Suzuki Hayabusa 2021 - ಭಾರತಕ್ಕೆ ಎಂಟ್ರಿ ನೀಡಲಿದೆ Suzuki Hayabusa ನೂತನ ಅವತಾರ, ಬಿಡುಗಡೆ ಹಾಗೂ ಬೈಕ್ ವಿಶೇಷತೆ ಇಲ್ಲಿದೆ

Suzuki Hayabusa India Launch - ಸ್ಪೋರ್ಟ್ಸ್ ಬೈಕ್ ಪ್ರಿಯರಿಗೆ ಸಂತಸದ ಸುದ್ದಿ ಪ್ರಕಟವಾಗಿದೆ. ಜಪಾನ್ ವಾಹನ ತಯಾರಕ ಕಂಪನಿ ಸುಜುಕಿ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ ನಲ್ಲಿ ಕಂಪನಿ ತನ್ನ Suzuki Hayabusa Next Generation Model ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. 

Written by - Nitin Tabib | Last Updated : Mar 1, 2021, 10:21 PM IST

    ಭಾರತದಲ್ಲಿ ತನ್ನ ಮುಂದಿನ ತಲೆಮಾರಿನ Suzuki Hayabusa ಬಿಡುಗಡೆ ಮಾಡುವುದಾಗಿ ಘೋಷಿಸಿದ ಸುಜುಕಿ.

    ಕಂಪನಿ ತನ್ನ ಅಧಿಕೃತ twitter ಹ್ಯಾಂಡಲ್ ಮೂಲಕ ಈ ಘೋಷಣೆ ಮಾಡಿದೆ.

    ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ, ವೈಶಿಷ್ಟ್ಯಗಳು ಏನಿರಲಿವೆ ತಿಳಿಯೋಣ ಬನ್ನಿ.

Suzuki Hayabusa 2021 - ಭಾರತಕ್ಕೆ ಎಂಟ್ರಿ ನೀಡಲಿದೆ Suzuki Hayabusa ನೂತನ ಅವತಾರ, ಬಿಡುಗಡೆ ಹಾಗೂ ಬೈಕ್ ವಿಶೇಷತೆ ಇಲ್ಲಿದೆ title=
Suzuki Hayabusa Next Gen India Launch (File Photo)

ನವದೆಹಲಿ:  Suzuki Hayabusa India Launch - ಸ್ಪೋರ್ಟ್ಸ್ ಬೈಕ್ ಪ್ರಿಯರಿಗೆ ಸಂತಸದ ಸುದ್ದಿ ಪ್ರಕಟವಾಗಿದೆ. ಜಪಾನ್ ವಾಹನ ತಯಾರಕ ಕಂಪನಿ ಸುಜುಕಿ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ ನಲ್ಲಿ ಕಂಪನಿ ತನ್ನ Suzuki Hayabusa Next Generation Model ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಕಂಪನಿ ಈ ಬೈಕ್‌ನ ಕಿರು ಟೀಸರ್ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದ್ದು, ಇದರಲ್ಲಿ ಬೈಕ್‌ನ ಸೈಡ್ ಪ್ಯಾನಲ್ ತೋರಿಸಲಾಗಿದೆ.

ಈ ಕಿರು ವಿಡಿಯೋದಲ್ಲಿ ಗ್ಲಾಸ್ ಸ್ಪಾರ್ಕಲ್ ಬ್ಲಾಕ್/ಕ್ಯಾಂಡಿ ಗೋಲ್ಡ್ ಕಲರ್ ಬೈಕ್ ನೋಡಲು ನಿಮಗೆ ಸಿಗಲಿದೆ. ಬೈಕ್ ಗೆ ಮಸ್ಕ್ಯೂಲರ್ ಫ್ಯುಯೆಲ್ ಟ್ಯಾಂಕ್, ದೊಡ್ಡ ಗಾತ್ರದ ವಿಂಡ್ ಸ್ಕ್ರೀನ್ ಬಳಕೆ ಮಾಡಲಾಗಿದೆ. ವಿಶ್ವಾದ್ಯಂತ ಈ ಸ್ಪೋರ್ಸ್ಟ್ ಬೈಕ್ ತನ್ನ ಅಧ್ಬುತ 300 ಕಿ.ಮೀ ಪ್ರತಿ ಗಂಟೆ ಸ್ಪೀಡ್ ನಿಂದ ಗುರುತಿಸಲ್ಪಡುತ್ತದೆ. ಆದರೆ ಸ್ಟ್ಯಾಂಡರ್ಡ್ ವಿಸರ್ಜನೆಯ ಮಾನದಂಡಗಳ ಆಧಾರದ ಮೇಲೆ ಹಲವು ದೇಶಗಳು ಇದನ್ನು ಡಿಸ್ ಕಂಟಿನ್ಯೂ ಮಾಡಿದ್ದವು.

