ಮುಂಬೈ ಇಂಡಿಯನ್ಸ್ ತಂಡ ಸೇರಲು ಸೂರ್ಯಕುಮಾರ್ ಯಾದವ್ ರೆಡಿ! ಈ ಪಂದ್ಯದ ಮೂಲಕ ಮಿಸ್ಟರ್ 360 ಕಂಬ್ಯಾಕ್

IPL 2024: ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಐಪಿಎಲ್ 2024 ಆಡುತ್ತಿರುವ ಮುಂಬೈ ಇಂಡಿಯನ್ಸ್‌’ಗೆ ಇದು ತುಂಬಾ ಕೆಟ್ಟ ಆರಂಭವಾಗಿದೆ. ಈ ತಂಡ ಇದುವರೆಗೆ ಮೂರು ಪಂದ್ಯಗಳನ್ನು ಆಡಿದ್ದು, ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ.

Written by - Bhavishya Shetty | Last Updated : Apr 4, 2024, 06:49 PM IST
    • ಮುಂಬೈ ಇಂಡಿಯನ್ಸ್ ಮತ್ತು ತಂಡದ ನಾಯಕ ಹಾರ್ದಿಕ್ ಪಾಂಡ್ಯಗೆ ರಿಲೀಫ್
    • ಸೂರ್ಯಕುಮಾರ್ ಯಾದವ್ ಶೀಘ್ರದಲ್ಲೇ ತಂಡವನ್ನು ಸೇರಿಕೊಳ್ಳಲಿದ್ದಾರೆ
    • ಐಪಿಎಲ್ 2024ರ ಒಂದೇ ಒಂದು ಪಂದ್ಯವನ್ನು ಆಡಲು ಅವರಿಗೆ ಸಾಧ್ಯವಾಗಿರಲಿಲ್ಲ
ಮುಂಬೈ ಇಂಡಿಯನ್ಸ್ ತಂಡ ಸೇರಲು ಸೂರ್ಯಕುಮಾರ್ ಯಾದವ್ ರೆಡಿ! ಈ ಪಂದ್ಯದ ಮೂಲಕ ಮಿಸ್ಟರ್ 360 ಕಂಬ್ಯಾಕ್ title=
File Photo

IPL 2024: ಮುಂಬೈ ಇಂಡಿಯನ್ಸ್ ಮತ್ತು ತಂಡದ ನಾಯಕ ಹಾರ್ದಿಕ್ ಪಾಂಡ್ಯಗೆ ರಿಲೀಫ್ ಸುದ್ದಿ ಹೊರಬಿದ್ದಿದೆ. ಸೂರ್ಯಕುಮಾರ್ ಯಾದವ್ ಶೀಘ್ರದಲ್ಲೇ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದಹಾಗೆ ಸಂಪೂರ್ಣ ಫಿಟ್ ಆಗಿಲ್ಲದ ಕಾರಣ ಐಪಿಎಲ್ 2024ರ ಒಂದೇ ಒಂದು ಪಂದ್ಯವನ್ನು ಆಡಲು ಅವರಿಗೆ ಸಾಧ್ಯವಾಗಿರಲಿಲ್ಲ.

 ಇದನ್ನೂ ಓದಿ:  Chaturgrahi Yog: 500 ವರ್ಷಗಳ ಬಳಿಕ ಸೂರ್ಯಗ್ರಹಣದ ದಿನ ಅಪರೂಪದ ಚತುರ್ಗ್ರಹಿ ಯೋಗ, ನಾಲ್ಕು ರಾಶಿಗಳ ಜನರಿಗೆ ಬಂಪರ್ ಲಾಭ!

ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಐಪಿಎಲ್ 2024 ಆಡುತ್ತಿರುವ ಮುಂಬೈ ಇಂಡಿಯನ್ಸ್‌’ಗೆ ಇದು ತುಂಬಾ ಕೆಟ್ಟ ಆರಂಭವಾಗಿದೆ. ಈ ತಂಡ ಇದುವರೆಗೆ ಮೂರು ಪಂದ್ಯಗಳನ್ನು ಆಡಿದ್ದು, ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ಇದೀಗ ತಂಡಕ್ಕೆ ಮತ್ತು ಹಾರ್ದಿಕ್ ಪಾಂಡ್ಯಗೆ ಒಂದು ರಿಲೀಫ್ ಸಿಕ್ಕಂತಾಗಿದೆ.

ಪವರ್‌’ಫುಲ್ ಬ್ಯಾಟ್ಸ್‌’ಮನ್ ಸೂರ್ಯಕುಮಾರ್ ಯಾದವ್ ತಂಡವನ್ನು ಸೇರಲು ಸಿದ್ಧರಾಗಿದ್ದಾರೆ. ಕ್ರಿಕ್‌ ಬಜ್‌’ನ ವರದಿಯ ಪ್ರಕಾರ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಿಂದ ಅನುಮೋದಿಸಿದ್ದು, ಶೀಘ್ರದಲ್ಲೇ ತಂಡವನ್ನು ಸೇರಿಕೊಳ್ಳಲಿದ್ದಾರೆ.

ವಿಶ್ವ ನಂ 1 T20I ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಕೊನೆಯ ಬಾರಿಗೆ ಡಿಸೆಂಬರ್ 2023 ರಲ್ಲಿ ಕ್ರಿಕೆಟ್ ಆಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಶತಕ ಬಾರಿಸಿದ್ದರು. ಆದರೆ, ಆ ಸರಣಿಯಲ್ಲಿ ಪಾದದ ಗಾಯಕ್ಕೆ ತುತ್ತಾಗಿದ್ದು, ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಇಷ್ಟೇ ಅಲ್ಲ, ಇದರ ನಂತರ ಸೂರ್ಯಕುಮಾರ್ ಅವರು ಸ್ಪೋರ್ಟ್ಸ್ ಹರ್ನಿಯಾ ಆಪರೇಷನ್‌’ಗೆ ಒಳಗಾಗಿದ್ದರು. ಇದು ಕ್ರಿಕೆಟ್‌’ಗೆ ಮರಳಲು ಮತ್ತಷ್ಟು ವಿಳಂಬವಾಯಿತು.

 ಇದನ್ನೂ ಓದಿ: 83ನೇ ವಯಸ್ಸಿನಲ್ಲಿ 29ರ ಪ್ರೇಯಸಿಯಿಂದ 4ನೇ ಮಗುವಿಗೆ ತಂದೆಯಾದ ಖ್ಯಾತ ನಟ!

ಕ್ರಿಕ್‌ ಬಜ್ ವರದಿಯ ಪ್ರಕಾರ, ಸೂರ್ಯಕುಮಾರ್ ಯಾದವ್ ಅವರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮುಂದಿನ ಪಂದ್ಯದಲ್ಲಿ ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಈ ಪಂದ್ಯ ಏಪ್ರಿಲ್ 7 ರಂದು ಮಧ್ಯಾಹ್ನ ನಡೆಯಲಿದ್ದು, ಫಿಟ್‌ನೆಸ್ ವಿಚಾರದಲ್ಲಿ ನೆಟ್ ಸೆಷನ್‌ನಲ್ಲಿ ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎಂಬುದನ್ನು ತಿಳಿದ ನಂತರವೇ ತಂಡದ ಆಡಳಿತ ಮಂಡಳಿ ನಿರ್ಧಾರ ಕೈಗೊಳ್ಳಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News