T20 World Cup 2021: ICCಯಿಂದ ವಿಶ್ವ T-20 ಆಯೋಜನೆಯ ಜಾಗ ಮತ್ತು ದಿನಾಂಕಗಳ ಘೋಷಣೆ

ICC Mens T20 World Cup 2021 -  ಕರೋನಾದ ಕಾರಣ, ಈ ಪಂದ್ಯಾವಳಿಯನ್ನು ಭಾರತದ ಬದಲು ಯುಎಇ ಮತ್ತು ಒಮಾನ್‌ನಲ್ಲಿ ಆಯೋಜಿಸಲಾಗುತ್ತಿದೆ. ಇದೀಗ ಐಸಿಸಿ ಈ ಟೂರ್ನಿಯ ವೆನ್ಯೂ ಹಾಗೂ ದಿನಾಂಕಗಳನ್ನು ಬಿಡುಗಡೆ ಮಾಡಿದೆ.

Written by - Nitin Tabib | Last Updated : Jun 29, 2021, 08:50 PM IST
  • ಕರೋನಾದ ಕಾರಣ, ಈ ಪಂದ್ಯಾವಳಿಯನ್ನು ಭಾರತದ ಬದಲು ಯುಎಇ ಮತ್ತು ಒಮಾನ್‌ನಲ್ಲಿ ಆಯೋಜಿಸಲಾಗುತ್ತಿದೆ.
  • ಇದೀಗ ಐಸಿಸಿ ಈ ಟೂರ್ನಿಯ ವೆನ್ಯೂ ಹಾಗೂ ದಿನಾಂಕಗಳನ್ನು ಬಿಡುಗಡೆ ಮಾಡಿದೆ.
  • ಪಂದ್ಯಗಳು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣ, ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣ, ಶಾರ್ಜಾ ಕ್ರೀಡಾಂಗಣ ಮತ್ತು ಒಮನ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆಯಲಿವೆ.
T20 World Cup 2021: ICCಯಿಂದ ವಿಶ್ವ T-20 ಆಯೋಜನೆಯ ಜಾಗ ಮತ್ತು ದಿನಾಂಕಗಳ ಘೋಷಣೆ title=
ICC T20 World Cup 2021 (File Photo)

T20 World Cup 2021: ಈ ಬಾರಿ ಯುಎಇ ಮತ್ತು ಒಮಾನ್‌ನಲ್ಲಿ ಟಿ 20 ವಿಶ್ವಕಪ್ ಆಯೋಜಿಸಲಾಗುವುದು ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮಂಗಳವಾರ ಪ್ರಕಟಿಸಿದೆ. ವಿಶ್ವಕಪ್ ಅಕ್ಟೋಬರ್ 17 ರಿಂದ ಪ್ರಾರಂಭವಾಗಲಿದ್ದು, ಅದರ ಅಂತಿಮ ಪಂದ್ಯ ನವೆಂಬರ್ 14 ರಂದು ನಡೆಯಲಿದೆ. ಕರೋನಾದ ಕಾರಣ, ಟಿ 20 ವಿಶ್ವಕಪ್ ಅನ್ನು ಭಾರತದಲ್ಲಿ ಆಯೋಜಿಸಲಾಗುತ್ತಿಲ್ಲ. ಐಸಿಸಿ ಪ್ರಕಾರ, ಈ ಪಂದ್ಯಾವಳಿ ಭಾರತದಲ್ಲಿ ನಡೆಯದಿದ್ದರೂ ಕೂಡ ಈ ಪಂದ್ಯಾವಳಿಯ ಆಯೋಜನೆಯನ್ನು BCCI ನಡೆಸಲಿದೆ.

ಈ ನಾಲ್ಕು ಸ್ಟೇಡಿಯಂಗಳಲ್ಲಿ ನಡೆಯಲಿದೆ ಟೂರ್ನಿ (T20 World Cup 2021 Schedule Date)
ಐಸಿಸಿ ಪ್ರಕಾರ, ಟಿ 20 ವಿಶ್ವಕಪ್‌ನ ಎಲ್ಲಾ ಪಂದ್ಯಗಳು ಯುಎಇ ಮತ್ತು ಒಮಾನ್‌ನ 4 ಕ್ರೀಡಾಂಗಣಗಳಲ್ಲಿ ನಡೆಯಲಿವೆ. ಇವುಗಳಲ್ಲಿ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣ, ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣ, ಶಾರ್ಜಾ ಕ್ರೀಡಾಂಗಣ ಮತ್ತು ಒಮನ್ ಕ್ರಿಕೆಟ್ ಅಕಾಡೆಮಿ ಮೈದಾನ ಶಾಮೀಲಾಗಿವೆ.

