Team India: ಟೀಂ ಇಂಡಿಯಾದ ಈ ಆಟಗಾರನಿಗೆ ನಿವೃತ್ತಿಯೇ ಕೊನೆಯ ಆಯ್ಕೆ!

ಹಿಟ್ ಮ್ಯಾನ್ ರೋಹಿತ್ ಶರ್ಮಾ ಈಗ ಟೆಸ್ಟ್ ನಾಯಕನಾಗಿ ಮೊದಲ ಬಾರಿಗೆ ಶ್ರೀಲಂಕಾ ವಿರುದ್ಧ ಆಡಲಿದ್ದಾರೆ. ರೋಹಿತ್ ತಂಡದಲ್ಲಿ ಹಲವು ಆಟಗಾರರನ್ನು ಬದಲಾಯಿಸಿದ್ದಾರೆ. ಆದರೆ ಅನುಭವಿ ಕ್ರಿಕೆಟಿಗನೊಬ್ಬ ರೋಹಿತ್ ನಾಯಕತ್ವದಲ್ಲಿ ತಂಡಕ್ಕೆ ಮರಳುವುದು ಅಸಾಧ್ಯವೆಂದೇ ಹೇಳಲಾಗುತ್ತಿದೆ.

Written by - Puttaraj K Alur | Last Updated : Feb 28, 2022, 07:33 PM IST
  • ಅಂತ್ಯವಾಗುತ್ತಾ ಭಾರತ ಟೆಸ್ಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಮುರಳಿ ವಿಜಯ್ ವೃತ್ತಿಜೀವನ?
  • ಕಳೆದ ಕೆಲವು ವರ್ಷಗಳಿಂದ ಟೆಸ್ಟ್ ತಂಡದಲ್ಲಿ ಮುರಳಿ ವಿಜಯ್ ಗೆ ಆಡುವ ಅವಕಾಶವೇ ಸಿಕ್ಕಿಲ್ಲ
  • ಡಿ.2018ರಂದು ಆಸ್ಟ್ರೇಲಿಯಾ ವಿರುದ್ಧ ತಮ್ಮ ಕೊನೆ ಟೆಸ್ಟ್ ಪಂದ್ಯ ಆಡಿದ್ದ ಮುರಳಿ ವಿಜಯ್
Team India: ಟೀಂ ಇಂಡಿಯಾದ ಈ ಆಟಗಾರನಿಗೆ ನಿವೃತ್ತಿಯೇ ಕೊನೆಯ ಆಯ್ಕೆ!   title=
ಶೀಘ್ರದಲ್ಲೇ ಈ ಆಟಗಾರ ನಿವೃತ್ತಿ ಹೊಂದಲಿದ್ದಾರೆ

ನವದೆಹಲಿ: ಇತ್ತೀಚೆಗಷ್ಟೇ ಟೀಂ ಇಂಡಿಯಾ(Team India)ದ ನೂತನ ನಾಯಕರಾಗಿ ರೋಹಿತ್ ಶರ್ಮಾ ನೇಮಕಗೊಂಡಿದ್ದಾರೆ. ಟಿ-20 ಹಾಗೂ ಏಕದಿನ ಪಂದ್ಯಗಳ ನಾಯಕತ್ವ ಪಡೆದ ಬಳಿಕ ಇದೀಗ ರೋಹಿತ್ ಟೆಸ್ಟ್ ತಂಡದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ರೋಹಿತ್ ಆಗಮನದಿಂದ ತಂಡದಲ್ಲಿ ಕೆಲವು ದೊಡ್ಡ ಬದಲಾವಣೆಗಳು ಆಗುತ್ತಿವೆ. ಕೆಲ ಅನುಭವಿ ಆಟಗಾರರನ್ನು ತಂಡದಿಂದ ಹೊರಹಾಕಲಾಗಿದ್ದು, ಕೆಲ ಹೊಸ ಆಟಗಾರರಿಗೂ ಸ್ಥಾನ ನೀಡಲಾಗಿದೆ. ಆದರೆ ರೋಹಿತ್ ನಾಯಕನಾಗುವ ಮೊದಲೇ ತಂಡದಿಂದ ಹೊರಗುಳಿದ ಆಟಗಾರನೊಬ್ಬನಿದ್ದಾನೆ. ರೋಹಿತ್(Rohit Sharma) ಆಗಮನದ ಬಳಿಕವೂ ಈ ಆಟಗಾರನ ವಾಪಸಾತಿಗೆ ಯಾವುದೇ ಆಯ್ಕೆಗಳು ಉಳಿದಿಲ್ಲ.

