ಟಿ20Iನಲ್ಲಿ ಹೊಸ ದಾಖಲೆ ನಿರ್ಮಿಸಿದ ಟೀಂ ಇಂಡಿಯಾ: ಭಾರತೀಯರಿಗೆ ಇದು ಹೆಮ್ಮೆಯ ಕ್ಷಣ

ಇನ್ನು ಟೀಂ ಇಂಡಿಯಾ 20 ಓವರ್ ಗಳಲ್ಲಿ ಕೇವಲ ಮೂರು ವಿಕೆಟ್ ನಷ್ಟಕ್ಕೆ 237 ರನ್ ಪೇರಿಸಿ ನೂತನ ದಾಖಲೆ ಬರೆದಿದೆ. ಇದು ಐಸಿಸಿ ಟಿ20ಐ ನಲ್ಲಿ ನಾಲ್ಕನೇ ಅತೀ ಹೆಚ್ಚು ರನ್ ಗಳಿಸಿದ ತಂಡ ಎಂಬ ಖ್ಯಾತಿಗೆ ಟೀಂ ಇಣಡಿಯಾ ಸೇರ್ಪಡೆಯಾಗಿದೆ.

Written by - Bhavishya Shetty | Last Updated : Oct 2, 2022, 09:28 PM IST
    • ಐಸಿಸಿ ಟಿ20ಐ ನಲ್ಲಿ ನಾಲ್ಕನೇ ಅತೀ ಹೆಚ್ಚು ರನ್ ಗಳಿಸಿದ ತಂಡ ಭಾರತ
    • ಹೊಸ ದಾಖಲೆ ನಿರ್ಮಿಸಿದ ಟೀಂ ಇಂಡಿಯಾ
    • 20 ಓವರ್ ಗಳಲ್ಲಿ ಕೇವಲ ಮೂರು ವಿಕೆಟ್ ನಷ್ಟಕ್ಕೆ 237 ರನ್ ಪೇರಿಸಿ ನೂತನ ದಾಖಲೆ
ಟಿ20Iನಲ್ಲಿ ಹೊಸ ದಾಖಲೆ ನಿರ್ಮಿಸಿದ ಟೀಂ ಇಂಡಿಯಾ: ಭಾರತೀಯರಿಗೆ ಇದು ಹೆಮ್ಮೆಯ ಕ್ಷಣ title=
India Cricket New Record

ಅಸ್ಸಾಂನ ಗುವಾಹಟಿಯ ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಎರಡನೇ ಟಿ20 ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದು, ಬ್ಯಾಟಿಂಗ್ ಮಾಡಲು ಟೀಂ ಇಂಡಿಯಾಗೆ ಅವಕಾಶ ನೀಡಿತು. ಈ ಅವಕಾಶವನ್ನು ಚೆನ್ನಾಗಿಯೇ ಉಪಯೋಗಿಸಿಕೊಂಡ ಟೀಂ ಇಂಡಿಯಾ ಹರಿಣಗಳನ್ನು ಬ್ಯಾಟಿಂಗ್ ನಲ್ಲಿ ಬೆಂಡೆತ್ತಿದೆ. 

ಇದನ್ನೂ ಓದಿ: IND vs SA : ಎರಡನೇ ಟಿ20 ಪಂದ್ಯದಲ್ಲಿ ಹಿಸ್ಟರಿ ನಿರ್ಮಿಸಲಿದ್ದಾರೆ ಕಿಂಗ್ ಕೊಹ್ಲಿ!

ಇನ್ನು ಟೀಂ ಇಂಡಿಯಾ 20 ಓವರ್ ಗಳಲ್ಲಿ ಕೇವಲ ಮೂರು ವಿಕೆಟ್ ನಷ್ಟಕ್ಕೆ 237 ರನ್ ಪೇರಿಸಿ ನೂತನ ದಾಖಲೆ ಬರೆದಿದೆ. ಇದು ಐಸಿಸಿ ಟಿ20ಐ ನಲ್ಲಿ ನಾಲ್ಕನೇ ಅತೀ ಹೆಚ್ಚು ರನ್ ಗಳಿಸಿದ ತಂಡ ಎಂಬ ಖ್ಯಾತಿಗೆ ಟೀಂ ಇಣಡಿಯಾ ಸೇರ್ಪಡೆಯಾಗಿದೆ. 

ಇದನ್ನೂ ಓದಿ: IND vs SA : ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ, ರೋಹಿತ್ ಬದಲಿಗೆ ಈ ಆಟಗಾರ ಕ್ಯಾಪ್ಟನ್!

ಟೀಂ ಇಂಡಿಯಾದ ಪರ ಸೂರ್ಯ ಕುಮಾರ್ ಯಾದವ್ ಅಬ್ಬರಿಸಿದ್ದು, 22 ಬಾಲ್ ಗೆ 66 ರನ್ ಬಾರಿಸಿ ಮತ್ತೊಮ್ಮೆ ಮಿಸ್ಟರ್ 360 ಎಂಬುದನ್ನು ಸಾಬೀತುಪಡಿಸಿದ್ದಾರೆ. ಇನ್ನುಳಿದಂತೆ ಕನ್ನಡಿಗ ಕೆ ಎಲ್ ರಾಹುಲ್ ಸಹ 28 ಬಾಲ್ ಗೆ 57 ರನ್ ಬಾರಿಸಿ ಅರ್ಧಶತಕ ಸಿಡಿಸಿದ್ದಾರೆ. ಇನ್ನು ರೋಹಿತ್ ಶರ್ಮಾ 37 ಬಾಲ್ ಗೆ 43 ರನ್, ವಿರಾಟ್ ಕೊಹ್ಲಿ ಅಜೇಯ 28 ಬಾಲ್ ಗೆ 49 ರನ್, ದಿನೇಶ್ ಕಾರ್ತಿಕ್ ಅಜೇಯ 7 ಬಾಲ್ ಗೆ 17 ರನ್ ಬಾರಿಸಿ ಟೀಂ ಇಂಡಿಯಾ 237 ರನ್ ಕಲೆ ಹಾಕುವಂತೆ ಮಾಡಿದರು.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News