Team India: ಈ ಮಾರಕ ಬೌಲರ್‌ನ ಕೆರಿಯರ್ ಹಾಳು ಮಾಡಿದ ರೋಹಿತ್-ದ್ರಾವಿಡ್!

ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾದಲ್ಲಿ ಸ್ಟಾರ್ ವೇಗದ ಬೌಲರ್ ಗೆ ಆಯ್ಕೆಗಾರರು ಸ್ಥಾನ ನೀಡಿಲ್ಲ. ಈ ವೇಗದ ಬೌಲರ್ ಅನ್ನು ಜಸ್ಪ್ರೀತ್ ಬುಮ್ರಾ ಅವರಂತಹ ಆಟಗಾರನಿಗೆ ಹೋಲಿಸಲಾಗುತ್ತದೆ. ಅವರು ಯಾರು ಗೊತ್ತಾ?

Written by - Puttaraj K Alur | Last Updated : Jul 27, 2022, 03:40 PM IST
  • ‘ಯಾರ್ಕರ್ ಕಿಂಗ್’ಗೆ ಟೀಂ ಇಂಡಿಯಾದಲ್ಲಿ ಸಿಗದ ಅವಕಾಶ
  • ಉತ್ತಮ ಪ್ರದರ್ಶನ ನೀಡಿದರೂ ಟಿ.ನಟರಾಜನ್‍ಗೆ ಸಿಕ್ಕಿಲ್ಲ ಚಾನ್ಸ್
  • ಗಾಯದ ಸಮಸ್ಯೆ & ಆಯ್ಕೆಗಾರರ ನಿರ್ಧಾರದಿಂದ ತಂಡ ಸೇರಲು ಸಾಧ‍್ಯವಾಗಿಲ್ಲ
Team India: ಈ ಮಾರಕ ಬೌಲರ್‌ನ ಕೆರಿಯರ್ ಹಾಳು ಮಾಡಿದ ರೋಹಿತ್-ದ್ರಾವಿಡ್!  title=
‘ಯಾರ್ಕರ್ ಕಿಂಗ್’ಗೆ ಸಿಗದ ಅವಕಾಶ

ನವದೆಹಲಿ: ಟೀಂ ಇಂಡಿಯಾ ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದೆ. ಈ ಪ್ರವಾಸದಲ್ಲಿ ಪ್ರಸ್ತುತ ಉಭಯ ತಂಡಗಳ ನಡುವೆ ಏಕದಿನ ಸರಣಿ ನಡೆಯುತ್ತಿದೆ. ಈ ಸರಣಿಯ ಬಳಿಕ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಎರಡೂ ಸರಣಿಗಳಲ್ಲಿ ಟೀಂ ಇಂಡಿಯಾದ ಮಾರಕ ವೇಗದ ಬೌಲರ್‌ಗೆ ಸ್ಥಾನ ಸಿಕ್ಕಿಲ್ಲ. ಈ ಆಟಗಾರ 2022ರ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಈ ಬೌಲರ್‌ಗೆ ದೀರ್ಘಕಾಲದವರೆಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಿಲ್ಲ. ಈ ಆಟಗಾರನನ್ನು ಜಸ್ಪ್ರೀತ್ ಬುಮ್ರಾ ಅವರಂತಹ ವೇಗದ ಬೌಲರ್‌ಗೆ ಹೋಲಿಸಲಾಗುತ್ತದೆ.

ಈ ಆಟಗಾರನಿಗೆ ಅವಕಾಶ ಸಿಗುತ್ತಿಲ್ಲ!

