Team India: T20ಗೆ ಟೀಂ ಇಂಡಿಯಾದ ಈ 9 ಆಟಗಾರರು ಫಿಕ್ಸ್?! ಫೈನಲ್‌ ಸೆಲೆಕ್ಷನ್ ಯಾವಾಗ?

T20 Team India Selection: ಟೀಂ ಇಂಡಿಯಾ ಪರವಾಗಿ ಯಾರು ಟಿ20 ವಿಶ್ವಕಪ್ ಆಡಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.  

Written by - Savita M B | Last Updated : Apr 20, 2024, 09:54 PM IST
  • ಐಪಿಎಲ್ 17ನೇ ಋತುವಿನ ಪಂದ್ಯಗಳು ರೋಚಕವಾಗಿರಲಿವೆ. ಹಿರಿಯರ ಜತೆಗೆ ಕಿರಿಯರೂ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ.
  • ಈ ಟೂರ್ನಿಯ ಬಳಿಕ ಟಿ20 ವಿಶ್ವಕಪ್ ನಡೆಯಲಿದೆ
Team India: T20ಗೆ ಟೀಂ ಇಂಡಿಯಾದ ಈ 9 ಆಟಗಾರರು ಫಿಕ್ಸ್?! ಫೈನಲ್‌ ಸೆಲೆಕ್ಷನ್ ಯಾವಾಗ?  title=

T20 World Cup 2024: ಐಪಿಎಲ್ 17ನೇ ಋತುವಿನ ಪಂದ್ಯಗಳು ರೋಚಕವಾಗಿರಲಿವೆ. ಹಿರಿಯರ ಜತೆಗೆ ಕಿರಿಯರೂ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಈ ಟೂರ್ನಿಯ ಬಳಿಕ ಟಿ20 ವಿಶ್ವಕಪ್ ನಡೆಯಲಿದೆ. ಈ ಹಿನ್ನಲೆಯಲ್ಲಿ ಟೀಂ ಇಂಡಿಯಾ ಪರವಾಗಿ ಯಾರು ಟಿ20 ವಿಶ್ವಕಪ್ ಆಡಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಮೇ 1ರೊಳಗೆ ಸಂಭಾವ್ಯರ ಪಟ್ಟಿಯನ್ನು ಐಸಿಸಿಗೆ ನೀಡುವ ಅಗತ್ಯವಿದೆ. ಹೀಗಾಗಿ ಬಿಸಿಸಿಐ ಆಯ್ಕೆಗಾರರು ತಂಡವನ್ನು ಪ್ರಕಟಿಸಲು ಸಿದ್ಧತೆ ನಡೆಸಿದ್ದಾರೆ.

ಈ ತಿಂಗಳ 27 ಅಥವಾ 28 ರಂದು ದೆಹಲಿಯಲ್ಲಿ ಟಿ20 ತಂಡದ ಆಯ್ಕೆ ಕುರಿತು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ನಡುವೆ ಸಭೆ ನಡೆಯಲಿದೆ ಎಂದು ದೈನಿಕ್ ಜಾಗರಣ್ ಹೇಳಿದ್ದಾರೆ. 27ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಅದೇನೇ ಇರಲಿ, ಅಂದು ರೋಹಿತ್ ಶರ್ಮಾ ದೆಹಲಿಯಲ್ಲಿರುತ್ತಾರೆ ಹಾಗಾಗಿ ಅದೇ ದಿನ ಆಯ್ಕೆಗಾರ ಅಗರ್ಕರ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗಿದೆ.‌

ಇದನ್ನೂ ಓದಿ-IPL 2024: Alert: MS Dhoni ಮೈದಾನಕ್ಕಿಳಿಯುತ್ತಿದ್ದಂತೆ Quinton De Kock ಪತ್ನಿಯ ಸ್ಮಾರ್ಟ್ ವಾಚ್ ನಲ್ಲಿ ಬಂತು ಅಪಾಯದ ಮುನ್ಸೂಚನೆ ಸಂದೇಶ!

ಟಿ20 ವಿಶ್ವಕಪ್‌ಗೆ 15 ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ. ಸುಮಾರು ಒಂಬತ್ತರಿಂದ ಹತ್ತು ಆಟಗಾರರನ್ನು ಅಂತಿಮಗೊಳಿಸಲಾಗಿದೆಯಂತೆ. ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್.

ಆದರೆ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಅವರು ಐಪಿಎಲ್‌ನಲ್ಲಿ ಉತ್ತಮವಾಗಿ ಆಡುತ್ತಾರೋ ಇಲ್ಲವೋ ಎಂಬುದರ ಮೇಲೆ ಅವರ ಆಯ್ಕೆಯು ಅವಲಂಬಿತವಾಗಿರುತ್ತದೆ. ಬೌಲಿಂಗ್ ನಲ್ಲಿ ಮಿಂಚಿದರೆ ಮಾತ್ರ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗಲಿದೆ ಎಂಬ ಸ್ಪಷ್ಟ ಸೂಚನೆಗಳು ಹಾರ್ದಿಕ್ ಗೆ ಈಗಾಗಲೇ ಸಿಕ್ಕಿರುವಂತಿದೆ.

ಇದನ್ನೂ ಓದಿ-IPL 2024: ಹೈದರಬಾದ್ ವಿರುದ್ಧ ಡೆಲ್ಲಿ ಪಂದ್ಯ, ಟಾಸ್ ಗೆದ್ದ DC ಬೌಲಿಂಗ್ ಆಯ್ಕೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News