ಈ ಆಟಗಾರನಿಗೆ ನಿವೃತ್ತಿಯೇ ಕೊನೆ ಆಯ್ಕೆ!

ಇತ್ತೀಚೆಗಷ್ಟೇ ರೋಹಿತ್ ಶರ್ಮಾ(Rohit Sharma) ಟೆಸ್ಟ್ ತಂಡದ ನೂತನ ನಾಯಕರಾಗಿ ಆಯ್ಕೆಯಾಗಿದ್ದಾರೆ. ರೋಹಿತ್ ಆಗಮನದೊಂದಿಗೆ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರಂತಹ ಅನುಭವಿಗಳು ತಂಡದಿಂದ ಹೊರಗುಳಿದಿದ್ದಾರೆ. ಇವರ ಸಾಲಿಗೆ ಸೇರುವ ಮತ್ತೊಬ್ಬ ಅನುಭವಿ ಆಟಗಾರ ಬಹು ದಿನಗಳಿಂದ ತಂಡದಿಂದ ಹೊರಗುಳಿದಿದ್ದಾರೆ. ಅವರೇ ಭಾರತ ಟೆಸ್ಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಮುರಳಿ ವಿಜಯ್(Murali Vujay). ಹೌದು, ವಿಜಯ್ ಒಂದು ಕಾಲದಲ್ಲಿ ಟೀಂ ಇಂಡಿಯಾದ ಅತ್ಯಂತ ವಿಶ್ವಾಸಾರ್ಹ ಆರಂಭಿಕ ಆಟಗಾರರಾಗಿದ್ದರು. ಆದರೆ ಕಳೆದ ಕೆಲ ವರ್ಷಗಳಿಂದ ವಿಜಯ್ ಗೆ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ.

ಇದನ್ನೂ ಓದಿ: Sonny Ramadhin No More: ವಿಶ್ವ ದಿಗ್ಗಜ ಕ್ರಿಕೆಟಿಗ Sonny Ramadhin ನಿಧನ

ಮುರಳಿ ವಿಜಯ್ ಡಿಸೆಂಬರ್ 2018ರಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಈಗ ಮತ್ತೆ ವಿಜಯ್ ಗೆ ತಂಡದಲ್ಲಿ ಸ್ಥಾನ ಸಿಗುವ ಲಕ್ಷಣಗಳು ಕಾಣುತ್ತಿಲ್ಲ(Murali Vijay Carrer End). ಏಕೆಂದರೆ ವಿಜಯ್ ಕ್ರಿಕೆಟ್‌ನಲ್ಲಿ ಅಷ್ಟೊಂದು ಸಕ್ರಿಯವಾಗಿಲ್ಲ. ರೋಹಿತ್ ತಂಡದ ನಾಯಕರಾಗಿದ್ದರೂ ಅವರಿಗೆ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆ ಬಹುತೇಕ ಕಡಿಮೆ ಎಂದೇ ಅನೇಕರು ಹೇಳುತ್ತಿದ್ದಾರೆ.   