ಇತ್ತೀಚೆಗಷ್ಟೇ ಕಂಪನಿ ಈ ಬೈಕ್ ನ ಮುಂದಿನ ತಲೆಮಾರಿನ ಮಾದರಿಯ ಕೆಲ ಭಾವಚಿತ್ರಗಳನ್ನು ಜಾರಿಗೊಳಿಸಿತ್ತು. ಭಾರತೀಯ ಮಾರುಕಟ್ಟೆಯಲ್ಲಿ ಈ ಬೈಕ್ ಲಗ್ಗೆ ಇಡಲಿದೆ ಎಂಬ ಚರ್ಚೆಗಳು ಕಳೆದ ಹಲವು ದಿನಗಳಿಂದ ನಡೆದಿವೆ. Suzuki Hayabusa ಬೈಕ್ ನ ಮೊದಲ ಆವೃತ್ತಿಯನ್ನು ಕಂಪನಿ 1998ರಲ್ಲಿ ಪ್ರಸ್ತುತಪಡಿಸಿತ್ತು. 2007 ರವರೆಗೆ ಈ ಬೈಕ್ (Bike) ಮಾರಾಟ ನಡೆಸಲಾಯಿತು. ಬಳಿಕ 2008ರಲ್ಲಿ ಎರಡನೇ ತಲೆಮಾರಿನ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿತು. ಅದು ಈಗಲೂ ಕೂಡ ಮಾರಾಟವಾಗುತ್ತಿದೆ. ಇದೀಗ ಕಂಪನಿ ಈ ಬೈಕ್ ನ ಮೂರನೇ ತಲೆಮಾರಿನ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದೆ.

ಇದನ್ನೂ ಓದಿ- Petrol-Diesel ಬೆಲೆ ಏರಿಕೆಯಿಂದ ನೀವೂ ಹೈರಾಣಾಗಿದ್ದೀರಾ? ಇಲ್ಲಿದೆ ಸೊಲ್ಯೂಶನ್

ವೈಶಿಷ್ಟ್ಯಗಳು - ನಿಜ ಹೇಳುವುದಾದರೆ ಈ ಬೈಕ್ ನ ವೈಶಿಷ್ಟ್ಯತೆಗಳ ಕುರಿತು ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ. ಆದರೆ, ಕಿರು ವಿಡಿಯೋ ಆಧಾರದ ಮೇಲೆ ಇದರಲ್ಲಿ LED ಹೆಡ್ ಲೈಟ್ಸ್, ಅನಲಾಗ್ ಡೈಲ್ ಸೇರಿದಂತೆ ಇನ್ಸ್ಟ್ರುಮೆಂಟ್ ಕನ್ಸೋಲ್, TFT ಮಲ್ಟಿ ಇನ್ಫೋ ಡಿಸ್ಪ್ಲೇ ನೀಡಲಾಗಿದೆ ಎಂದು ಹೇಳಬಹುದು. ಈ ಬೈಕ್ ನಲ್ಲಿ ಕಂಪನಿ ಸುಜುಕಿ ಡ್ರೈವ್ ಮೋಡ್ ಸೆಲೆಕ್ಟರ್ ಕೂಡ ನೀಡಿದೆ. ಪ್ರಿಮಿಯಂ ಬೈಕ್ ಆಗಿರುವ ಕಾರಣ ಇದರಲ್ಲಿ ಕೆಲ ಅಡ್ವಾನ್ಸ್ಡ್ ವೈಶಿಷ್ಟ್ಯಗಳನ್ನು ಕೂಡ ಸೇರಿಸಲಾಗಿದೆ.

ಇದನ್ನೂ ಓದಿ- Upcoming Electric Scooters: ಗಗನಮುಖಿಯಾದ ಪೆಟ್ರೋಲ್ ದರ, ಚಿಂತೆ ಬಿಟ್ಟು ಈ ವರದಿ ಓದಿ

ಇಂಜಿನ್ ಕ್ಷಮತೆ - ಈ ಬೈಕ್ ನ ಇಂಜಿನ್ ಸಾಮರ್ಥ್ಯದ ಬಗ್ಗೆಯೂ ಕೂಡ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ. ಆದರೆ, ಇದರಲ್ಲಿ 1450 ಸಿಸಿ ಸಾಮರ್ಥ್ಯದ ಇಂಜಿನ್ ಬಳಕೆಯಾಗಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಈ ಎಂಜಿನ್ 200 ಎಚ್,ಪಿ ಪವರ್ ಜನರೇಟ್ ಮಾಡುತ್ತದೆ ಎನ್ನಲಾಗಿದ್ದು ಇದರ ಟಾಪ್ ಸ್ಪೀಡ್ 288 ಕಿ.ಮೀ ಪ್ರತಿ ಗಂಟೆ ಇರುವ ಸಾಧ್ಯತೆ ಇದೆ. ಈ ಬೈಕ್ 6 ಸ್ಪೀಡ್ ಗಿಯರ್ ಬಾಕ್ಸ್ ಹೊಂದಿರುವ ಸಾಧ್ಯತೆ ಇದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಬೈಕ್ ಬೆಲೆ ಸುಮಾರು 20 ಲಕ್ಷ ರೂ.ಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಇದೇ ತಿಂಗಳು ಈ ಬೈಕ್ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಇದನ್ನೂ ಓದಿ -ಹೊಸ ಲುಕ್ ಜೊತೆಗೆ ಮತ್ತೆ ನಿಮ್ಮ ಮನ ಗೆಲ್ಲಲು ಬರುತ್ತಿದೆ Bajaj Pulsar 180

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News