ಟೀಂ ಇಂಡಿಯಾದ ಸ್ಟಾರ್ ವೇಗದ ಬೌಲರ್ ಟಿ.ನಟರಾಜನ್ ಟೀಂ ಇಂಡಿಯಾದಲ್ಲಿ ಬಹಳ ದಿನಗಳಿಂದ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ. ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾದಲ್ಲಿ ಟಿ.ನಟರಾಜನ್ ಅವರನ್ನು ಆಯ್ಕೆಗಾರರು ಆಯ್ಕೆ ಮಾಡಿಲ್ಲ. 2022ರಲ್ಲಿ ಐಪಿಎಲ್ ಟೂರ್ನಿಯಲ್ಲಿ ನಟರಾಜನ್ ಉತ್ತಮ ಫಾರ್ಮ್‌ನಲ್ಲಿದ್ದರು. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದ ನಟರಾಜನ್ ರೋಹಿತ್ ನಾಯಕತ್ವದಲ್ಲಿ ನಿರಂತರವಾಗಿ ಅವಕಾಶಕ್ಕಾಗಿ ಕಾಯುವಂತಾಗಿದೆ.

ಇದನ್ನೂ ಓದಿ: Team India : ಟೀಂ ಇಂಡಿಯಾಗೆ ಸಿಕ್ಕಿದ್ದಾನೆ ಅಪಾಯಕಾರಿ ಫಿನಿಶರ್ : ಈ ಭಾರಿ ಟಿ20 ವಿಶ್ವಕಪ್ ಗೆಲುವು ಗ್ಯಾರಂಟಿ!

ಗಾಯದ ಸಮಸ್ಯೆಯೂ ಕಾರಣ

ಟಿ.ನಟರಾಜನ್ 1 ವರ್ಷದಿಂದ ಭಾರತ ಕ್ರಿಕೆಟ್ ತಂಡದಿಂದ ಹೊರಗುಳಿದಿದ್ದಾರೆ. ಅವರನ್ನು ‘ಯಾರ್ಕರ್ ಕಿಂಗ್’ ಎಂದು ಕರೆಯುತ್ತಾರೆ. ಅವರು ಬುಮ್ರಾರಂತೆ ಬೌಲಿಂಗ್‌ನಲ್ಲಿ ಪ್ರವೀಣರಾಗಿದ್ದಾರೆ. ಐಪಿಎಲ್ 2022ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡಿದ್ದ ನಟರಾಜನ್ ಅದ್ಭುತ ಆಟ ಪ್ರದರ್ಶಿಸಿದರು. 11 ಪಂದ್ಯಗಳಲ್ಲಿ 18 ವಿಕೆಟ್ಗಳನ್ನು ಪಡೆದು ಅವರು ಮಿಂಚಿದ್ದರು. ಈ ಪ್ರದರ್ಶನದ ಹೊರತಾಗಿಯೂ ಅವರು ತಂಡ ಸೇರಲು ಸಾಧ್ಯವಾಗಿಲ್ಲ. ಗಾಯದ ಸಮಸ್ಯೆಯಿಂದಲೂ ಅವರು ಟೀಂ ಇಂಡಿಯಾದಲ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

3 ಫಾರ್ಮೆಟ್‌ಗಳಲ್ಲಿ ಆಡಿರುವ ನಟರಾಜನ್

2020-2021ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟಿ.ನಟರಾಜನ್ ಎಲ್ಲಾ 3 ಸ್ವರೂಪಗಳಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದರು. ನಟರಾಜನ್ ಭಾರತದ ಪರ 1 ಟೆಸ್ಟ್ ಪಂದ್ಯ, 4 T20 ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು 2 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‍ನಲ್ಲಿ 3 ವಿಕೆಟ್, ಟಿ20ಯಲ್ಲಿ 7 ವಿಕೆಟ್ ಹಾಗೂ ಏಕದಿನದಲ್ಲಿ 3 ವಿಕೆಟ್ ಪಡೆದಿದ್ದಾರೆ. ನಟರಾಜನ್ ಮಾರ್ಚ್ 2021ರಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು.  

ಇದನ್ನೂ ಓದಿ: IND vs PAK: ಟೀಂ ಇಂಡಿಯಾ-ಪಾಕ್‌ ನಡುವಣ ರೋಚಕ ಕದನಕ್ಕೆ ಕೊನೆಗೂ ಫಿಕ್ಸ್‌ ಆಯ್ತು ಡೇಟ್‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News