ಧ 73 ರನ್ ಗಳಿಸಿದ್ದರು. ಮುಶೀರ್ (8 ಸಿಕ್ಸರ್) ಪಂದ್ಯಾವಳಿಯಲ್ಲಿ 2 ನೇ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News