ರೋಹಿತ್ ಶರ್ಮಾ ಅತ್ಯುತ್ತಮ ಆರಂಭಿಕ ಆಟಗಾರ

ರೋಹಿತ್ ಶರ್ಮಾ ಪ್ರಸ್ತುತ ಟೀಂ ಇಂಡಿಯಾ ಮಾತ್ರವಲ್ಲದೆ ವಿಶ್ವದ ಅತ್ಯುತ್ತಮ ಆರಂಭಿಕ ಬ್ಯಾಟ್ಸ್‌ಮನ್. ODI ಮತ್ತು T20ಗಳಲ್ಲಿ ಕ್ರಿಕೆಟ್ ಜಗತ್ತನ್ನೇ ಆಳಿದ್ದ ರೋಹಿತ್ ಮೊದಲ ಟೆಸ್ಟ್ ಕ್ರಿಕೆಟ್‌ನಲ್ಲಿ ವಿದೇಶಿ ನೆಲದಲ್ಲಿ ಯಾವುದೇ ಶತಕವನ್ನು ಗಳಿಸಿರಲಿಲ್ಲ, ಆದರೆ ಅವರು ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಪ್ರವಾಸದಲ್ಲಿ ಈ ಸಾಧನೆ ಮಾಡಿದರು. ರೋಹಿತ್ ಏಕದಿನ ಕ್ರಿಕೆಟ್‌ನಲ್ಲಿ 3 ದ್ವಿಶತಕಗಳನ್ನು ಭಾರಿಸಿ ವಿಶೇಷ ದಾಖಲೆ ಬರೆದಿದ್ದಾರೆ. ಪ್ರಸ್ತುತ ಯಾವುದೇ ಬ್ಯಾಟ್ಸ್‌ಮನ್ ಕೂಡ ರೋಹಿತ್ ಅವರ ಈ ದಾಖಲೆಯ ಹತ್ತಿರವೂ ಇಲ್ಲ.

ಇದನ್ನೂ ಓದಿ: ದೀಪಾ ಕರ್ಮಾಕರ್ ನ್ನು ಅಮಾನತುಗೊಳಿಸಿದ ಅಂತರಾಷ್ಟ್ರೀಯ ಜಿಮ್ನಾಸ್ಟಿಕ್ ಸಂಸ್ಥೆ

ಮುರಳಿ ವಿಜಯ್ ವೃತ್ತಿಜೀವನ ಹೀಗಿದೆ

ಮುರಳಿ ವಿಜಯ್ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 61 ಪಂದ್ಯಗಳನ್ನು ಆಡಿದ್ದಾರೆ.  ಇದರಲ್ಲಿ 12 ಶತಕ ಭಾರಿಸಿರುವ ಅವರು ಒಟ್ಟು 3,982 ರನ್ ಗಳಿಸಿದ್ದಾರೆ. ಏಕದಿನ ಮತ್ತು ಟಿ-20 ಕ್ರಿಕೆಟ್‌ನಲ್ಲಿ ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಸಿಕ್ಕ ಅವಕಾಶಗಳನ್ನು ಅವರಿಗೆ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಕಳೆದ 3 ವರ್ಷಗಳಿಂದ ತಂಡದಿಂದ ಹೊರಗುಳಿದಿರುವ ಅವರಿಗೆ ಅವಕಾಶ ಸಿಗುವುದು ಬಹುತೇಕ ಡೌಟ್(Murali Vijay Retirement). ಏಕೆಂದರೆ ರೋಹಿತ್ ಶರ್ಮಾ ಹಾಗೂ ಕೆ.ಎಲ್.ರಾಹುಲ್ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಹೀಗಾಗಿ ವಿಜಯ್ ಗೆ ತಂಡದಿಂದ ಬಹುತೇಕ ಗೇಟ್ ಪಾಸ್ ಸಿಕ್ಕಂತಾಗಿದೆ.   

ರೋಹಿತ್ ಎಲ್ಲಾ 3 ಮಾದರಿಗಳ ನಾಯಕ

ರೋಹಿತ್ ಶರ್ಮಾ ಈಗ ಎಲ್ಲಾ 3 ಮಾದರಿಗಳಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ. ವಿರಾಟ್ ಕೊಹ್ಲಿ ಬದಲಿಗೆ ರೋಹಿತ್ ಬಂದಿದ್ದಾರೆ. ಐಪಿಎಲ್‌ನಲ್ಲಿ ಅದ್ಭುತ ನಾಯಕತ್ವದ ನಂತರ ರೋಹಿತ್‌ಗೆ ಟೀಂ ಇಂಡಿಯಾ(Team India)ದ ಕಮಾಂಡ್ ನೀಡಲಾಗಿದೆ. ರೋಹಿತ್ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ 5 ಬಾರಿ ಐಪಿಎಲ್ ಗೆದ್ದಿದೆ. ಈಗ ರೋಹಿತ್ ಟೆಸ್ಟ್ ಕ್ರಿಕೆಟ್‌ನಲ್ಲೂ ಅದೇ ಅದ್ಭುತ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News