ಭಾರತದಲ್ಲಿ ಆಯೋಜನೆ ಇಲ್ಲ: ನಿರಾಶೆ ವ್ಯಕ್ತಪಡಿಸಿದ ICC (ICC T20 World Cup 2021 Schedule Date)
"ಟಿ 20 ವಿಶ್ವಕಪ್ ಅನ್ನು ಸುರಕ್ಷಿತವಾಗಿ ಆಯೋಜಿಸುವುದು ನಮ್ಮ ಆದ್ಯತೆಯಾಗಿದೆ. ಆದರೆ, ಇದು ಭಾರತದಲ್ಲಿ ಆಯೋಜಿಸಲಾಗುತ್ತಿಲ್ಲ ಎಂಬುದಕ್ಕೆ ನಾವು ನಿರಾಶೆಗೊಂಡಿದ್ದೇವೆ. ಅಭಿಮಾನಿಗಳು ಅತ್ಯುತ್ತಮ ಕ್ರಿಕೆಟಿಂಗ್ ಸ್ಪರ್ಧೆಗಳನ್ನು ಆನಂದಿಸಬಹುದೆಂದು ಖಚಿತಪಡಿಸಿಕೊಳ್ಳಲು ನಾವು ಬಿಸಿಸಿಐ, ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಮತ್ತು ಓಮನ್ ಕ್ರಿಕೆಟ್ ಜೊತೆ ನಿಕಟವಾಗಿ ಕೆಲಸ ಮಾಡುತ್ತೇವೆ" ಎಂದು ICCಯ ಕಾರ್ಯಕಾರಿ CEO ಜೆಫ್ ಎಲರ್ಡಿಸ್ ಹೇಳಿದ್ದಾರೆ.

ಇದನ್ನೂ ಓದಿ-T20 World Cup ಭಾರತದಿಂದ ಯುಎಇಗೆ ವರ್ಗಾವಣೆಯಾಗಲಿದೆ- ಗಂಗೂಲಿ ಸ್ಪಷ್ಟನೆ

BCCI ಅಧ್ಯಕ್ಷ ಸೌರವ ಗಂಗೂಲಿ ಹೇಳಿದ್ದೇನು? (T20 World Cup Schedule Venue)
ಈ ಕುರಿತು ಹೇಳಿಕೆ ನೀಡಿರುವ BCCI ಅಧ್ಯಕ್ಷ ಸೌರವ್ ಗಂಗೂಲಿ, " ಐಸಿಸಿ ಪುರುಷರ ಟಿ 20 ವಿಶ್ವಕಪ್ ಅನ್ನು ಯುಎಇ ಮತ್ತು ಒಮಾನ್‌ನಲ್ಲಿ ಆಯೋಜಿಸಲು ಬಿಸಿಸಿಐ ಎದುರು ನೋಡುತ್ತಿದೆ. ಇದು ಭಾರತದಲ್ಲಿದ್ದರೆ ನಾವು ಹೆಚ್ಚು ಸಂತೋಷಪಡುತ್ತಿದ್ದೆವು, ಆದರೆ ಕೋವಿಡ್ -19 ರ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಪಂದ್ಯಾವಳಿಯನ್ನು ಯುಎಇ ಮತ್ತು ಒಮಾನ್‌ನಲ್ಲಿ ಬಿಸಿಸಿಐ ಮುಂದುವರಿಸಲಿದೆ. ಇದಕ್ಕಾಗಿ ಬಿಸಿಸಿಐ ಸಂಪೂರ್ಣ ಸಿದ್ಧವಾಗಿದೆ." ಎಂದು ಹೇಳಿದ್ದಾರೆ.

ಇದನ್ನೂ ಓದಿ-IPL 2021 ಹೊಸ ವೇಳಾಪಟ್ಟಿ: ಯುಎಇಯಲ್ಲಿ ಪೂರ್ಣಗೊಳ್ಳಲಿದೆ ಪಂದ್ಯಾವಳಿ

ಕೊರೊನಾ ಕಾರಣ IPL ಕೂಡ ರದ್ದಾಗಿತ್ತು (ICC T20 World Cup 2021)
ದೇಶಾದ್ಯಂತ ಕೊರೊನಾ ವೈರಸ್ ಎರಡನೇ ಅಲೆಯ ಅಪಾಯದ ಹಿನ್ನೆಲೆ BCCI, IPL ಟೂರ್ನಿಯನ್ನು ಕೂಡ ರದ್ದುಗೊಳಿಸಿತ್ತು. ಈ ಸಂದರ್ಭದಲ್ಲಿ IPLನ ಹಲವು ಆಟಗಾರರು ಕೊರೊನಾ ಸೋಂಕಿಗೆ ಗುರಿಯಾಗಿದ್ದರು. ಹೀಗಾಗಿ ಇದೀಗ IPL ಆಯೋಜನೆಯನ್ನು ಕೂಡ UAEಯಲ್ಲಿ ನಡೆಸಲಾಗುತ್ತಿದೆ. ಕಳೆದ ವರ್ಷವೂ ಕೂಡ IPL ಟೂರ್ನಿ UAEಯಲ್ಲಿ ಆಯೋಜಿಸಲಾಗಿತ್ತು ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ- IPL 2021: ದ್ವಿಗುಣಗೊಳ್ಳಲಿದೆ ಐಪಿಎಲ್‌ನ ವಿನೋದ, ಶೀಘ್ರದಲ್ಲೇ 2 ಹೊಸ ತಂಡಗಳ ಪ್ರವೇಶ ಸಾಧ್ಯತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News