ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮತ್ತು ರಾಜ್ಯ ಕ್ರಿಕೆಟ್ ಸಂಘಗಳ ಸುಧಾರಣೆಯ ಕುರಿತು ಇಂದು ಸುಪ್ರೀಂ ಕೋರ್ಟ್‌ನಲ್ಲಿ ಯಾವುದೇ ವಿಚಾರಣೆ ನಡೆದಿಲ್ಲ. ಈ ಪ್ರಕರಣವನ್ನು ಸುಪ್ರೀಂ ಕೋರ್ಟ್‌ನಲ್ಲಿ ಇದೀಗ ಎರಡು ವಾರಗಳ ನಂತರ ಕೈಗೆತ್ತಿಕೊಳ್ಳಲಿದೆ. ಕಳೆದ ವರ್ಷ ಚುನಾಯಿತ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾಹ್ ಅವರ ಅಧಿಕಾರಾವಧಿಯನ್ನು ವಿಸ್ತರಿಸುವಂತೆ ಬಿಸಿಸಿಐ ಸುಪ್ರೀಂ ಕೋರ್ಟ್ ನಲ್ಲಿ ಮನವಿ ಸಲ್ಲಿಸಿದೆ. ಇದುವರೆಗೆ ಅಧಿಕಾರಾವಧಿಗೆ ಅನುಗುಣವಾಗಿ ಅಧಿಕಾರಿಯನ್ನು ಹುದ್ದೆಯಿಂದ ಬೇರ್ಪಡಿಸುವ ನಿರ್ಧಾರ ಬಿಸಿಸಿಐ ಬಯಸಿದೆ.
ಲೋಧಾ ಸಮಿತಿಯ ಶಿಫಾರಸುಗಳ ಪ್ರಕಾರ, ಒಂದು ರಾಜ್ಯದ ಕ್ರಿಕೆಟ್ ಅಸೋಸಿಯೇಷನ್ ಮತ್ತು ಬಿಸಿಐ ಸೇರಿದಂತೆ 6 ವರ್ಷಗಳ ಕಾಲ ಅಧಿಕಾರ ವಹಿಸಿಕೊಂಡ ವ್ಯಕ್ತಿಯು 3 ವರ್ಷಗಳವರೆಗೆ ಯಾವುದೇ ಹುದ್ದೆಯನ್ನು ಅಲಂಕರಿಸುವಂತಿಲ್ಲ. ಗಂಗೂಲಿ ಬಿಸಿಸಿಐನಲ್ಲಿ ಅಧಿಕಾರ ವಹಿಸಿಕೊಳ್ಳುವ ಮೊದಲು ಬಂಗಾಳ ಕ್ರಿಕೆಟ್ ಮಂಡಳಿ ಮತ್ತು ಜಯ್ ಶಾಹ್ ಗುಜರಾತ್ ಕ್ರಿಕೆಟ್ ಮಂಡಳಿಯಲ್ಲಿ ಅಧಿಕಾರಿಯಾಗಿದ್ದರು. ಈ ನಿಟ್ಟಿನಲ್ಲಿ ಇಬ್ಬರೂ 6 ವರ್ಷಗಳಿಂದ ಅಧಿಕಾರಿಗಳಾಗಿದ್ದಾರೆ ಎನ್ನಲಾಗಿದೆ.
ಆದರೆ ಈ ಕುರಿತು ಹೇಳಿಕೆ ನೀಡಿರುವ ಆದರೆ, ಬಿಹಾರ ಕ್ರಿಕೆಟ್ ಅಸೋಸಿಯೇಶನ್ (ಸಿಎಬಿ) ಕಾರ್ಯದರ್ಶಿ ಮತ್ತು ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಅರ್ಜಿದಾರ ಆದಿತ್ಯ ವರ್ಮಾ, ಸೌರವ್ ಗಂಗೂಲಿ ಮತ್ತು ಜಯ್ ಶಾಹ್ ಅವರ ಕೂಲಿಂಗ್-ಆಫ್ ಅವಧಿಯನ್ನು ತೆಗೆದುಹಾಕುವ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ನಡೆಯುವ ವಿಚಾರಣೆಯ ವೇಳೆ ತಮ್ಮ ವಕೀಲರು ಅದನ್ನು ವಿರೋಧಿಸುವುದಿಲ್ಲ ಎಂದಿದ್ದಾರೆ.
ಸಿಎಬಿ ಕಾರ್ಯದರ್ಶಿಯಾಗಿರುವ ವರ್ಮಾ ಅವರು 2013 ರ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಮೂಲ ಅರ್ಜಿದಾರರಾಗಿದ್ದಾರೆ. ಈ ಪ್ರಕರಣದ ನಂತರ, ಸುಪ್ರೀಂ ಕೋರ್ಟ್ ಲೋಧಾ ಸಮಿತಿಯನ್ನು ರಚಿಸಿತ್ತು. ಸಮಿತಿಯ ಶಿಫಾರಸುಗಳ ಮೇರೆಗೆ ವಿಶ್ವದ ಶ್ರೀಮಂತ ಮಂಡಳಿಯ ಸಂವಿಧಾನದಲ್ಲಿ ಆಮೂಲಾಗ್ರ ಸುಧಾರಣೆಗಳನ್ನು ಮಾಡಲಾಗಿದೆ. ಗಂಗೂಲಿ ಮತ್ತು ಷಾಹ್ ಅವರು ಸ್ಥಿರತೆಗಾಗಿ ಮಂಡಳಿಯಲ್ಲಿ ಉಳಿಯುವುದು ಅವಶ್ಯಕ ಎಂದು ವರ್ಮಾ ಹೇಳಿದ್ದಾರೆ.
ಬಿಸಿಸಿಐ ಸಂವಿಧಾನ ಏನು ಹೇಳುತ್ತದೆ?
ಬಿಸಿಸಿಐನ ನೂತನ ಸಂವಿಧಾನದ ಪ್ರಕಾರ, ರಾಜ್ಯ ಸಂಘ ಅಥವಾ ಮಂಡಳಿಯಲ್ಲಿ ಆರು ವರ್ಷಗಳ ಅವಧಿಯ ನಂತರ ಮೂರು ವರ್ಷಗಳ ವಿರಾಮ ಅವಧಿಗೆ ಹೋಗುವುದು ಕಡ್ಡಾಯವಾಗಿದೆ. ಗಂಗೂಲಿ ಮತ್ತು ಷಾಹ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ ಮತ್ತು ನಂತರ ರಾಜ್ಯ ಮತ್ತು ರಾಷ್ಟ್ರೀಯ ಘಟಕದಲ್ಲಿ ತಮ್ಮ ಆರು ವರ್ಷಗಳ ಅಧಿಕಾರಾವಧಿಯಲ್ಲಿ ಕೇವಲ ಒಂಬತ್ತು ತಿಂಗಳುಗಳು ಮಾತ್ರ ಉಳಿದಿವೆ. ಗಂಗೂಲಿಯ ಆರು ವರ್ಷಗಳು ಈ ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಶಾಹ್ ಅವರ ಅವಧಿ ಪೂರ್ಣಗೊಂಡಿದೆ ಎಂದು ಹೇಳಲಾಗಿದೆ.