ಇಶಾನ್ ಕಿಶನ್‌ಗೆ ಮತ್ತೊಂದು ಸಂಕಷ್ಟ.. ಮತ್ತೆ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗ್ತಾರಾ ಸ್ಟಾರ್ ಕ್ರಿಕೆಟಿಗ!

Ishan Kishan: ರಣಜಿ ಟ್ರೋಪಿಯಲ್ಲಿ ಆಡದೇ ಬಿಸಿಸಿಐ ಕೆಂಗಣ್ಣಿಗೆ ಗುರಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಇಶಾನ್ ಕಿಶನ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ..  

Written by - Savita M B | Last Updated : Mar 1, 2024, 02:53 PM IST
  • ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಇಶಾನ್ ಕಿಶನ್
  • ಇಶಾನ್ ಕಿಶನ್ ಸಂಕಷ್ಟಗಳು ಒಂದರ ಹಿಂದೆ ಒಂದು ಹೆಚ್ಚಾಗುವಂತೆ ಕಾಣುತ್ತಿವೆ
  • ಈಗ ಈ ಬೇಜವಾಬ್ದಾರಿ ಅವರನ್ನು ಸಂಕಷ್ಟಕ್ಕೆ ಸಿಲುಕಿಸಬಹುದು.
ಇಶಾನ್ ಕಿಶನ್‌ಗೆ ಮತ್ತೊಂದು ಸಂಕಷ್ಟ.. ಮತ್ತೆ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗ್ತಾರಾ ಸ್ಟಾರ್ ಕ್ರಿಕೆಟಿಗ!  title=

BCCI: ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಇಶಾನ್ ಕಿಶನ್ ಸಂಕಷ್ಟಗಳು ಒಂದರ ಹಿಂದೆ ಒಂದು ಹೆಚ್ಚಾಗುವಂತೆ ಕಾಣುತ್ತಿವೆ.. ಮೊದಲಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲಿಲ್ಲ.. ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅವರ ವಾರ್ಷಿಕ ಒಪ್ಪಂದದಿಂದ ಅವರನ್ನು ಕೈಬಿಡಲಾಯಿತು.. ಈಗ ಇಶಾನ್‌ ಕಿಶನ್‌ ಮತ್ತೊಂದು ದೊಡ್ಡ ತಪ್ಪು ಮಾಡಿದ್ದು.. ಅದರ ಮೇಲೆ ಮಂಡಳಿಯು ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎನ್ನುವ ವರದಿಗಳು ಲಭ್ಯವಾಗುತ್ತಿವೆ.. 

ಇದನ್ನೂ ಓದಿ-ಇಶಾನ್, ಅಯ್ಯರ್ ಮಾತ್ರವಲ್ಲ… ಬಿಸಿಸಿಐ ಒಪ್ಪಂದದಿಂದ ಹೊರಬಿದ್ರು 7 ಸ್ಟಾರ್ ಆಟಗಾರರು! ಯಾರವರು?

 ಟೀಂ ಇಂಡಿಯಾದಿಂದ ಹೊರಬಿದ್ದ ನಂತರ ಇಶಾನ್ ಅವರನ್ನು ರಣಜಿ ಟ್ರೋಫಿಯಲ್ಲಿ ಆಡಲು ಕೇಳಲಾಗಿತ್ತು.. ಆದರೆ ಅವರು ನಿರಾಕರಿಸಿದ್ದರು.. ಸದ್ಯ ಇವರು ಡಿವೈ ಪಾಟೀಲ್ ಟಿ20 ಟೂರ್ನಿಯಲ್ಲಿ ಆಡುತ್ತಿದ್ದಾರೆ... ಸುದೀರ್ಘ ಅವಧಿಯ ಬ್ರೇಕ್‌ನ ನಂತರ ಮೈದಾನಕ್ಕೆ ಎಂಟ್ರಿಕೊಟ್ಟ ಸ್ಟಾರ್‌ ಕ್ರಿಕೆಟಿಗ ಇಶಾನ್‌ ಕಿಶನ್‌ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡಲಿಲ್ಲ.. ಆದರೆ ಅಲ್ಲಿ ಹೈಲೈಟ್‌ ಆಗಿದ್ದು ಅವರು ಹೆಲ್ಮೆಟ್‌.. ಪಂದ್ಯದಲ್ಲಿ ಆಡುವಾಗ ಇಶಾನ್ ಧರಿಸಿದ್ದ ಹೆಲ್ಮೆಟ್ ಮೇಲೆ ಬಿಸಿಸಿಐ ಲೋಗೋ ಮುದ್ರಿಸಲಾಗಿತ್ತು. ಈಗ ಈ ಬೇಜವಾಬ್ದಾರಿ ಅವರನ್ನು ಸಂಕಷ್ಟಕ್ಕೆ ಸಿಲುಕಿಸಬಹುದು.

ಇದನ್ನೂ ಓದಿ-BCCI ಒಪ್ಪಂದ ಪಟ್ಟಿ ಪಕ್ರಟ: ಕೇಂದ್ರ ಗುತ್ತಿಗೆಯಿಂದ ಹೊರಬಿದ್ದ ಶ್ರೇಯಸ್, ಇಶಾನ್! ಯುವ ಆಟಗಾರರಿಗೆ ಉಡುಗೊರೆ

ಬಿಸಿಸಿಐ ಹೆಲ್ಮೆಟ್ ಬಳಕೆಗೆ ಸಂಬಂಧಿಸಿದಂತೆ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಮಾಡಿದೆ... ಬಿಸಿಸಿಐ ಲಾಂಛನ ಮತ್ತು ಭಾರತ ತಂಡದ ಜೆರ್ಸಿ ಇರುವ ಹೆಲ್ಮೆಟ್ ಅನ್ನು ದೇಶೀಯ ಕ್ರಿಕೆಟ್ ಪಂದ್ಯದಲ್ಲಿ ಯಾವುದೇ ಆಟಗಾರ ಧರಿಸುವಂತಿಲ್ಲ.. ಒಂದು ವೇಳೆ ಬಳಸಲು ಬಯಸಿದರೆ  ಹೆಲ್ಮೆಟ್‌ನಲ್ಲಿ ಲೋಗೋವನ್ನು ಕವರ್ ಮಾಡಬೇಕು.. ಇದೀಗ ಇಶಾನ್‌ ಕಿಶನ್‌ ಈ ನಿಯಮ ಉಲ್ಲಂಘಿಸಿದ್ದಾರೆ. 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News