Australia vs Pakistan U-19 Match: ಪಾಕ್ ಮಣಿಸಿ ಅಂಡರ್ 19 ವಿಶ್ವಕಪ್ ಫೈನಲ್ ಗೆ ಲಗ್ಗೆ ಇಟ್ಟ ಆಸೀಸ್ ಪಡೆ

Australia U-19 Cricket Team performance: ಇಲ್ಲಿನ ವಿಲೋಮೂರ್ ಪಾರ್ಕ್ ಸ್ಟೇಡಿಯಂ ನಲ್ಲಿ ನಡೆದ ಅಂಡರ್ 19 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಪಾಕ್ ವಿರುದ್ಧ ಒಂದು ವಿಕೆಟ್ ಅಂತರದಿಂದ ಗೆಲುವು ಸಾಧಿಸುವ ಮೂಲಕ ಈಗ ಫೈನಲ್ ಲಗ್ಗೆ ಇಟ್ಟಿದೆ. ಆ ಮೂಲಕ ಅಂತಿಮ ಹಣಾಹಣಿಯಲ್ಲಿ ಆಸೀಸ್ ಪಡೆ ಟೀಮ್ ಇಂಡಿಯಾವನ್ನು ಎದುರಿಸಲಿದೆ.

Written by - Manjunath N | Last Updated : Feb 9, 2024, 11:13 AM IST
  • ಇದೆ ವೇಳೆ ಈ ಸುಲಭ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಗೆಲುವಿನ ದಡ ಸೇರಲು ಸಾಕಷ್ಟು ಹರಸಾಹಸ ಪಡಬೇಕಾಗಿ ಬಂತು.
  • ಮಾರಕ ಬೌಲಿಂಗ್ ದಾಳಿ ನಡೆಸಿದ ಪಾಕ್ ಪಡೆ ಒಂದು ಹಂತದಲ್ಲಿ ಗೆಲುವಿನ ಆಸೆಯನ್ನು ಚಿಗುರಿಸಿತ್ತಾದರೂ ಅಂತಿಮವಾಗಿ ವಿಜಯ ಲಕ್ಷ್ಮಿ ಆಸೀಸ್ ಪಡೆಗೆ ಒಲಿದಳು.
  • ಪಾಕ್ ಪರವಾಗಿ ಅಲಿ ರಾಜಾ ನಾಲ್ಕು ವಿಕೆಟ್ ಗಳನ್ನು ಕಬಳಿಸಿ ಗಮನ ಸೆಳೆದರು.
Australia vs Pakistan U-19 Match: ಪಾಕ್ ಮಣಿಸಿ ಅಂಡರ್ 19 ವಿಶ್ವಕಪ್ ಫೈನಲ್ ಗೆ ಲಗ್ಗೆ ಇಟ್ಟ ಆಸೀಸ್ ಪಡೆ title=

U-19 World Cup Australia vs Pakistan match: ಇಲ್ಲಿನ ವಿಲೋಮೂರ್ ಪಾರ್ಕ್ ಸ್ಟೇಡಿಯಂ ನಲ್ಲಿ ನಡೆದ ಅಂಡರ್ 19 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಪಾಕ್ ವಿರುದ್ಧ ಒಂದು ವಿಕೆಟ್ ಅಂತರದಿಂದ ಗೆಲುವು ಸಾಧಿಸುವ ಮೂಲಕ ಈಗ ಫೈನಲ್ ಲಗ್ಗೆ ಇಟ್ಟಿದೆ. ಆ ಮೂಲಕ ಅಂತಿಮ ಹಣಾಹಣಿಯಲ್ಲಿ ಆಸೀಸ್ ಪಡೆ ಟೀಮ್ ಇಂಡಿಯಾವನ್ನು ಎದುರಿಸಲಿದೆ.

ಮೊದಲು ಟಾಸ್ ಗೆದ್ದ ಆಸೀಸ್ ಪಡೆ ಪಾಕ್ ತಂಡಕ್ಕೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿತು.ಈ ಸಂದರ್ಭದಲ್ಲಿ ಬಿಗುವಿನ ಬೌಲಿಂಗ್ ದಾಳಿ ನಡೆಸಿದ ಆಸೀಸ್ ಪಡೆ ಪಾಕ್ ತಂಡವನ್ನು ಕೇವಲ 179 ರನ್ ಗಳಿಗೆ ಕಟ್ಟಿ ಹಾಕಿತು.ಆಸ್ಟ್ರೇಲಿಯಾ ತಂಡದ ಪರವಾಗಿ ಟಾಮ್ ಸ್ಟ್ರಾಕರ್ ಆರು ವಿಕೆಟ್ ಗಳನ್ನು ಕಬಳಿಸುವ ಮೂಲಕ ಪಾಕ್ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿದರು.ಪಾಕ್ ಪರವಾಗಿ ಆಜಾನ್ ಅವೈಸ್ ಹಾಗೂ ಅರಾಫಾತ್ ಮಿನಾಸ್ ತಲಾ 52 ರನ್ ಗಳಿಸುವ ಮೂಲಕ ತಂಡಕ್ಕೆ ನೆರವಾದರು.

ಇದೆ ವೇಳೆ ಈ ಸುಲಭ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಗೆಲುವಿನ ದಡ ಸೇರಲು ಸಾಕಷ್ಟು ಹರಸಾಹಸ ಪಡಬೇಕಾಗಿ ಬಂತು.ಮಾರಕ ಬೌಲಿಂಗ್ ದಾಳಿ ನಡೆಸಿದ ಪಾಕ್ ಪಡೆ ಒಂದು ಹಂತದಲ್ಲಿ ಗೆಲುವಿನ ಆಸೆಯನ್ನು ಚಿಗುರಿಸಿತ್ತಾದರೂ ಅಂತಿಮವಾಗಿ ವಿಜಯ ಲಕ್ಷ್ಮಿ ಆಸೀಸ್ ಪಡೆಗೆ ಒಲಿದಳು.ಪಾಕ್ ಪರವಾಗಿ ಅಲಿ ರಾಜಾ ನಾಲ್ಕು ವಿಕೆಟ್ ಗಳನ್ನು ಕಬಳಿಸಿ ಗಮನ ಸೆಳೆದರು. ಆಸೀಸ್ ತಂಡವು ಒಲಿವರ್ ಪೀಕ್ ಹಾಗೂ ಹ್ಯಾರಿ ಡಿಕ್ಸನ್ ಅವರ 49,50 ರನ್ ಗಳ ನೆರವಿನಿಂದಾಗಿ 49.1 ಓವರ್ ಗಳಲ್ಲಿ 181 ರನ್ ಗಳಿಸಿ ಫೈನಲ್ ಗೆ ಪ್ರವೇಶಿಸಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

"

Trending News