IND vs AUS: ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ ಮಧ್ಯೆ ದಿಢೀರ್ ಬದಲಾದ ತಂಡದ ನಾಯಕತ್ವ! ಈ ದಿಗ್ಗಜನಿಗೆ ಕಮಾಂಡ್!

IND vs AUS: ಈ ತಿಂಗಳ ಅಂತ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಬೇಕಿದೆ. ಈ ಸರಣಿಗಾಗಿ, ಪಾಕಿಸ್ತಾನ ತಂಡವು ತನ್ನ ನಾಯಕ ಬಾಬರ್ ಅಜಂಗೆ ವಿಶ್ರಾಂತಿ ನೀಡಲು ನಿರ್ಧರಿಸಿದೆ. ಜಿಯೋ ನ್ಯೂಸ್‌’ನ ವರದಿಯ ಪ್ರಕಾರ, ಬಾಬರ್ ಆಜಮ್ ಆ ಸರಣಿಯಲ್ಲಿ ಆಡುವುದಿಲ್ಲ.

Written by - Bhavishya Shetty | Last Updated : Mar 10, 2023, 09:39 PM IST
    • ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಬೇಕಿದೆ.
    • ಪಾಕಿಸ್ತಾನ ತಂಡವು ತನ್ನ ನಾಯಕ ಬಾಬರ್ ಅಜಂಗೆ ವಿಶ್ರಾಂತಿ ನೀಡಲು ನಿರ್ಧರಿಸಿದೆ.
    • ಜಿಯೋ ನ್ಯೂಸ್‌’ನ ವರದಿಯ ಪ್ರಕಾರ, ಬಾಬರ್ ಆಜಮ್ ಆ ಸರಣಿಯಲ್ಲಿ ಆಡುವುದಿಲ್ಲ.
IND vs AUS: ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ ಮಧ್ಯೆ ದಿಢೀರ್ ಬದಲಾದ ತಂಡದ ನಾಯಕತ್ವ! ಈ ದಿಗ್ಗಜನಿಗೆ ಕಮಾಂಡ್! title=
Babar Azam

IND vs AUS: ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅಹಮದಾಬಾದ್ ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಎರಡು ದಿನಗಳ ಆಟ ಮುಗಿದಿದ್ದು, ಭಾರತ ತಂಡ 444 ರನ್‌ಗಳಿಂದ ಹಿನ್ನಡೆಯಲ್ಲಿದೆ. ಈ ನಡುವೆ ಪಕ್ಕದ ದೇಶದ ಕ್ರಿಕೆಟ್ ತಂಡಕ್ಕೆ ಸಂಬಂಧಿಸಿದ ದೊಡ್ಡ ಸುದ್ದಿಯೊಂದು ಹೊರಬೀಳುತ್ತಿದೆ.

ಇದನ್ನೂ ಓದಿ: 1 ಐಪಿಎಲ್, 16 ಪಂದ್ಯ, 973 ರನ್: ಯಾರಿಂದಲೂ ಟಚ್ ಮಾಡೋಕಾಗ್ತಿಲ್ಲ ವಿರಾಟ್ ಸೃಷ್ಟಿಸಿದ ಈ ದಾಖಲೆಗಳನ್ನು!

ಈ ತಿಂಗಳ ಅಂತ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಬೇಕಿದೆ. ಈ ಸರಣಿಗಾಗಿ, ಪಾಕಿಸ್ತಾನ ತಂಡವು ತನ್ನ ನಾಯಕ ಬಾಬರ್ ಅಜಂಗೆ ವಿಶ್ರಾಂತಿ ನೀಡಲು ನಿರ್ಧರಿಸಿದೆ. ಜಿಯೋ ನ್ಯೂಸ್‌’ನ ವರದಿಯ ಪ್ರಕಾರ, ಬಾಬರ್ ಆಜಮ್ ಆ ಸರಣಿಯಲ್ಲಿ ಆಡುವುದಿಲ್ಲ. ಇವರ ಹೊರತಾಗಿ ಹಿರಿಯ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಕೂಡ ಟಿ20 ಪಂದ್ಯಗಳ ಭಾಗವಾಗುವುದಿಲ್ಲ.

ಶಾಹೀನ್‌ಗೆ ನಾಯಕತ್ವ ಸಿಗುತ್ತಾ?

ಬಾಬರ್ ಅನುಪಸ್ಥಿತಿಯಲ್ಲಿ ಶಾಹೀನ್ ಅಫ್ರಿದಿ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಬಹುದು ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್‌ಎಲ್) ವಿಜೇತ ನಾಯಕ ಶಾಹೀನ್ ಕೂಡ ಸಾಕಷ್ಟು ನಾಯಕತ್ವದ ಅನುಭವವನ್ನು ಹೊಂದಿದ್ದಾರೆ. ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ನೀಡಿದರೆ, ಅವರು ಈ ತಿಂಗಳ ಕೊನೆಯಲ್ಲಿ ಪಾಕಿಸ್ತಾನ ರಾಷ್ಟ್ರೀಯ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಪಾಕಿಸ್ತಾನ ತಂಡದ ನಾಯಕತ್ವವನ್ನು ಶಾಹೀನ್ ವಹಿಸಿಕೊಳ್ಳುತ್ತಿರುವುದು ಇದೇ ಮೊದಲು.

ಇದನ್ನೂ ಓದಿ: No.1 T20 Cricket Premier League: ವಿಶ್ವದ ನಂಬರ್.1 ಟಿ-20 ಕ್ರಿಕೆಟ್ ಪ್ರೀಮಿಯರ್ ಲೀಗ್ ಯಾವುದು ಗೊತ್ತಾ? ಗೆಸ್ ಮಾಡಿ ನೋಡೋಣ

2022ರ ಟಿ20 ವಿಶ್ವಕಪ್‌ನ ಫೈನಲ್‌ನಿಂದ ಶಾಹೀನ್ ಪಾಕಿಸ್ತಾನ ಪರ ಆಡಿಲ್ಲ. ಎಡಗೈ ವೇಗಿ ಮೊಣಕಾಲಿನ ಗಾಯದಿಂದ ಫೈನಲ್‌ನಲ್ಲಿ ಮೈದಾನದಿಂದ ಹೊರಬಿದ್ದರು. ಆ ಬಳಿಕ ಶಾಹೀನ್ ಪಾಕಿಸ್ತಾನ್ ಸೂಪರ್ ಲೀಗ್ ಮೂಲಕ ಪುನರಾಗಮನ ಮಾಡಿದರು. ಟಿ20 ಸರಣಿಯ ಮೂರು ಪಂದ್ಯಗಳು ಮಾರ್ಚ್ 24, 26 ಮತ್ತು 27 ರಂದು ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿವೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News