Suryakumar Yadav: ಕೇವಲ 39 ರನ್‌ ಗಳಿಸಿದ್ರೆ ʼಈʼ ದಾಖಲೆ ಮುರಿಯಲಿರುವ ಮಿಸ್ಟರ್‌ 360 ʼಸೂರ್ಯʼ!

Suryakumar Yadav: ವಿಶ್ವದ ನಂ.2 ಟಿ-20 ಬ್ಯಾಟರ್‌ ಎಂದು ಗುರುತಿಸಿಕೊಂಡಿರುವ ಟೀಂ ಇಂಡಿಯಾದ ಸ್ಟಾರ್‌ ಆಟಗಾರ ಸೂರ್ಯಕುಮಾರ್‌ ಯಾದವ್‌ ಮತ್ತೊಂದು ದಾಖಲೆ ಬರೆಯುವ ಸನಿಹದಲ್ಲಿದ್ದಾರೆ. ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಟಿ-20 ಸರಣಿಯಲ್ಲೇ ಅವರ ಬ್ಯಾಟ್‌ನಿಂದ ದಾಖಲೆ ನಿರ್ಮಾಣವಾಗುವ ಸಾಧ್ಯತೆ ಇದೆ. 

Written by - Puttaraj K Alur | Last Updated : Oct 8, 2024, 05:50 PM IST
  • ಮತ್ತೊಂದು ದಾಖಲೆ ಬರೆಯುವ ತವಕದಲ್ಲಿ ಸೂರ್ಯಕುಮಾರ್‌ ಯಾದವ್‌
  • ಕೇವಲ 39 ರನ್‌ ಸಿಡಿಸಿದ್ರೆ 2,500 ಪೂರೈಸಲಿರುವ ʻಮಿಸ್ಟರ್‌ 360ʼ
  • ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ದಾಖಲೆ ಸಾಧ್ಯತೆ
Suryakumar Yadav: ಕೇವಲ 39 ರನ್‌ ಗಳಿಸಿದ್ರೆ ʼಈʼ ದಾಖಲೆ ಮುರಿಯಲಿರುವ ಮಿಸ್ಟರ್‌ 360 ʼಸೂರ್ಯʼ! title=
ʻಮಿಸ್ಟರ್‌ 360ʼಯಿಂದ ಮತ್ತೊಂದು ದಾಖಲೆ!

Suryakumar Yadav: ವಿಶ್ವದ ನಂ.2 ಟಿ-20 ಬ್ಯಾಟರ್‌ ಎಂದು ಗುರುತಿಸಿಕೊಂಡಿರುವ ಟೀಂ ಇಂಡಿಯಾದ ಸ್ಟಾರ್‌ ಆಟಗಾರ ಸೂರ್ಯಕುಮಾರ್‌ ಯಾದವ್‌ ಮತ್ತೊಂದು ದಾಖಲೆ ಬರೆಯುವ ತವಕದಲ್ಲಿದ್ದಾರೆ. ʻಮಿಸ್ಟರ್‌ 360ʼ ಖ್ಯಾತಿಯ ಸೂರ್ಯಕುಮಾರ್‌ ಇದುವರೆಗೆ ಆಡಿರುವ 72 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ 2,461 ರನ್‌ ಸಿಡಿಸಿದ್ದಾರೆ. ಅ.9ರಂದು ಬಾಂಗ್ಲಾದೇಶ ವಿರುದ್ಧ ನಡೆಯಲಿರುವ 2ನೇ ಟಿ-20 ಪಂದ್ಯದಲ್ಲಿ ಕೇವಲ 39 ರನ್‌ ಸಿಡಿಸಿದ್ರೆ, 2,500 ಪೂರೈಸಲಿದ್ದಾರೆ. 

ಇದರೊಂದಿಗೆ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 2,500 ರನ್‌ ಪೂರೈಸಿದ ವಿಶ್ವದ 2ನೇ ಆಟಗಾರನೆಂಬ ವಿಶೇಷ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. 67 ಪಂದ್ಯಗಳಲ್ಲಿ ಈ ಸಾಧನೆ ಮಾಡಿರುವ ಪಾಕಿಸ್ತಾನ ತಂಡದ ಮಾಜಿ ನಾಯಕ ಬಾಬರ್‌ ಆಜಂ ಅಗ್ರಸ್ಥಾನದಲ್ಲಿದ್ದಾರೆ. ಇದಲ್ಲದೇ ವಿರಾಟ್‌ ಕೊಹ್ಲಿ, ಮೊಹಮ್ಮದ್‌ ರಿಜ್ವಾನ್‌, ಆರನ್‌ ಫಿಂಚ್‌ ಮತ್ತು ಮಾರ್ಟಿನ್‌ ಗಪ್ಟಿಲ್‌ ಸಹ ಈ ಸಾಧಕರ ಪಟ್ಟಿಯಲ್ಲಿದ್ದಾರೆ. 

ಇದನ್ನೂ ಓದಿ: ಒಂದೇ ಒಂದು ಟೆಸ್ಟ್‌ ಪಂದ್ಯ... ಸತತ 5 ದಿನ ಬ್ಯಾಟಿಂಗ್!‌ ಸುದೀರ್ಘ ಇನ್ನಿಂಗ್ಸ್‌ ಆಡಿ ಕ್ರಿಕೆಟ್‌ ಜಗತ್ತನ್ನೇ ಬೆರಗಾಗಿಸಿದ ದಾಂಡಿಗನೀತ! ಇವರು ಟೀಂ ಇಂಡಿಯಾದ ದಿಗ್ಗಜನೂ ಹೌದು

ಅತಿ ವೇಗವಾಗಿ 2,500 ರನ್‌ ಪೂರೈಸಿದ ಬ್ಯಾಟ್ಸ್‌ಮನ್‌ಗಳು

ಬಾಬರ್‌ ಆಜಂ ಪಾಕಿಸ್ತಾನ 67 ಪಂದ್ಯ
ವಿರಾಟ್‌ ಕೊಹ್ಲಿ ಭಾರತ 73 ಪಂದ್ಯ
ಮೊಹಮ್ಮದ್‌ ರಿಜ್ವಾನ್‌ ಪಾಕಿಸ್ತಾನ 76 ಪಂದ್ಯ
ಆರನ್‌ ಫಿಂಚ್‌ ಆಸ್ಟ್ರೇಲಿಯಾ 78 ಪಂದ್ಯ
ಮಾರ್ಟಿನ್‌ ಗಪ್ಟಿಲ್‌ ನ್ಯೂಜಿಲೆಂಡ್ 86 ಪಂದ್ಯ

ಇದೇ ಅಕ್ಟೋಬರ್‌ 6ರಂದು ಬಾಂಗ್ಲಾದೇಶ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಟಿ-20 ಸರಣಿಯನ್ನು 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಈ ಪಂದ್ಯದಲ್ಲಿ ನಾಯಕನಾಗಿ ಸೂರ್ಯಕುಮಾರ್‌ ಯಾದವ್‌ 14 ಎಸೆತಗಳಲ್ಲಿ 29 ರನ್‌ ಬಾರಿಸಿದ್ದರು. ಇದೀಗ ಅವರು ಮತ್ತೊಂದು ದಾಖಲೆ ನಿರ್ಮಿಸುವ ಸನಿಹದಲ್ಲಿದ್ದಾರೆ.

ಇದನ್ನೂ ಓದಿ: ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲಿ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿದ್ದು ಯಾರು? ಬುಮ್ರಾ, ಶಮಿ, ಪಾಂಡ್ಯ ಖಂಡಿತ ಅಲ್ಲ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News