ಟಿ20 ಪಂದ್ಯ ಮುಗಿಸಿ ಹಿಂತಿರುಗುವಾಗ ಬಸ್’ನಲ್ಲಿ ಸೂರ್ಯಕುಮಾರ್-ಅರ್ಶದೀಪ್ ಜಗಳ: ವಿಡಿಯೋ ವೈರಲ್

Suryakumar-Arshadeep fight: ಸೂರ್ಯ ಅವರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಅರ್ಷ್‌ದೀಪ್ ಸಿಂಗ್ ಮೇಲೆ ಕೋಪಗೊಂಡಿದ್ದಾರೆ. ಈ ವಿಡಿಯೋ ಅಂತರ್ಜಾಲದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಸೂರ್ಯನ ಈ ಕೋಪವನ್ನು ಹೊರಗಿನಿಂದ ಅಭಿಮಾನಿಯೊಬ್ಬ ಶೂಟ್ ಮಾಡಿ ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಿದ್ದಾನೆ.

Written by - Bhavishya Shetty | Last Updated : Dec 16, 2023, 03:40 PM IST
    • ಮೈದಾನದ ಹೊರಗೆ ಸೂರ್ಯಕುಮಾರ್ ಯಾದವ್ ವಿಭಿನ್ನ ರೂಪ
    • ಸೂರ್ಯ ಅವರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ
    • ಮೂರನೇ ಟಿ20 ಪಂದ್ಯ ಮುಗಿಸಿ ಹಿಂತಿರುಗುತ್ತಿದ್ದಂತೆ ಈ ಘಟನೆ ನಡೆದಿದೆ
ಟಿ20 ಪಂದ್ಯ ಮುಗಿಸಿ ಹಿಂತಿರುಗುವಾಗ ಬಸ್’ನಲ್ಲಿ ಸೂರ್ಯಕುಮಾರ್-ಅರ್ಶದೀಪ್ ಜಗಳ: ವಿಡಿಯೋ ವೈರಲ್  title=
Suryakumar Yadav

Suryakumar-Arshadeep fight: ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ನಾಯಕನಾಗಿ ಹೆಚ್ಚು ಇಷ್ಟವಾಗಿದ್ದರು. ತಮ್ಮ ಬ್ಯಾಟಿಂಗ್ ಜೊತೆಗೆ ನಾಯಕತ್ವದಿಂದಲೂ ಅಭಿಮಾನಿಗಳ ಮನಗೆದ್ದಿದ್ದರು ಯಾದವ್. ಮೈದಾನದಲ್ಲಿ ಸೂರ್ಯ ತುಂಬಾ ಕೂಲ್ ಸ್ಟೈಲ್‌’ನಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರು. ಆದರೆ ಮೈದಾನದ ಹೊರಗೆ ಸೂರ್ಯಕುಮಾರ್ ಯಾದವ್ ಅವರ ವಿಭಿನ್ನ ರೂಪ ಕಂಡುಬಂದಿತು.

ಇದನ್ನೂ ಓದಿ: ತಂದೆಯ ಸಾಧನೆ ಬಗ್ಗೆ ಕೇಳಿದ ಸಣ್ಣ ಪ್ರಶ್ನೆಗೆ ಉತ್ತರಿಸದ ಸುಹಾನಾ ಖಾನ್‌..! ಬಿಗ್‌ ಬಿ ಶಾಕ್‌

ಸೂರ್ಯ ಅವರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಅರ್ಷ್‌ದೀಪ್ ಸಿಂಗ್ ಮೇಲೆ ಕೋಪಗೊಂಡಿದ್ದಾರೆ. ಈ ವಿಡಿಯೋ ಅಂತರ್ಜಾಲದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಸೂರ್ಯನ ಈ ಕೋಪವನ್ನು ಹೊರಗಿನಿಂದ ಅಭಿಮಾನಿಯೊಬ್ಬ ಶೂಟ್ ಮಾಡಿ ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಿದ್ದಾನೆ. ಸೂರ್ಯ ಯಾವುದೋ ವಿಷಯಕ್ಕೆ ಅರ್ಷದೀಪ್‌’ಗೆ ಬೈಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆದರೆ, ಸೂರ್ಯ ಕೋಪಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ.

 

ಇದನ್ನೂ ಓದಿ:  Bumrah Fitness Secrets: ದೇಹವನ್ನು ಫಿಟ್ ಆಗಿಡಲು ಜಸ್ಪ್ರೀತ್‌ ಬುಮ್ರಾ ಮಾಡ್ತಾರೆ ಈ ವರ್ಕೌಟ್!

ಮೂರನೇ ಟಿ20 ಪಂದ್ಯ ಮುಗಿಸಿ ಹಿಂತಿರುಗುತ್ತಿದ್ದಂತೆ ಈ ಘಟನೆ ನಡೆದಿದೆ. ಈ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ 2 ಓವರ್‌ಗಳಲ್ಲಿ 15.50 ಎಕಾನಮಿಯಲ್ಲಿ 31 ರನ್ ನೀಡಿ ಯಾವುದೇ ವಿಕೆಟ್ ಪಡೆಯಲಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News