IPL 2024 ರ ಸಂಭ್ರಮದಲ್ಲಿ 'ಪ್ರೇಮ ಪ್ರಣಯ'.. ದಿಢೀರ್ ಮದುವೆ ಪೋಟೋ ಹಂಚಿಕೊಂಡು ಶಾಕ್‌ ಕೊಟ್ಟ ಟೀಂ ಇಂಡಿಯಾ ಕ್ರಿಕೆಟರ್!!

Priyank Panchal Marriage: ಗುಜರಾತ್ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡುತ್ತಿರುವ ಪ್ರಿಯಾಂಕ್ ಪಾಂಚಾಲ್ ಐಪಿಎಲ್ 2024 ರ ಸಂಭ್ರಮದ ನಡುವೆ ವಿವಾಹವಾಗಿದ್ದಾರೆ. ಸದ್ಯ ಮದುವೆಯ ಫೋಟೋಗಳನ್ನು ಸೋಷಿಯಲ್‌ ಮಿಡಿಯಾಗಳ ಮೂಲಕ ಹಂಚಿಕೊಂಡಿದ್ದಾರೆ.

Written by - Savita M B | Last Updated : Mar 30, 2024, 01:30 PM IST
  • ಸದ್ಯ ನಡೆಯುತ್ತಿರುವ ಐಪಿಎಲ್ 2024 ರ ಸಂಭ್ರಮ ಭರ್ಜರಿಯಾಗಿದೆ
  • ಅಭಿಮಾನಿಗಳು ತಮ್ಮ ನೆಚ್ಚಿನ ತಂಡಗಳನ್ನು ಬೆಂಬಲಿಸುತ್ತಿದ್ದಾರೆ
  • ಆದರೆ ಐಪಿಎಲ್ ಸಂಭ್ರಮದ ನಡುವೆಯೇ ಭಾರತೀಯ ಕ್ರಿಕೆಟಿಗನ ಪ್ರಣಯ ಚಿಗುರೊಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
IPL 2024 ರ ಸಂಭ್ರಮದಲ್ಲಿ 'ಪ್ರೇಮ ಪ್ರಣಯ'.. ದಿಢೀರ್ ಮದುವೆ ಪೋಟೋ ಹಂಚಿಕೊಂಡು ಶಾಕ್‌ ಕೊಟ್ಟ ಟೀಂ ಇಂಡಿಯಾ ಕ್ರಿಕೆಟರ್!! title=

Team india Cricketer Priyank Panchal: ಸದ್ಯ ನಡೆಯುತ್ತಿರುವ ಐಪಿಎಲ್ 2024 ರ ಸಂಭ್ರಮವು ಭರ್ಜರಿಯಾಗಿದ್ದು.. ಅಭಿಮಾನಿಗಳು ತಮ್ಮ ನೆಚ್ಚಿನ ತಂಡಗಳನ್ನು ಬೆಂಬಲಿಸುತ್ತಿದ್ದಾರೆ.. ಆದರೆ ಐಪಿಎಲ್ ಸಂಭ್ರಮದ ನಡುವೆಯೇ ಭಾರತೀಯ ಕ್ರಿಕೆಟಿಗನ ಪ್ರಣಯ ಚಿಗುರೊಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ... 

ಹೌದು ಗುಜರಾತ್ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡುತ್ತಿರುವ ಪ್ರಿಯಾಂಕ್ ಪಾಂಚಾಲ್ ಐಪಿಎಲ್ 2024 ರ ನಡುವೆ ತಮ್ಮ ಪ್ರೇಯಸಿಗೆ ಮೂರು ಗಂಟು ಕಟ್ಟಿದ್ದಾರೆ. ಅವರು ಕ್ರೀಡಾ ಮನಶ್ಶಾಸ್ತ್ರಜ್ಞ ಕಲ್ನಾ ಶುಕ್ಲಾ ಅವರನ್ನು ವಿವಾಹವಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಪೋಟೋ ಶೇರ್‌ ಮಾಡಿಕೊಂಡು ಶಾಕ್‌ ನೀಡಿದ್ದಾರೆ.. 

ಇದನ್ನೂ ಓದಿ-SRH VS MI: Harshit Rana ಕಾಲೆಳೆಯುತ್ತ Mayank ಗೆ ಫ್ತ್ಲೆಯಿಂಗ್ ಕಿಸ್ಸ್ ನೀಡಿದ Rohit Sharma, ಫೋಟೋ ಡಿಲೀಟ್ ಮಾಡಿದ SRH!

ಮದುವೆಯ ಫೋಟೋಗಳಿಗೆ ಪ್ರಿಯಾಂಕ್ "ಭರವಸೆ ತುಂಬಿದ ಹೃದಯಗಳೊಂದಿಗೆ, ಪ್ರೀತಿಯ ಸುಂದರ ಪಯಣದಲ್ಲಿ ನಾವು ನಮ್ಮ ಹಾದಿಯನ್ನು ಸೇರುತ್ತೇವೆ. ನಮ್ಮ ಪ್ರೇಮ ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಖುಷಿಪಡುತ್ತೇನೆ" ಎಂದು ಶೀರ್ಷಿಕೆ ನೀಡಿದ್ದಾರೆ.. 

ಇದನ್ನೂ ಓದಿ-Fact Check: ಮೈದಾನದಲ್ಲಿ ಧೋನಿ ಪಾದ ಸ್ಪರ್ಶಿಸಿ ಆಶೀರ್ವಾದ ಪಡೆದ ಪತಿರಾಣ!? ವೈರಲ್ ವಿಡಿಯೋದ ಅಸಲಿಯತ್ತೇನು?

ಇನ್ನು ಇದಕ್ಕೂ ಮುನ್ನ ಪ್ರಿಯಾಂಕ್ ತಮ್ಮ ನಿಶ್ಚಿತಾರ್ಥದ ಮಾಹಿತಿಯನ್ನು ಹಂಚಿಕೊಂಡಿದ್ದು.. ಜನವರಿ 2023 ರಲ್ಲಿ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದರು.. ಸದ್ಯ ಮದುವೆ ಮಾಡಿಕೊಂಡಿದ್ದಾರೆ.. 

ಇಲ್ಲಿಯವರೆಗೆ ಪ್ರಿಯಾಂಕ್ ತಮ್ಮ ವೃತ್ತಿಜೀವನದಲ್ಲಿ 120 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು.. 196 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿ, 45.52 ಸರಾಸರಿಯಲ್ಲಿ 8423 ರನ್ ಗಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News